Ramayana| ರಾಮಾಯಣ ಕೇವಲ ಪುರಾಣವಲ್ಲ, ಅದೊಂದು ಮಾನವೀಯತೆಯ ಕಥೆ: ಯಶ್
x

ರಾಮಾಯಣ ಸಿನಿಮಾ ಬಗ್ಗೆ ಯಶ್ ಮನಬಿಚ್ಚಿ ಮಾತನಾಡಿದ್ದಾರೆ.

Ramayana| ರಾಮಾಯಣ ಕೇವಲ ಪುರಾಣವಲ್ಲ, ಅದೊಂದು ಮಾನವೀಯತೆಯ ಕಥೆ: ಯಶ್

ರಾಮಾಯಣ ಸಿನಿಮಾ ಬಗ್ಗೆ ಯಶ್ ಮನಬಿಚ್ಚಿ ಮಾತನಾಡಿದ್ದಾರೆ. ರಾವಣನ ಪಾತ್ರದ ಸವಾಲುಗಳು ಮತ್ತು ರಾಮಾಯಣ ಹೇಗೆ ಮಾನವೀಯತೆಯ ಕಥೆಯಾಗಿದೆ ಎಂಬುದನ್ನು ಅವರು ವಿವರಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


Click the Play button to hear this message in audio format

ರಾಮಾಯಣ ಎನ್ನುವುದು ಕೇವಲ ಕಥೆಯಲ್ಲ, ಅದು ಮಾನವೀಯತೆಯ ಮಹಾಗಾಥೆ ಎಂದು ರಾಕಿಂಗ್ ಸ್ಟಾರ್ ಯಶ್ ಬಣ್ಣಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುತ್ತಿರುವ ಯಶ್, ಈ ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣವು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟರು. ಕಳೆದ ಐದು ಸಾವಿರ ವರ್ಷಗಳಿಂದ ಈ ಕಥೆ ಜನರ ಮನಸ್ಸಿನಲ್ಲಿ ನೆಲೆಸಿದೆ ಎಂದರೆ ಅದರ ಪ್ರಾಮುಖ್ಯತೆ ಎಷ್ಟು ದೊಡ್ಡದು ಎಂಬುದು ಅರ್ಥವಾಗುತ್ತದೆ. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಮನುಷ್ಯ ಹೇಗೆ ಘನತೆಯಿಂದ ವರ್ತಿಸಬೇಕು ಎಂಬುದನ್ನು ರಾಮನ ಜೀವನ ನಮಗೆ ಕಲಿಸಿಕೊಡುತ್ತದೆ ಎಂದು ಅವರು ವಿವರಿಸಿದರು. ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡುವುದು ತಮಗೆ ಸಾಕಷ್ಟು ಸವಾಲಿನ ಕೆಲಸವಾಗಿತ್ತು ಎಂದು ಯಶ್ ಒಪ್ಪಿಕೊಂಡಿದ್ದಾರೆ.

ಈ ಐತಿಹಾಸಿಕ ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಚಿತ್ರೀಕರಣದ ಸಮಯದಲ್ಲಿ ರೇಷರ್ಸಲ್ಸ್, ಕಾಸ್ಟ್ಯೂಮ್ ಡಿಸೈನ್‌ ಮತ್ತು ಮೇಕಪ್‌ಗಾಗಿ ಸಾಕಷ್ಟು ಸಮಯ ವ್ಯಯಿಸಬೇಕಾಗಿ ಬಂತು ಎಂದು ಯಶ್ ಹೇಳಿದ್ದಾರೆ. ನಟನಾಗಿ ಇಂತಹ ವಿಭಿನ್ನ ಅನುಭವಗಳನ್ನು ಪಡೆಯುವುದು ಮತ್ತು ಹೊಸತನಕ್ಕೆ ತೆರೆದುಕೊಳ್ಳುವುದು ತಮಗೆ ತುಂಬಾ ಇಷ್ಟ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಪ್ರಸ್ತುತ ಚಿತ್ರೀಕರಣದ ಹಂತದಲ್ಲಿರುವ ಈ ಬೃಹತ್ ಚಿತ್ರವು 2026ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ.

Read More
Next Story