
ದುನಿಯಾ ವಿಜಯ್ ಅಭಿನಯದ 'ಲ್ಯಾಂಡ್ಲಾರ್ಡ್' ಸಿನಿಮಾ ಈಗ ಜೀ5 ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ.
Duniya Vijay ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್ʼ ಒಟಿಟಿಯಲ್ಲಿ ಬಿಡುಗಡೆ
Landlord Movie|'ಲ್ಯಾಂಡ್ಲಾರ್ಡ್' ಸಿನಿಮಾ 1980ರ ದಶಕದ ಗ್ರಾಮೀಣ ಕರ್ನಾಟಕದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಭೂಮಿ, ಹಕ್ಕು ಮತ್ತು ನ್ಯಾಯದ ಸುತ್ತ ಈ ಚಿತ್ರದ ಕಥಾಹಂದರ ಸಾಗುತ್ತದೆ.
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ 'ಲ್ಯಾಂಡ್ಲಾರ್ಡ್'ದುನಿಯಾ ವಿಜಯ್ ಅಭಿನಯದ 'ಲ್ಯಾಂಡ್ಲಾರ್ಡ್' ಸಿನಿಮಾ ಈಗ ಜೀ5 ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಜೀ5 ಈಗಾಗಲೇ ಅಧಿಕೃತ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದು, ಮಾರ್ಚ್ 13ರಂದು ಸ್ಟ್ರೀಮಿಂಗ್ ಆರಂಭವಾಗುವ ಸಾಧ್ಯತೆಯಿದೆ. ಪ್ರೋಮೋದಲ್ಲಿ ನಿಖರವಾದ ದಿನಾಂಕವನ್ನು ಉಲ್ಲೇಖಿಸದಿದ್ದರೂ, ಅತೀ ಶೀಘ್ರದಲ್ಲಿ ಸಿನಿಮಾ ಪ್ರಸಾರವಾಗಲಿದೆ ಎಂಬ ಮಾಹಿತಿ ನೀಡಲಾಗಿದೆ.
ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರು 'ರಾಚಯ್ಯ' ಎಂಬ ಪಾತ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಜೀವ ತುಂಬಿದ್ದಾರೆ. ಅವರಿಗೆ ಎದುರಾಳಿಯಾಗಿ ಅಂದರೆ ವಿಲನ್ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರು 'ಸಣ್ಣ ಧಣಿ' ಎಂಬ ಪಾತ್ರದ ಮೂಲಕ ಅಬ್ಬರಿಸಿದ್ದಾರೆ. ಇನ್ನು ನಟಿ ರಚಿತಾ ರಾಮ್ ಅವರು ಈ ಚಿತ್ರದಲ್ಲಿ 'ನಿಂಗವ್ವ' ಎಂಬ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ಅವರು 'ಭಾಗ್ಯ' ಎಂಬ ಪಾತ್ರದ ಮೂಲಕ ಈ ಚಿತ್ರದ ಮೂಲಕವೇ ಬೆಳ್ಳಿಪರೆದೆಗೆ ಪದಾರ್ಪಣೆ ಮಾಡಿದ್ದಾರೆ.
'ಲ್ಯಾಂಡ್ಲಾರ್ಡ್' ಸಿನಿಮಾ 1980ರ ದಶಕದ ಗ್ರಾಮೀಣ ಕರ್ನಾಟಕದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಭೂಮಿ, ಹಕ್ಕು ಮತ್ತು ನ್ಯಾಯದ ಸುತ್ತ ಈ ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದ ನಾಯಕ ರಾಚಯ್ಯ , ತನ್ನ ಹೆಂಡತಿ ನಿಂಗವ್ವ ಮತ್ತು ಮಗಳು ಭಾಗ್ಯ ಜೊತೆ ನೆಮ್ಮದಿಯಾಗಿ ಬದುಕಲು ಬಯಸುವ ಸಾಮಾನ್ಯ ಕಾರ್ಮಿಕ. ತನ್ನ ಪಾಲಿಗೂ ಒಂದು ಪುಟ್ಟ ಭೂಮಿ ಇರಬೇಕು ಎಂಬುದು ಆತನ ಕನಸು. ಇಡೀ ಊರನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಕ್ರೂರ ಭೂಮಾಲೀಕ 'ಸಣ್ಣ ಧಣಿ' ವಿರುದ್ಧ ರಾಚಯ್ಯ ಹೇಗೆ ಸಿಡಿದು ನಿಲ್ಲುತ್ತಾನೆ ಮತ್ತು ಸಂವಿಧಾನದ ಅರಿವಿನೊಂದಿಗೆ ತನ್ನ ಹಕ್ಕುಗಳನ್ನು ಹೇಗೆ ಪಡೆದುಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ.
ಈ ಸಿನಿಮಾದಲ್ಲಿ ದುನಿಯಾ ವಿಜಯ್, ರಾಜ್ ಬಿ. ಶೆಟ್ಟಿ, ರಚಿತಾ ರಾಮ್, ರಿತನ್ಯಾ ವಿಜಯ್ ಸೇರಿದಂತೆ, ಉಮಾಶ್ರೀ, ಅಚ್ಯುತ್ ಕುಮಾರ್, ಶಿಶಿರ್ ಬೈಕಾಡಿ ಮತ್ತು ರಾಕೇಶ್ ಅಡಿಗ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸ್ವಾಮಿ ಜೆ. ಗೌಡ ಅವರ ಛಾಯಾಗ್ರಹಣವಿದೆ. ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕೆ.ವಿ. ಸತ್ಯಪ್ರಕಾಶ್ ಮತ್ತು ಕೆ.ಎಸ್. ಸೂರಜ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಜನವರಿ 23ರಂದು ತೆರೆಕಂಡಿತ್ತು.

