ರಚಿತಾ ರಾಮ್ ಸಿನಿಪಯಣಕ್ಕೆ 14 ವರ್ಷ: ಮಂಗಳೂರಿನಲ್ಲಿ ಕೊರಗಜ್ಜ ಸೇವೆ
x

ರಚಿತಾ ರಾಮ್ ಮಂಗಳೂರಿನ ಬೆಂಜನಪದವು ಕ್ಷೇತ್ರದಲ್ಲಿ ನಾಳೆ ಕೊರಗಜ್ಜನ ಹರಕೆ ಕೋಲ ಸೇವೆ ನೀಡಲಿದ್ದಾರೆ. 

ರಚಿತಾ ರಾಮ್ ಸಿನಿಪಯಣಕ್ಕೆ 14 ವರ್ಷ: ಮಂಗಳೂರಿನಲ್ಲಿ ಕೊರಗಜ್ಜ ಸೇವೆ

ಸ್ಯಾಂಡಲ್‌ವುಡ್ ಬುಲ್‌ಬುಲ್ ರಚಿತಾ ರಾಮ್ ಚಿತ್ರರಂಗಕ್ಕೆ ಬಂದು 14 ವರ್ಷ. ವಿಶೇಷ ಸಂಭ್ರಮದ ನಡುವೆ ಮಂಗಳೂರಿನ ಬೆಂಜನಪದವು ಕ್ಷೇತ್ರದಲ್ಲಿ ನಾಳೆ ಕೊರಗಜ್ಜನ ಹರಕೆ ಕೋಲ ನೀಡಲಿರುವ ಡಿಂಪಲ್ ಕ್ವೀನ್.


ಕನ್ನಡ ಚಿತ್ರರಂಗದ 'ಡಿಂಪಲ್ ಕ್ವೀನ್' ರಚಿತಾ ರಾಮ್ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರಂತೆ ಇವರು ಕೂಡ ತುಳುನಾಡಿನ ದೈವವಾದ ಕೊರಗಜ್ಜನ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಇದರ ಭಾಗವಾಗಿ ಅವರು ಮಂಗಳೂರಿನ ಬಂಟ್ವಾಳ ತಾಲೂಕಿನ ಬೆಂಜನಪದವು ಕೊರಗಜ್ಜ ಕ್ಷೇತ್ರದಲ್ಲಿ ಹರಕೆಯ ಕೋಲ ಸೇವೆಯನ್ನು ಶನಿವಾರ ನೆರವೇರಿಸಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಸೇವೆಯೂ ನಡೆಯಲಿದೆ.

ರಚಿತಾ ರಾಮ್ ಅವರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 14 ವರ್ಷಗಳು ಕಳೆದಿದ್ದರೂ, ಅವರ ಜನಪ್ರಿಯತೆ ಮತ್ತು ಬೇಡಿಕೆ ಎಳ್ಳಷ್ಟೂ ಕುಗ್ಗಿಲ್ಲ. ಸಾಮಾನ್ಯವಾಗಿ ನಾಯಕಿಯರು ಇಷ್ಟು ದೀರ್ಘಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವುದು ಅಪರೂಪ, ಆದರೆ ರಚಿತಾ ತಮ್ಮ ಗ್ಲಾಮರ್ ಮತ್ತು ಅಭಿನಯದ ಮೂಲಕ ಇಂದಿಗೂ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.

ರಚಿತಾ ರಾಮ್ ಅವರ ಬಣ್ಣದ ಬದುಕಿನ ಪಯಣ ಆರಂಭವಾಗಿದ್ದು 13 ವರ್ಷಗಳ ಹಿಂದೆ ಬಿಡುಗಡೆಯಾದ 'ಬುಲ್ ಬುಲ್' ಚಿತ್ರದ ಮೂಲಕ. 2013ರ ಮೇ 10ರಂದು ತೆರೆಕಂಡ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೋಡಿಯಾಗಿ ನಟಿಸುವ ಮೂಲಕ ಅವರು ಭರ್ಜರಿ ಎಂಟ್ರಿ ನೀಡಿದರು. ಎಂ.ಡಿ. ಶ್ರೀಧರ್ ನಿರ್ದೇಶನದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಹಲವು ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದರು. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡ ಈ ಸಿನಿಮಾ ರಚಿತಾ ಅವರ ವೃತ್ತಿಜೀವನಕ್ಕೆ ಗಟ್ಟಿಯಾದ ಬುನಾದಿ ಹಾಕಿತು.

ಸಿನಿಮಾ ಲೋಕಕ್ಕೆ ಬರುವ ಮೊದಲು ರಚಿತಾ ಅವರು ಕಿರುತೆರೆಯ 'ಅರಸಿ' ಧಾರಾವಾಹಿಯ ಮೂಲಕ ಪರಿಚಿತರಾಗಿದ್ದರು. ಆಗ ಅವರ ಹೆಸರು 'ವಿಂದ್ಯಾ ರಾಮ್' ಎಂದಿತ್ತು. ಆದರೆ ಬೆಳ್ಳಿತೆರೆಯ ಪ್ರವೇಶದ ಸಂದರ್ಭದಲ್ಲಿ ಅವರು ತಮ್ಮ ಹೆಸರನ್ನು ರಚಿತಾ ರಾಮ್ ಎಂದು ಬದಲಾಯಿಸಿಕೊಂಡರು. ಅಂದಿನಿಂದ ಈ ಹೆಸರು ಕನ್ನಡದ ಮನೆಮಾತಾಗಿದೆ. ಸುದೀಪ್, ದರ್ಶನ್, ಉಪೇಂದ್ರ ಮತ್ತು ನೀನಾಸಂ ಸತೀಶ್ ಅವರಂತಹ ಸಾಲು ಸಾಲು ಸ್ಟಾರ್ ನಟರ ಜೊತೆ ನಟಿಸಿರುವ ಅವರು, ಹೊಸ ನಾಯಕಿಯರ ಪೈಪೋಟಿಯ ನಡುವೆಯೂ ತಮ್ಮ ವಿಶೇಷ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

Read More
Next Story