ಇಶಾ ಫೌಂಡೇಶನ್‌ನಲ್ಲಿ ನಟಿ ಸಮಂತಾ ಸೀಮಂತ ಸಂಭ್ರಮ: ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ನಟಿ
x

ಸಮಂತಾ ಅವರ ಸ್ನೇಹಿತೆ ಶಿಲ್ಪಾ ರೆಡ್ಡಿ ಸೇರಿದಂತೆ ಆಪ್ತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಇಶಾ ಫೌಂಡೇಶನ್‌ನಲ್ಲಿ ನಟಿ ಸಮಂತಾ ಸೀಮಂತ ಸಂಭ್ರಮ: ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ನಟಿ

ಸೀಮಂತ ಸಮಾರಂಭದಲ್ಲಿ ಸಮಂತಾ ಹಳದಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಸಮಾರಂಭದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿವೆ.


Click the Play button to hear this message in audio format

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಸಾಂಪ್ರದಾಯಿಕ 'ಕಲಾ ಆವರಣ' ವಿಧಿವಿಧಾನಗಳೊಂದಿಗೆ ತಮ್ಮ ಸೀಮಂತ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ವಿವಾಹವಾದ ಅದೇ ಸ್ಥಳದಲ್ಲಿ ಈ ಆಚರಣೆ ನಡೆದಿದೆ. ಈ ಆಧ್ಯಾತ್ಮಿಕ ಸಂಭ್ರಮದ ಸುಂದರ ಕ್ಷಣಗಳನ್ನು ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಶ್ರೀ ವಿದ್ಯಾ ಪರಂಪರೆಯ ವಿಶೇಷ ಪೂಜೆ

ಆಕರ್ಷಕ ಹಳದಿ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಸಮಂತಾ, ಶ್ರೀ ವಿದ್ಯಾ ಪರಂಪರೆಯ ಪ್ರಕಾರ ನಡೆವ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ತಾಯಿ ಮತ್ತು ಗರ್ಭದಲ್ಲಿರುವ ಮಗುವಿಗೆ ಒಳಿತಾಗಲಿ ಎಂದು ಮಂತ್ರೋಚ್ಚಾರಣೆ ಹಾಗೂ ಅಭಿಷೇಕಗಳನ್ನು ನೆರವೇರಿಸಲಾಯಿತು. ದೇಹದ ಸಪ್ತ ಚಕ್ರಗಳನ್ನು ಜಾಗೃತಗೊಳಿಸುವ ಮತ್ತು ಧನಾತ್ಮಕ ಶಕ್ತಿಯನ್ನು ನೀಡುವ ಈ ಆಚರಣೆಯು ತಮಗೆ ಹೊಸ ಅನುಭವ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಭಾವನಾತ್ಮಕ ಅನುಭವ ಹಂಚಿಕೊಂಡ ನಟಿ

ಆಚರಣೆಯ ಕುರಿತು ಮಾತನಾಡಿದ ಸಮಂತಾ, ಪ್ರಾರಂಭದಲ್ಲಿ ವಿಧಿವಿಧಾನಗಳ ಸ್ಪಷ್ಟ ಅರಿವಿಲ್ಲದೆ ಗೊಂದಲದಲ್ಲಿದ್ದರೂ, ಶ್ರೀವಿದ್ಯಾ ಪಂಡಿತರ ಮಾರ್ಗದರ್ಶನ ಹಾಗೂ ಮಂತ್ರಗಳ ಅರ್ಥ ತಿಳಿದ ಬಳಿಕ ಮನಸ್ಸಿಗೆ ತೀವ್ರ ಶಾಂತಿ ಮತ್ತು ಆಶೀರ್ವಾದದ ಅನುಭವವಾಯಿತು ಎಂದಿದ್ದಾರೆ. ಪ್ರತಿಯೊಂದು ಆಚರಣೆಯ ಹಿಂದಿರುವ ಆಧ್ಯಾತ್ಮಿಕ ಮಹತ್ವವನ್ನು ಅರ್ಥೈಸಿಕೊಂಡಾಗ ಈ ಕ್ಷಣ ಇನ್ನಷ್ಟು ವಿಶೇಷವೆನಿಸಿತು ಎಂದು ಅವರು ಹೇಳಿದ್ದಾರೆ.

ಈ ಕೌಟುಂಬಿಕ ಹಾಗೂ ಆಧ್ಯಾತ್ಮಿಕ ಸಮಾರಂಭದಲ್ಲಿ ಸಮಂತಾ ಅವರ ಆತ್ಮೀಯ ಗೆಳತಿ ಶಿಲ್ಪಾ ರೆಡ್ಡಿ ಸೇರಿದಂತೆ ಹಲವು ಆಪ್ತರು ಭಾಗವಹಿಸಿ ಶುಭ ಹಾರೈಸಿದರು. ಮುಂಬರುವ ಡಿಸೆಂಬರ್ ತಿಂಗಳಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಮ್ಮಿಲನದಂತಿದ್ದ ಈ ಸೀಮಂತದ ಫೋಟೋಗಳಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರಮುಖರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Read More
Next Story