ಮಾಜಿ ಪತಿಯ ಸಹೋದರನ ಚಿತ್ರಕ್ಕೆ ಸಮಂತಾ ಶುಭ ಹಾರೈಕೆ
x

ನಟ ಅಖಿಲ್ ಅಕ್ಕಿನೇನಿ ನಟನೆಯ 'ಲೆನಿನ್' ಚಿತ್ರದ ಟ್ರೈಲರ್ ಹಂಚಿಕೊಂಡು, ಸಿನಿಮಾ ದೊಡ್ಡ ಬ್ಲಾಕ್‌ಬಸ್ಟರ್ ಆಗಲಿ ಎಂದು ನಟಿ ಸಮಂತಾ ರುತ್ ಪ್ರಭು

ಮಾಜಿ ಪತಿಯ ಸಹೋದರನ ಚಿತ್ರಕ್ಕೆ ಸಮಂತಾ ಶುಭ ಹಾರೈಕೆ

ನಟ ಅಖಿಲ್ ಅಕ್ಕಿನೇನಿ ನಟನೆಯ 'ಲೆನಿನ್' ಚಿತ್ರದ ಟ್ರೈಲರ್ ಹಂಚಿಕೊಂಡು, ಸಿನಿಮಾ ದೊಡ್ಡ ಬ್ಲಾಕ್‌ಬಸ್ಟರ್ ಆಗಲಿ ಎಂದು ನಟಿ ಸಮಂತಾ ರುತ್ ಪ್ರಭು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ.


Click the Play button to hear this message in audio format

ಟಾಲಿವುಡ್‌ನ ಬಹುನಿರೀಕ್ಷಿತ ಗ್ರಾಮೀಣ ಆಕ್ಷನ್ ಡ್ರಾಮಾ ಸಿನಿಮಾ ‘ಲೆನಿನ್’ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡಕ್ಕೆ ಸ್ಟಾರ್ ನಟಿ ಸಮಂತಾ ರುತ್ ಪ್ರಭು ವಿಶೇಷವಾಗಿ ಶುಭ ಹಾರೈಸಿದ್ದಾರೆ. ಅಖಿಲ್ ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್ ಅನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದ ಝಲಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಲ್ಲದೆ, ಈ ಸಿನಿಮಾ ಈಗಲೇ ದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ಆಗುವ ಮುನ್ಸೂಚನೆ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಸಮಂತಾ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಅಖಿಲ್ ಅಕ್ಕಿನೇನಿ ಮತ್ತು ಸಮಂತಾ ನಡುವಿನ ಬಾಂಧವ್ಯ

ಅಖಿಲ್ ಅಕ್ಕಿನೇನಿ ಅವರ ಅಣ್ಣ ನಾಗ ಚೈತನ್ಯ ಅವರನ್ನು ಸಮಂತಾ ಈ ಹಿಂದೆ ವಿವಾಹವಾಗಿದ್ದರು. ಆದರೆ ಕೆಲ ವರ್ಷಗಳ ಬಳಿಕ ಈ ಜೋಡಿ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಿತ್ತು. ವೈಯಕ್ತಿಕ ಜೀವನದಲ್ಲಿ ಏನೇ ಏರುಪೇರಾಗಿದ್ದರೂ, ಅಖಿಲ್ ಅಕ್ಕಿನೇನಿ ಮತ್ತು ಸಮಂತಾ ನಡುವಿನ ಆತ್ಮೀಯ ಬಾಂಧವ್ಯ ಹಾಗೂ ಗೌರವ ಹಾಗೇ ಉಳಿದಿದೆ ಎಂಬುದಕ್ಕೆ ಸಮಂತಾ ಅವರ ಈ ಪೋಸ್ಟ್ ಸಾಕ್ಷಿಯಾಗಿದೆ. ಮಾಜಿ ಮೈದುನನ ಹೊಸ ಸಿನಿಮಾಗೆ ಸಮಂತಾ ಮುಕ್ತವಾಗಿ ಬೆಂಬಲ ಸೂಚಿಸಿರುವುದನ್ನು ಕಂಡು ಇಬ್ಬರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸುತ್ತಿದ್ದಾರೆ. ಸದ್ಯ ಇಬ್ಬರೂ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದು, ಸಮಂತಾ ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ.

ಗ್ರಾಮೀಣ ಸೊಗಡಿನ ‘ಲೆನಿನ್’ ಚಿತ್ರದ ಹಿನ್ನೆಲೆ

ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದ ‘ಲೆನಿನ್’ ಸಿನಿಮಾ ಒಂದು ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಆಕ್ಷನ್ ಮತ್ತು ಪ್ರೇಮಕಥೆಯನ್ನು ಒಳಗೊಂಡಿದೆ. ಹಳ್ಳಿಯೊಂದರಲ್ಲಿ ನಡೆಯುವ ಭೀಕರ ಸಂಘರ್ಷಗಳ ನಡುವೆ ಅರಳುವ ಪ್ರೇಮಕಥೆಯಲ್ಲಿ ಅಖಿಲ್ ಅಕ್ಕಿನೇನಿ ಅವರಿಗೆ ಜೋಡಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಹಾಗೂ ಹಾಡುಗಳು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಅಖಿಲ್ ಮತ್ತು ಭಾಗ್ಯಶ್ರೀ ಜೋಡಿಯ ಕೆಮಿಸ್ಟ್ರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಸಮಂತಾ ಅವರ ಇತ್ತೀಚಿನ ಚಿತ್ರ ‘ಮಾ ಇಂಟಿ ಬಂಗಾರಂ’ ಕೂಡ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇದರ ನಡುವೆಯೇ ಅವರು ‘ಲೆನಿನ್’ ಚಿತ್ರಕ್ಕೆ ಪ್ರೀತಿಯ ಬೆಂಬಲ ನೀಡಿದ್ದಾರೆ.

Read More
Next Story