
ರುಕ್ಮಿಣಿ ವಸಂತ್ ಅವರ ಹೊಸ ಸ್ಟುಡಿಯೋ ಫೋಟೋಶೂಟ್ ವೈರಲ್ ಆಗಿದೆ.
Rukmini Vasanth|ಕಾಂತಾರ ಬೆಡಗಿ ರುಕ್ಮಿಣಿ ವಸಂತ್ ಗೋಲ್ಡನ್ ಫೋಟೋಶೂಟ್ ವೈರಲ್
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ರುಕ್ಮಿಣಿ ವಸಂತ್, ಈಗ ಚಿನ್ನದ ಬಣ್ಣದ ಉಡುಪಿನಲ್ಲಿ ಅದ್ಭುತವಾಗಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ.
ಕನ್ನಡ ಚಿತ್ರರಂಗದ 'ಸಪ್ತ ಸಾಗರದಾಚೆ ಎಲ್ಲೋ', ಕಾಂತಾರಾ 1 ಚಿತ್ರಗಳ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದ ನಟಿ ರುಕ್ಮಿಣಿ ವಸಂತ್, ಈಗ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಫೊಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿನ್ನದ ಬಣ್ಣದ ಉಡುಪಿನಲ್ಲಿ ಅವರ ತೀಕ್ಷ್ಣ ನೋಟ ಮತ್ತು ಗಾಂಭೀರ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ.
2019ರಲ್ಲಿ 'ಬೀರಬಲ್' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ರುಕ್ಮಿಣಿ, ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿನ ಮನು ಪಾತ್ರಕ್ಕಾಗಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ನಂತರ ಬಘೀರ ಭೈರತಿ ರಣಗಲ್ ಮತ್ತು ಕಾಂತಾರ 1 ಚಿತ್ರಗಳ ಯಶಸ್ಸಿನೊಂದಿಗೆ ಅವರು ಕನ್ನಡದ ಯಶಸ್ವಿ ನಟಿಯಾಗಿ ಹೊರಹೊಮ್ಮಿದರು.
ಸದ್ಯ ರುಕ್ಮಿಣಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಈ ಸಿನಿಮಾ ಇದೇ ಜೂನ್‌ನಲ್ಲಿ ಜಾಗತಿಕವಾಗಿ ತೆರೆಗೆ ಬರಲಿದೆ. ಇದರ ಬೆನ್ನಲ್ಲೇ ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಮತ್ತು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್‌ನ 'ಡ್ರ್ಯಾಗನ್' ಚಿತ್ರಕ್ಕೂ ರುಕ್ಮಿಣಿ ನಾಯಕಿಯಾಗಿ ಆಯ್ಕೆಯಾಗಿದ್ದು, ಪ್ಯಾನ್-ಇಂಡಿಯಾ ತಾರೆಯಾಗಿ ಬೆಳೆಯುತ್ತಿದ್ದಾರೆ.
ಕೇವಲ ಕನ್ನಡ ಮತ್ತು ತೆಲುಗು ಮಾತ್ರವಲ್ಲದೆ, ತಮಿಳು ಚಿತ್ರರಂಗದಲ್ಲೂ ರುಕ್ಮಿಣಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ವಿಜಯ್ ಸೇತುಪತಿ ಜೊತೆಗಿನ 'ಏಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ 'ಕಾಂತಾರ: ಚಾಪ್ಟರ್ 1' ನಲ್ಲಿ ರಾಜಕುಮಾರಿ ಕನಕವತಿಯಾಗಿ ಅಭಿನಯಿಸಿರುವ ಇವರು, ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ.

