ಸುಬ್ಬುಲಕ್ಷ್ಮಿ ಜೀವನಕಥೆಗೆ ರಶ್ಮಿಕಾ ನಾಯಕಿ; ಕ್ಲಾಪ್ ಮಾಡುವ ಮೂಲಕ ಚಾಲನೆ ಕೊಟ್ಟ ಕಮಲ್ ಹಾಸನ್
x

ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ.

ಸುಬ್ಬುಲಕ್ಷ್ಮಿ ಜೀವನಕಥೆಗೆ ರಶ್ಮಿಕಾ ನಾಯಕಿ; ಕ್ಲಾಪ್ ಮಾಡುವ ಮೂಲಕ ಚಾಲನೆ ಕೊಟ್ಟ ಕಮಲ್ ಹಾಸನ್

ಸುಬ್ಬುಲಕ್ಷ್ಮಿ ಅವರ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿರುವುದಕ್ಕೆ ರಶ್ಮಿಕಾ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಸುಬ್ಬುಲಕ್ಷ್ಮಿ ಅವರ ಧ್ವನಿಯಲ್ಲಿ ವಿಶಿಷ್ಟವಾದ ದೈವಿಕ ಶಕ್ತಿ ಇದೆ ಎಂದು ಹೇಳಿದ ಅವರು, ಪಾತ್ರಕ್ಕೆ ತಮ್ಮಿಂದ ಸಾಧ್ಯವಾದಷ್ಟು ಜೀವ ತುಂಬುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.


Click the Play button to hear this message in audio format

ನಟಿ ರಶ್ಮಿಕಾ ಮಂದಣ್ಣ ಅವರು ದಿಗ್ಗಜ ಕರ್ನಾಟಕ ಸಂಗೀತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಂಗೀತಯಾನವನ್ನು ಆಧರಿಸಿದ ಈ ಬಯೋಪಿಕ್‌ಗೆ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನದಂದು ನಡೆದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ರಶ್ಮಿಕಾ ನಿರ್ವಹಿಸಲಿರುವ ಸುಬ್ಬುಲಕ್ಷ್ಮಿ ಪಾತ್ರದ ಸವಾಲನ್ನು ಕಮಲ್ ಹಾಸನ್ ಅವರು ಮೈಕೆಲ್ ಜಾಕ್ಸನ್ ಪಾತ್ರ ನಿರ್ವಹಿಸುವ ನಟನಿಗೆ ಎದುರಾಗುವ ಒತ್ತಡಕ್ಕೆ ಹೋಲಿಸಿದ್ದಾರೆ. ಈ ಪಾತ್ರ ಕೇವಲ ನಟನೆಯಷ್ಟೇ ಅಲ್ಲ, ಪಾತ್ರದ ಕಣ್ಣುಗಳಲ್ಲಿ ಸುಬ್ಬುಲಕ್ಷ್ಮಿ ಅವರ ಕರುಣೆ ಮತ್ತು ವ್ಯಕ್ತಿತ್ವವನ್ನು ತರುವ ಜವಾಬ್ದಾರಿಯನ್ನೂ ಹೊಂದಿದೆ ಎಂದು ಕಮಲ್ ಹೇಳಿದ್ದಾರೆ. ತಮಗೆ ಈ ಪಾತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದೂ ಅವರು ಕಾರ್ಯಕ್ರಮದಲ್ಲಿ ಹಾಸ್ಯಮಿಶ್ರಿತವಾಗಿ ಹೇಳಿದ್ದಾರೆ.

‘ಸುಬ್ಬುಲಕ್ಷ್ಮಿ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್’

ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಸಂಗೀತದ ಮೂಲಕ ದೇಶವನ್ನು ಒಗ್ಗೂಡಿಸಿದ ಸಾಂಸ್ಕೃತಿಕ ಶಕ್ತಿ ಎಂದು ಕಮಲ್ ಹಾಸನ್ ಬಣ್ಣಿಸಿದ್ದಾರೆ. ಅವರು ಸಂಸ್ಕೃತ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದು, ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ದೇಶದ ಜನರ ಮೇಲೆ ಪ್ರಭಾವ ಬೀರಿದ್ದರು ಎಂದು ಕಮಲ್ ಹೇಳಿದ್ದಾರೆ.

ರಶ್ಮಿಕಾ ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಭಾವುಕರಾದ ರಶ್ಮಿಕಾ, ಸುಬ್ಬುಲಕ್ಷ್ಮಿ ಅವರ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಸುಬ್ಬುಲಕ್ಷ್ಮಿ ಅವರ ಧ್ವನಿಯಲ್ಲಿ ವಿಶಿಷ್ಟವಾದ ದೈವಿಕ ಶಕ್ತಿ ಇದೆ ಎಂದು ಹೇಳಿದ ಅವರು, ಪಾತ್ರಕ್ಕೆ ತಮ್ಮಿಂದ ಸಾಧ್ಯವಾದಷ್ಟು ಜೀವ ತುಂಬುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಗೌತಮ್ ತಿನ್ನನೂರಿ ನಿರ್ದೇಶನ

ಇನ್ನೂ ಹೆಸರಿಡದ ಈ ಬಯೋಪಿಕ್‌ ಅನ್ನು ‘ಜರ್ಸಿ’ ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದು, ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್ ಮತ್ತು ಬನ್ನಿ ವಾಸು ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರವನ್ನು ಹಲವು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಎಂ.ಎಸ್. ಸುಬ್ಬುಲಕ್ಷ್ಮಿ ಅವರು 1998ರಲ್ಲಿ ಭಾರತ ರತ್ನ ಪಡೆದ ಮೊದಲ ಸಂಗೀತಗಾರರಾಗಿದ್ದರು. 1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಸಂಗೀತಗಾರ್ತಿ ಎಂಬ ಹೆಗ್ಗಳಿಕೆಯೂ ಅವರಿಗಿದೆ. 2004ರಲ್ಲಿ ಚೆನ್ನೈನಲ್ಲಿ 88ನೇ ವಯಸ್ಸಿನಲ್ಲಿ ಅವರು ನಿಧನರಾದ್ದರು.

Read More
Next Story