ಯಾವುದೇ ಡ್ಯೂಪ್ ಇಲ್ಲದೆ ಅಂಡರ್‌ ವಾಟರ್‌ನಲ್ಲಿ 20 ಗಂಟೆಗಳ ಕಾಲ ಫೈಟಿಂಗ್ ಮಾಡಿದ ರಶ್ಮಿಕಾ ಮಂದಣ್ಣ
x

ರಶ್ಮಿಕಾ ಮಂದಣ್ಣ ಮಹಿಳಾ ಪ್ರಧಾನ ಅಂಡರ್‌ವಾಟರ್ ಸಾಹಸ ದೃಶ್ಯದಲ್ಲಿ ನಟಿಸಿದ್ದಾರೆ.

ಯಾವುದೇ ಡ್ಯೂಪ್ ಇಲ್ಲದೆ ಅಂಡರ್‌ ವಾಟರ್‌ನಲ್ಲಿ 20 ಗಂಟೆಗಳ ಕಾಲ ಫೈಟಿಂಗ್ ಮಾಡಿದ ರಶ್ಮಿಕಾ ಮಂದಣ್ಣ

ಖ್ಯಾತ ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ 'ಮೈಸಾ' ಚಿತ್ರಕ್ಕಾಗಿ ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಅಂಡರ್‌ವಾಟರ್ ಸಾಹಸ ದೃಶ್ಯದಲ್ಲಿ ನಟಿಸಿದ್ದಾರೆ.


Click the Play button to hear this message in audio format

ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ಮೈಸಾ' ಸಿನಿಮಾಗಾಗಿ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಯಾವುದೇ ಬಾಡಿ ಡಬಲ್ (ಡೂಪ್) ಬಳಸದೆ ಅತ್ಯಂತ ಕಠಿಣವಾದ ಅಂಡರ್‌ವಾಟರ್ (ನೀರಿನೊಳಗಿನ) ಫೈಟಿಂಗ್ ಸೀಕ್ವೆನ್ಸ್‌ನಲ್ಲಿ ಸ್ವತಃ ನಟಿಸಿದ್ದಾರೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ಇಂತಹ ಭೀಕರ ಅಂಡರ್‌ವಾಟರ್ ಫೈಟ್ ಸೀಕ್ವೆನ್ಸ್ ಚಿತ್ರೀಕರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಈ ರೋಮಾಂಚಕ ಸಾಹಸ ದೃಶ್ಯವನ್ನು ಪೂರ್ಣಗೊಳಿಸಲು ರಶ್ಮಿಕಾ ಅವರು ಕೇವಲ ಎರಡು ದಿನಗಳಲ್ಲಿ ಬರೋಬ್ಬರಿ 20 ಗಂಟೆಗಳ ಕಾಲ ನೀರಿನ ಅಡಿಯಲ್ಲಿ ಕಾಲ ಕಳೆದಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಮೇಕಿಂಗ್ ಹಾಗೂ ಬಿಹೈಂಡ್ ದಿ ಸೀನ್ಸ್ ಚಿತ್ರಗಳನ್ನು ಹಂಚಿಕೊಂಡಿರುವ ನಿರ್ದೇಶಕ ರವೀಂದ್ರ ಪುಲ್ಲೆ, ಈ ಸಾಹಸ ದೃಶ್ಯವು ಭಾರತೀಯ ಚಿತ್ರರಂಗದಲ್ಲೇ ಹಿಂದೆಂದೂ ಕಾಣದ ವಿಶಿಷ್ಟ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ ಎಂದು ತಿಳಿಸಿದ್ದಾರೆ. ಈ ಕಠಿಣ ಶೂಟಿಂಗ್ ಕುರಿತು ಸ್ವತಃ ರಶ್ಮಿಕಾ ಮಂದಣ್ಣ ಅವರೂ ಸಹ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂತಸ ಹಂಚಿಕೊಂಡಿದ್ದು, ಇದು ತಮ್ಮ ಇಡೀ ಸಿನಿ ಜರ್ನಿಯಲ್ಲೇ ಅತ್ಯಂತ ಸವಾಲಿನ ಮತ್ತು ಕಷ್ಟಕರವಾದ ಚಿತ್ರೀಕರಣವಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಅನ್‌ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಮೈಸಾ' ಸಿನಿಮಾವು ಬುಡಕಟ್ಟು ಜನಾಂಗದ ಹಿನ್ನೆಲೆಯುಳ್ಳ ಒಂದು ಎಮೋಷನಲ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ರಶ್ಮಿಕಾ ಅವರ ಮೊದಲ ಪ್ಯಾನ್-ಇಂಡಿಯಾ ಮಹಿಳಾ ಪ್ರಧಾನ ಆಕ್ಷನ್ ಚಿತ್ರವಾಗಿದೆ. ತಾಂತ್ರಿಕ ತಂಡ ಮತ್ತು ಅಂಡರ್‌ವಾಟರ್ ಸ್ಟಂಟ್ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿರುವ ಈ ಚಿತ್ರದ ಟ್ರೇಲರ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.

Read More
Next Story