‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಕನ ಜೊತೆ ರಿಷಬ್ ಶೆಟ್ಟಿ ಹೊಸ ಸಿನಿಮಾ
x

‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಹಾಗೂ ‘ಮಂಜುಮ್ಮೆಲ್ ಬಾಯ್ಸ್’ ನಿರ್ದೇಶಕ ಚಿದಂಬರಂ ಎರಡು ಸಿನಿಮಾಗಳಿಗೆ ಕೈಜೋಡಿಸಿದ್ದು, ಮೊದಲ ಚಿತ್ರ ಕನ್ನಡದ ಸ್ಪೋರ್ಟ್ಸ್ ಡ್ರಾಮಾ ಆಗಲಿದೆ.

‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಕನ ಜೊತೆ ರಿಷಬ್ ಶೆಟ್ಟಿ ಹೊಸ ಸಿನಿಮಾ

ರಿಷಬ್ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಪೂರ್ಣಗೊಂಡ ಬಳಿಕ ಚಿದಂಬರಂ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.


Click the Play button to hear this message in audio format

ಕಾಂತಾರ’ ಖ್ಯಾತಿಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ‘ಮಂಜುಮ್ಮೆಲ್ ಬಾಯ್ಸ್’ ಖ್ಯಾತಿಯ ಮಲಯಾಳಂ ನಿರ್ದೇಶಕ ಚಿದಂಬರಂ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಇಬ್ಬರೂ ಎರಡು ಸಿನಿಮಾಗಳಿಗಾಗಿ ಕೈಜೋಡಿಸಲಿದ್ದಾರೆ ಎಂದು ವರದಿಯಾಗಿದೆ.

ರಿಷಬ್ ಶೆಟ್ಟಿ ಹಾಗೂ ಚಿದಂಬರಂ ಕಾಂಬಿನೇಷನ್‌ನ ಮೊದಲ ಚಿತ್ರ ಕನ್ನಡದ ಸ್ಪೋರ್ಟ್ಸ್ ಡ್ರಾಮಾ ಆಗಿರಲಿದೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಆರಂಭವಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಶುರು ಮಾಡುವ ಯೋಜನೆ ಇದೆ. ಈ ಚಿತ್ರವನ್ನು ಮಲಯಾಳಂನ ಖ್ಯಾತ ನಿರ್ಮಾಪಕ ಶಿಬು ತಮೀನ್ಸ್ ನಿರ್ಮಿಸಲಿದ್ದಾರೆ. ಚಿತ್ರದ ಕಥೆ, ತಾರಾಗಣ ಹಾಗೂ ತಾಂತ್ರಿಕ ತಂಡದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

‘ಜೈ ಹನುಮಾನ್’ ಬಳಿಕ ಹೊಸ ಪ್ರಾಜೆಕ್ಟ್

ರಿಷಬ್ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಪೂರ್ಣಗೊಂಡ ಬಳಿಕ ಚಿದಂಬರಂ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ‘ಮಂಜುಮ್ಮೆಲ್ ಬಾಯ್ಸ್’ ಮೂಲಕ ವಿಭಿನ್ನ ಕಥನಶೈಲಿಯಿಂದ ಗಮನ ಸೆಳೆದಿರುವ ಚಿದಂಬರಂ ಹಾಗೂ ‘ಕಾಂತಾರ’ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಒಂದಾಗುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

Read More
Next Story