
‘ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್‌ನಲ್ಲಿ ರಗಡ್ ಹಾಗೂ ಮಾಸ್ ಅವತಾರದಲ್ಲಿ ಮಿಂಚಿರುವ ಸ್ಟಾರ್ ನಾಯಕಿ ಸಮಂತಾ.
ಸಮಂತಾ-ದಿಗಂತ್ ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರದ ಧಮಾಕ ಟ್ರೇಲರ್ ಔಟ್
ಟಾಲಿವುಡ್ ಸ್ಟಾರ್ ನಾಯಕಿ ಸಮಂತಾ ಹಾಗೂ ಕನ್ನಡಿಗ ದಿಗಂತ್ ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರದ ಪಕ್ಕಾ ಮಾಸ್ ಟ್ರೇಲರ್ ಬಿಡುಗಡೆಯಾಗಿದ್ದು, ಜೂನ್ 19 ರಂದು ಸಿನಿಮಾ ತೆರೆಕಾಣಲಿದೆ.
ಸ್ಟಾರ್ ನಟಿ ಸಮಂತಾ ಹಾಗೂ ಕನ್ನಡಿಗ ದಿಗಂತ್ ಮಂಚಾಲೆ ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಿದೆ.
ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಗ್ರಾಮೀಣ ಹಿನ್ನೆಲೆಯ ಕೌಟುಂಬಿಕ ಆಕ್ಷನ್ ಡ್ರಾಮಾದಲ್ಲಿ ಸಮಂತಾ ಇದುವರೆಗೆ ಕಾಣಿಸಿಕೊಳ್ಳದ ಹೊಚ್ಚ ಹೊಸ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಸಮಂತಾ ಸಾಂಪ್ರದಾಯಿಕ ಸೊಸೆಯಾಗಿ ಮನೆಗೆ ಪ್ರವೇಶಿಸುವ ದೃಶ್ಯಗಳಿಂದ ಆರಂಭವಾಗಿ, ನಂತರ ತನ್ನ ಕುಟುಂಬವನ್ನು ರಕ್ಷಿಸಲು ರೌಡಿಗಳ ವಿರುದ್ಧ ತೊಡೆ ತಟ್ಟುವ ರಗಡ್ ಲುಕ್ ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಮಾಸ್ ಡೈಲಾಗ್‌ಗಳು ಮತ್ತು ಭರ್ಜರಿ ಸಾಹಸ ದೃಶ್ಯಗಳು ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿದ್ದು, ನಟಿ ಗೌತಮಿ ಮತ್ತು ಕನ್ನಡದ ನಟ ದಿಗಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜ್ ನಿಡಿಮೋರು ಕಥೆ ಬರೆದಿರುವ ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ಟ್ರೇಲರ್ ಮೂಲಕ ಸಖತ್ ಸೌಂಡ್ ಮಾಡುತ್ತಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಜೂನ್ 19 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

