ಗಾಯದಿಂದ ಚೇತರಿಕೆ- ಶೀಘ್ರವೇ ಶೂಟಿಂಗ್‌ಗೆ ಮರಳಲಿದ್ದಾರೆ ರಶ್ಮಿಕಾ ಮಂದಣ್ಣ
x

ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಚಿತ್ರವನ್ನು ರವೀಂದ್ರ ಪುಲ್ಲೆ ನಿರ್ದೇಶಿಸುತ್ತಿದ್ದಾರೆ. ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರವು ಬುಡಕಟ್ಟು ಪ್ರದೇಶಗಳ ಹಿನ್ನೆಲೆಯಲ್ಲಿನ ಭಾವನಾತ್ಮಕ ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

ಗಾಯದಿಂದ ಚೇತರಿಕೆ- ಶೀಘ್ರವೇ ಶೂಟಿಂಗ್‌ಗೆ ಮರಳಲಿದ್ದಾರೆ ರಶ್ಮಿಕಾ ಮಂದಣ್ಣ

‘ಮೈಸಾ’ ಚಿತ್ರದ ಶೂಟಿಂಗ್ ವೇಳೆ ಸೊಂಟಕ್ಕೆ ಗಾಯಗೊಂಡಿದ್ದ ರಶ್ಮಿಕಾ ಮಂದಣ್ಣ ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಕೆಲಸಕ್ಕೆ ಮರಳಲಿದ್ದು, ತಮ್ಮ ಬ್ರೇಕ್‌ನ ನೆನಪುಗಳನ್ನು ಹಂಚಿಕೊಂಡಿದ್ದಾರೆ.


Click the Play button to hear this message in audio format

ಸೊಂಟದ ಗಾಯದಿಂದಾಗಿ ಸುಮಾರು ಒಂದು ತಿಂಗಳಿನಿಂದ ವಿಶ್ರಾಂತಿ ಪಡೆಯುತ್ತಿದ್ದ ‘ನ್ಯಾಷನಲ್ ಕ್ರಶ್’ ನಟಿ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಮತ್ತೆ ಶೂಟಿಂಗ್ ಸೆಟ್‌ಗೆ ಮರಳುವುದಾಗಿ ತಿಳಿಸಿದ್ದಾರೆ. ಗಾಯದ ಕಾರಣದಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ರಶ್ಮಿಕಾ, ತಮ್ಮ ಬ್ರೇಕ್‌ನ ಕೆಲವು ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಬಿಡುವಿನ ದಿನಗಳನ್ನು ಎಂಜಾಯ್ ಮಾಡಿರುವುದಾಗಿ ಹೇಳಿರುವ ರಶ್ಮಿಕಾ, ಕೆಲಸಕ್ಕೆ ಮರಳಿದ ಬಳಿಕ ಈ ಸಮಯವನ್ನು ಮಿಸ್ ಮಾಡಿಕೊಳ್ಳುವುದಾಗಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಮೈಸಾ’ ಶೂಟಿಂಗ್ ವೇಳೆ ಗಾಯ

ಆಗಸ್ಟ್ 3ರಂದು ರಶ್ಮಿಕಾ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ‘ಮೈಸಾ’ ಚಿತ್ರದ ಡ್ಯಾನ್ಸ್ ಶೂಟಿಂಗ್ ವೇಳೆ ತಮ್ಮ ಸೊಂಟದ ಬಲ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದೆ ಎಂದು ಅವರು ತಿಳಿಸಿದ್ದರು. ಆ ಟೆಂಡನ್ ಮತ್ತೆ ಜೋಡಿಕೊಳ್ಳಲು ವಿಶ್ರಾಂತಿ ಅಗತ್ಯವಾಗಿದ್ದರಿಂದ ಅವರು ಕೆಲಸದಿಂದ ದೂರ ಉಳಿದಿದ್ದರು. ಇದು ತಮ್ಮ ಸತತ ಮೂರನೇ ಗಾಯವಾಗಿದ್ದು, ದೇಹವನ್ನು ಯಂತ್ರದಂತೆ ಅಲ್ಲ, ಮನುಷ್ಯನ ದೇಹದಂತೆ ನೋಡಿಕೊಳ್ಳಬೇಕು ಎಂಬ ಪಾಠ ಕಲಿಯಬೇಕಿದೆ ಎಂದು ರಶ್ಮಿಕಾ ಹೇಳಿದ್ದರು. ಈ ಎಲ್ಲ ಗಾಯಗಳು ಆಕಸ್ಮಿಕವಾಗಿ ಸಂಭವಿಸುತ್ತಿವೆ ಎಂದೂ ಅವರು ಹೇಳಿಕೊಂಡಿದ್ದರು.

ಆ್ಯಕ್ಷನ್ ಥ್ರಿಲ್ಲರ್ ‘ಮೈಸಾ’

ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಚಿತ್ರವನ್ನು ರವೀಂದ್ರ ಪುಲ್ಲೆ ನಿರ್ದೇಶಿಸುತ್ತಿದ್ದಾರೆ. ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರವು ಬುಡಕಟ್ಟು ಪ್ರದೇಶಗಳ ಹಿನ್ನೆಲೆಯಲ್ಲಿನ ಭಾವನಾತ್ಮಕ ಆ್ಯಕ್ಷನ್ ಥ್ರಿಲ್ಲರ್ ಆಗಿದೆ. ಇದು ರಶ್ಮಿಕಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಪ್ಯಾನ್-ಇಂಡಿಯಾ ಆ್ಯಕ್ಷನ್ ಚಿತ್ರವಾಗಿದ್ದು, 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Read More
Next Story