Shiva Rajkumar| ಅಕ್ಷಯ್ ಖನ್ನಾ ಸ್ಟೈಲ್‌ನಲ್ಲಿ ಶಿವಣ್ಣ ಡಾನ್ಸ್; ಧುರಂಧರ್ ಚಿತ್ರಕ್ಕೆ ಇವರೇ ಸೂಕ್ತ ಎಂದ ಫ್ಯಾನ್ಸ್
x

ಬರ್ತ್‌ಡೇ ಪಾರ್ಟಿಯಲ್ಲಿ 'ಧುರಂಧರ್' ಚಿತ್ರದ ರೆಹಮಾನ್ ಡಕಾಯಿತ್ ಸ್ಟೈಲ್‌ನಲ್ಲಿ ಶಿವಣ್ಣ ಭರ್ಜರಿ ನೃತ್ಯ ಮಾಡಿದ್ದಾರೆ. 

Shiva Rajkumar| ಅಕ್ಷಯ್ ಖನ್ನಾ ಸ್ಟೈಲ್‌ನಲ್ಲಿ ಶಿವಣ್ಣ ಡಾನ್ಸ್; 'ಧುರಂಧರ್' ಚಿತ್ರಕ್ಕೆ ಇವರೇ ಸೂಕ್ತ ಎಂದ ಫ್ಯಾನ್ಸ್

ಬರ್ತ್‌ಡೇ ಪಾರ್ಟಿಯಲ್ಲಿ 'ಧುರಂಧರ್' ಚಿತ್ರದ ರೆಹಮಾನ್ ಡಕಾಯಿತ್ ಸ್ಟೈಲ್‌ನಲ್ಲಿ ಶಿವಣ್ಣ ಭರ್ಜರಿ ನೃತ್ಯ! ಪೆದ್ದಿ, ಗುಮ್ಮಡಿ ನರಸಯ್ಯ ಬಯೋಪಿಕ್ ಸೇರಿ ಸಾಲು ಸಾಲು ಸಿನಿಮಾಗಳಲ್ಲಿ ಹ್ಯಾಟ್ರಿಕ್ ಹೀರೋ ಬ್ಯುಸಿಯಾಗಿದ್ದಾರೆ.


Click the Play button to hear this message in audio format

'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಇತ್ತೀಚೆಗೆ ಅವರು ಕುಮಾರ್ ಗೌಡ ಎಂಬುವವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾಗ ಹಾಕಿದ ಸಖತ್ ಸ್ಟೆಪ್ಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬಾಲಿವುಡ್‌ನ ಇತ್ತೀಚಿನ ಹಿಟ್ ಸಿನಿಮಾ ‘ಧುರಂಧರ್’ನಲ್ಲಿ ನಟ ಅಕ್ಷಯ್ ಖನ್ನಾ ಅವರು 'ರೆಹಮಾನ್ ಡಕಾಯಿತ್' ಎಂಬ ವಿಶಿಷ್ಟ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರ ನೃತ್ಯ ಮತ್ತು ಮ್ಯಾನರಿಸಂ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದೇ ಹಾಡಿಗೆ ಶಿವರಾಜ್‌ಕುಮಾರ್ ಅವರು ಕುಮಾರ್ ಗೌಡ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಶಿವಣ್ಣ ಅವರ ಆ ಅದ್ಭುತ ನೃತ್ಯವನ್ನು ನೋಡಿದ ನೆಟ್ಟಿಗರು ಮತ್ತು ಅಭಿಮಾನಿಗಳು ಬೆರಗಾಗಿದ್ದು, ‘ಧುರಂಧರ್’ ಚಿತ್ರದ ರೆಹಮಾನ್ ಡಕಾಯಿತ್ ಪಾತ್ರಕ್ಕೆ ಶಿವಣ್ಣ ಅವರೇ ಸೂಕ್ತ ಆಯ್ಕೆಯಾಗಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಈಗಾಗಲೇ ಶಿವರಾಜ್‌ಕುಮಾರ್ ಅವರು ಜನಪ್ರಿಯರಾಗಿದ್ದಾರೆ. ಒಂದು ವೇಳೆ ಅವರು ‘ಧುರಂಧರ್’ ಚಿತ್ರದಲ್ಲಿ ನಟಿಸಿದ್ದರೆ, ಆ ಸಿನಿಮಾ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತಿತ್ತು ಎನ್ನುವುದು ಸಿನಿಮಾ ಪ್ರೇಮಿಗಳ ಮಾತು.

ಕನ್ನಡ ಚಿತ್ರರಂಗದ 'ಕರುನಾಡ ಚಕ್ರವರ್ತಿ' ಶಿವರಾಜ್‌ಕುಮಾರ್ ಅವರು ಸಾಲು ಸಾಲು ಆಸಕ್ತಿದಾಯಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಅರ್ಜುನ್ ಜನ್ಯ ನಿರ್ದೇಶನದ ಬಹುತಾರಾಗಣದ '45' ಸಿನಿಮಾ ತೆರೆಕಂಡು ಪ್ರೇಕ್ಷಕರ ಗಮನ ಸೆಳೆದ ಬೆನ್ನಲ್ಲೇ, ಅವರ ಮುಂದಿನ ಚಿತ್ರಗಳ ಬಗ್ಗೆ ಗಾಂಧಿನಗರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಪ್ರಖ್ಯಾತ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಬಯೋಪಿಕ್‌ನಲ್ಲೂ ಶಿವಣ್ಣ ನಟಿಸುತ್ತಿದ್ದು, ಈ ಸಿನಿಮಾ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಎಂ.ಜಿ. ಶ್ರೀನಿವಾಸ್ ಅವರ 'ಘೋಸ್ಟ್' ಚಿತ್ರದ ಮುಂದುವರಿದ ಭಾಗ ಹಾಗೂ ಸಿಂಪಲ್ ಸುನಿ ನಿರ್ದೇಶನದ 'ಮನಮೋಹಕ' ಕೂಡ ಅವರ ಪಟ್ಟಿಯಲ್ಲಿದೆ.

Read More
Next Story