ಟೀಕೆಗೆ ಗುರಿಯಾಗಿರುವ ‘ಟಾಕ್ಸಿಕ್’ - ಯಶ್‌ ಬೆಂಬಲಕ್ಕೆ ನಿಂತ ರಿಷಬ್ ಶೆಟ್ಟಿ
x

‘ಟಾಕ್ಸಿಕ್’ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೇ ರಿಷಬ್ ಶೆಟ್ಟಿ ಯಶ್‌ ಬೆಂಬಲಕ್ಕೆ ನಿಂತಿದ್ದಾರೆ.

ಟೀಕೆಗೆ ಗುರಿಯಾಗಿರುವ ‘ಟಾಕ್ಸಿಕ್’ - ಯಶ್‌ ಬೆಂಬಲಕ್ಕೆ ನಿಂತ ರಿಷಬ್ ಶೆಟ್ಟಿ

ಚಿತ್ರದ ಪಾತ್ರಕ್ಕಾಗಿ ಯಶ್‌ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ರೀತಿಯನ್ನು ರಿಷಬ್ ಶೆಟ್ಟಿ ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಜಗತ್ತಿಗೆ ಯಶ್‌ ಸಂಪೂರ್ಣವಾಗಿ ಶರಣಾಗಿರುವುದು ಪ್ರತಿಯೊಂದು ದೃಶ್ಯದಲ್ಲೂ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ.


Click the Play button to hear this message in audio format

ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಚಿತ್ರದ ಕಥೆ ಹಾಗೂ ನಿರೂಪಣೆ ಕುರಿತು ಕೆಲ ಪ್ರೇಕ್ಷಕರು ಮತ್ತು ವಿಮರ್ಶಕರು ಟೀಕೆ ವ್ಯಕ್ತಪಡಿಸುತ್ತಿರುವ ನಡುವೆಯೇ, ನಟ ರಿಷಬ್ ಶೆಟ್ಟಿ ಯಶ್‌ ಪರವಾಗಿ ಮಾತನಾಡಿದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿ ಶಕ್ತಿಶಾಲಿ ವ್ಯಕ್ತಿಯ ಹೋರಾಟವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಸಾಮಾನ್ಯ ಸಿನಿಮಾಗಳು ಸಾಗುವ ಹಾದಿಗಿಂತ ಚಿತ್ರದ ಕಥೆ ಮತ್ತು ಪಾತ್ರಗಳು ವಿಭಿನ್ನವಾಗಿರಬಹುದು. ಆದರೆ ವಿಭಿನ್ನ ಹಾದಿ ಎಂದ ಮಾತ್ರಕ್ಕೆ ಅದು ತಪ್ಪು ಎಂದರ್ಥವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಆಲೋಚನೆ ಮನಸ್ಸಿನಲ್ಲಿ ಮೂಡುವುದರಿಂದ ಹಿಡಿದು ಅದು ಸಿನಿಮಾವಾಗಿ ತೆರೆಯ ಮೇಲೆ ಮೂಡಿಬರುವವರೆಗಿನ ಪ್ರಯಾಣದ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ‘ಟಾಕ್ಸಿಕ್’ನಲ್ಲಿ ಆ ಪರಿಶ್ರಮವನ್ನು ತಾವು ಗುರುತಿಸಿದ್ದೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಯಶ್‌ ನಟನೆಗೆ ಫಿದಾ

ಚಿತ್ರದ ಪಾತ್ರಕ್ಕಾಗಿ ಯಶ್‌ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ರೀತಿಯನ್ನು ರಿಷಬ್ ಶೆಟ್ಟಿ ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ದೊಡ್ಡ ಮಟ್ಟದ ಅಭಿನಯವನ್ನು ಬೇಡುವ ಪಾತ್ರ ಮತ್ತು ಸಿನಿಮಾದ ಜಗತ್ತಿಗೆ ಯಶ್‌ ಸಂಪೂರ್ಣವಾಗಿ ಶರಣಾಗಿರುವುದು ಪ್ರತಿಯೊಂದು ದೃಶ್ಯದಲ್ಲೂ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಸಿನಿಮಾವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಯಶ್‌ ಅವರ ಪ್ರಯತ್ನದ ಮೇಲಿನ ಪ್ರೀತಿಗೆ ತಾವು ಮೆಚ್ಚಿಕೊಂಡಿರುವುದಾಗಿ ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಇದೇ ವೇಳೆ ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗೂ ನಿರ್ಮಾಪಕರಿಗೂ ಅವರು ಶುಭ ಹಾರೈಸಿದ್ದಾರೆ.

‘ಟಾಕ್ಸಿಕ್’ಗೆ ಆರಂಭದಲ್ಲೇ ಭರ್ಜರಿ ಓಪನಿಂಗ್

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಯಶ್‌ ರಾಯ್ ಅಲಿಯಾಸ್ ಟಿಕೆಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಭರ್ಜರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದಿದ್ದ ‘ಟಾಕ್ಸಿಕ್’ ಆರಂಭಿಕ ದಿನಗಳಲ್ಲಿ ಉತ್ತಮ ಗಳಿಕೆ ಕಂಡಿದ್ದರೂ, ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಿಷಬ್ ಶೆಟ್ಟಿ ನೀಡಿರುವ ಬೆಂಬಲ ಇದೀಗ ಗಮನ ಸೆಳೆದಿದೆ.

Read More
Next Story