43ನೇ ವರ್ಷಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ; ಪರಂವಃ ಸಂಸ್ಥೆಯಿಂದ ವಿಶೇಷ ವಿಡಿಯೋ ಬಿಡುಗಡೆ
x

43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ.

43ನೇ ವರ್ಷಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ; ಪರಂವಃ ಸಂಸ್ಥೆಯಿಂದ ವಿಶೇಷ ವಿಡಿಯೋ ಬಿಡುಗಡೆ

ನಟ ರಕ್ಷಿತ್ ಶೆಟ್ಟಿ 43ನೇ ಜನ್ಮದಿನಕ್ಕೆ ಪರಂವಃ ಸಂಸ್ಥೆ ವಿಡಿಯೋ ಹಂಚಿಕೊಂಡಿದೆ. ರಿಚರ್ಡ್ ಆ್ಯಂಟೋನಿ ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click the Play button to hear this message in audio format

ಚಂದನವನದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ತಮ್ಮದೇ ಬೇಡಿಕೆ ಹೊಂದಿರುವ ರಕ್ಷಿತ್ ಶೆಟ್ಟಿ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರತಿಭಾನ್ವಿತ ತಾರೆಗೆ ಕಟುಂಬಸ್ಥರು, ಆತ್ಮೀಯ ಸ್ನೇಹಿತರು, ಚಿತ್ರರಂಗದ ಸಹುದ್ಯೋಗಿಗಳೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸಿಂಪಲ್‌ ಸ್ಟಾರ್‌ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್ ಕೂಡಾ ವಿಡಿಯೋ ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದೆ.

ರಕ್ಷಿತ್​ ಶೆಟ್ಟಿ ಸಿನಿಮಾಗಳ ಪ್ರಮುಖ ದೃಶ್ಯಗಳನ್ನೊಳಗೊಂಡ ವಿಡಿಯೋ ಹಂಚಿಕೊಂಡ ಪರಂವಃ ಸ್ಟುಡಿಯೋಸ್, ಕೆಲವು ಪ್ರಯಾಣಗಳನ್ನು ಮೈಲಿಗಳಲ್ಲಿ ಅಳೆಯಲಾಗುತ್ತದೆ, ಇನ್ನು ಕೆಲವನ್ನು ವರ್ಷಗಳಲ್ಲಿ ಅಳೆಯಲಾಗುತ್ತದೆ. ಇನ್ನು ಕೆಲವು ಅವರು ಎಚ್ಚರಗೊಳ್ಳುವ ಕನಸಿನಲ್ಲಿ ಅಳೆಯಲಾಗುತ್ತದೆ. ಕೆಲವನ್ನು ಅವರು ಇತರರಲ್ಲಿ ಕನಸುಗಳನ್ನು ಜಾಗೃತಗೊಳಿಸುವಲ್ಲಿ ಅಳೆಯಲಾಗುತ್ತದೆ.

ದೀರ್ಘ ಪ್ರಯಾಣದಲ್ಲಿ ಸ್ಥಿರ ದೀಪದಂತೆ, ನಿಮ್ಮ ಬೆಳಕು ಕನಸುಗಾರರು ಮತ್ತು ಕಥೆಗಾರರು ತಮ್ಮದೇ ಆದ ಧ್ವನಿಯನ್ನು ನಂಬುವಂತೆ ಮಾರ್ಗದರ್ಶನ ನೀಡಿದೆ. ಮುಂಬರುವ ವರ್ಷವು ಹೊಸ ದಿಗಂತಗಳನ್ನು, ದಯೆಯ ಆತ್ಮಗಳನ್ನು ಮತ್ತು ನಿಮ್ಮ ಹೃದಯ ನಿಜವಾಗಿಯೂ ಹುಡುಕುವ ಕ್ಷಣಗಳನ್ನು ತರಲಿ. ಮುಂದಿನ ಹಾದಿಯು ನಮ್ಮಲ್ಲಿ ಅನೇಕರಿಗೆ ನೀವು ನೀಡಿದ ಅದೇ ಮ್ಯಾಜಿಕ್‌ನಿಂದ ತುಂಬಿರಲಿ. ಪರಂವಃ ಸ್ಟುಡಿಯೋಸ್‌ನ ನಮ್ಮೆಲ್ಲರಿಂದ ಕೃತಜ್ಞತೆ, ಮೆಚ್ಚುಗೆ ಮತ್ತು ಪ್ರೀತಿ ತುಂಬಿದ ಹೃದಯದಿಂದ ಹ್ಯಾಪಿ ಬರ್ತ್​ಡೇ ರಕ್ಷಿತ್ ಶೆಟ್ಟಿ ಎಂದು ಬರೆದುಕೊಂಡಿದೆ.

ಈ ಪೋಸ್ಟ್​ ಸೋಷಿಯಲ್​ ಮಿಡಿಯಾದಲ್ಲಿ ಅಪಾರ ಮೆಚ್ಚುಗೆ ಸ್ವೀಕರಿಸಿದೆ. ಜನಪ್ರಿಯ ನಾಯಕ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಅಭಿಮಾನಿಗಳು, ಮುಂದಿನ ಸಿನಿಮಾಗಳ ಮಾಹಿತಿ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಸಿನಿಪ್ರಿಯರೋರ್ವರು ಪ್ರತಿಕ್ರಿಯಿಸಿ, ನಾವು 'ರಿಚರ್ಡ್ ಆ್ಯಂಟೋನಿಗಾಗಿ ಕಾಯುತ್ತಿದ್ದೇವೆ, ಏನಾದ್ರು ಅಪ್‌ಡೇಟ್ಸ್?' ಎಂದು ತಿಳಿಸಿದ್ದಾರೆ. ಮುಂದಿನ ಸಿನಿಮಾ ಮಾಹಿತಿ ಕೇಳಿರುವ ಅಭಿಮಾನಿಯೋರ್ವರು, 'ಎಲ್ಲಿ ಶೆಟ್ರೆ ಹುಟ್ಟುಹಬ್ಬಕ್ಕಾದ್ರು ಒಂದು ಝಲಕ್ ಬಿಡಿ' ಎಂದು ಕೇಳಿದ್ದಾರೆ.

ಕಟ್ಟಾ ಅಭಿಮಾನಿಯೋರ್ವರು ರಿಯಾಕ್ಟ್​ ಮಾಡಿ, ಹ್ಯಾಪಿ ಬರ್ತ್​​ಡೇ ರಕ್ಷಿತತ ಶೆಟ್ಟಿ, ನಟ, ನಿರ್ಮಾಪಕ, ನಿರ್ದೇಶಕ ಮತ್ತು ಗೀತರಚನೆಕಾರರಾಗಿ ನಿಮ್ಮ ಉತ್ಸಾಹ, ವಿನಮ್ರತೆ ಮತ್ತು ಬಹುಮುಖ ಪ್ರತಿಭೆಯು ನಿಮ್ಮನ್ನು ಕನ್ನಡ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ನಿಮಗೆ ಸಂತೋಷ, ಉತ್ತಮ ಆರೋಗ್ಯ ಮತ್ತು ಮುಂಬರುವ ಹಲವು ಬ್ಲಾಕ್‌ಬಸ್ಟರ್ ವರ್ಷಗಳನ್ನು ಹಾರೈಸುತ್ತೇನೆ. ನಿಮ್ಮ ಕಥೆಗಳು ಮತ್ತು ಮರೆಯಲಾಗದ ಪಾತ್ರಗಳಿಂದ ನಮಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು, ನಿಮ್ಮ ಅಭಿಮಾನಿಯಾಗಿರಲು ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ರಕ್ಷಿತ್ ‌ಶೆಟ್ಟಿ ಕಳೆದ ಸೆಪ್ಟೆಂಬರ್​ನಲ್ಲಿ ಅಮೆರಿಕಾದ ಫ್ಲೊರಿಡಾದಲ್ಲಿ ನಡೆದ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಮ್ಮ ಮುಂದಿನ ಚಿತ್ರಗಳನ್ನುದ್ದೇಶಿಸಿ ಮಾತನಾಡಿದ್ದರು. ಕೆಲವೊಮ್ಮೆ ನಾವು ಮಾಡುವ ಕೆಲಸ ನಿಧಾನವಾಗಿ ಸಾಗಿದೆ ಎಂದು ಅನಿಸಬಹುದು, ದೊಡ್ಡ ಹಾಗೂ ಒಳ್ಳೆಯ ಕೆಲಸ ಮಾಡಬೇಕಾದ್ರೆ ಸಮಯ ಸಹಜವಾಗಿಯೇ ಹಿಡಿಯುತ್ತದೆ. ಅದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ನಾನು ಮತ್ತೆ ಬಂದಾಗ, ಚಿತ್ರಮಂದಿರಕ್ಕೆ ಬರದವರು ಸಹ ಚಿತ್ರಮಂದಿರಕ್ಕೆ ಬರುವಂತಹ ಸಿನಿಮಾ ಮಾಡುತ್ತೇನೆ. ನಾನು, ನನ್ನ ತಂಡ, ಪರಂವಃ ಸ್ಟುಡಿಯೋಸ್ ಎಲ್ಲರೂ ಉತ್ತಮ ಸಿನಿಮಾ ಕೊಡುವ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದ್ದರು. ಅವರ ಈ ಹೇಳಿಕೆಗಳು ಅಭಿಮಾನಿಗಳಿಗೆ ಭರವಸೆ ನೀಡಿತ್ತು.

ಇವರು 2010ರಲ್ಲಿ ನಮ್ಮ್ ಏರಿಯಲ್ ಒಂದ್ ದಿನ ಚಿತ್ರದ ಮೂಲಕ ಕನ್ನಡ ಹಿರಿತೆರೆಯಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ರು. ಆದ್ರೆ ಸಿಂಪಲ್ ಅಗಿ ಒಂದ್ ಲವ್ ಸ್ಟೋರಿ ನಟನಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ನಂತರ ಬಂದ ಗೋಧಿ ಬಣ್ಣ ಸಾಧಾರಣ ಮೈಕಟ್ಟು (2015), ಕಿರಿಕ್ ಪಾರ್ಟಿ (2016), ಅವನೇ ಶ್ರೀಮನ್ನಾರಾಯಣ (2019), 777 ಚಾರ್ಲಿ (2022), ಮತ್ತು ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ (2023), ಮತ್ತು ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿ (2023) ಅವರ ವೃತ್ತಿಜೀವನದ ಅತ್ಯುನ್ನತ ಚಿತ್ರಗಳಾಗಿವೆ. ಈ ಎಲ್ಲ ಸಿನಿಮಾಗಳೂ ಅಭೂತಪೂರ್ವ ಯಶಸ್ಸು ಕಂಡಿವೆ.

2023ರ ಕೊನೆಯಲ್ಲಿ ಬಂದ ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ ಮತ್ತು ಸೈಡ್ ಬಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ಎರಡೂವರೆ ವರ್ಷ ಕಳೆದರೂ ಇನ್ನೂ ಯಾವುದೇ ಸಿನಿಮಾದ ಅಪ್ಡೇಟ್ಸ್ ಇಲ್ಲ. ರಿಚರ್ಡ್ ಆ್ಯಂಟೋನಿ, ಪುಣ್ಯಕೋಟಿ 1 ಮತ್ತು 2, ಮಿಡ್​ ವೇ ಟು ಮೋಕ್ಷ ಸೇರಿ ಹಲವು ಸಿನಿಮಾಗಳು ರಕ್ಷಿತ್‌ ಕೈಯಲ್ಲಿದೆ ಎಂದು ಹೇಳಲಾಗಿದೆ.

Read More
Next Story