ಬ್ರಿಟಿಷರ ವಿರುದ್ಧ ವಿಜಯ್ ದೇವರಕೊಂಡ; ‘ರಣಬಾಲಿ’ ಟ್ರೇಲರ್ ಬಿಡುಗಡೆ
x

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಟ್ರೇಲರ್ ಬಿಡುಗಡೆಯಾಗಿದೆ.

ಬ್ರಿಟಿಷರ ವಿರುದ್ಧ ವಿಜಯ್ ದೇವರಕೊಂಡ; ‘ರಣಬಾಲಿ’ ಟ್ರೇಲರ್ ಬಿಡುಗಡೆ

ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಿಂಗನಮಲ ಬೊಬ್ಬಿಲಿ ರಣಬಾಲಿ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಅವರು ಜಯಮ್ಮನ ಪಾತ್ರ ನಿರ್ವಹಿಸಿದ್ದಾರೆ.


Click the Play button to hear this message in audio format

ರಾಹುಲ್ ಸಂಕೃತ್ಯನ್ ನಿರ್ದೇಶನದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬ್ರಿಟಿಷರ ವಸಾಹತುಶಾಹಿ ಆಡಳಿತ, ಬರಗಾಲ ಮತ್ತು ಜನರ ಪ್ರತಿರೋಧದ ಹಿನ್ನೆಲೆಯ ಕಥೆ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತದೆ.

‘ರಣಬಾಲಿ’ ಚಿತ್ರವು 1876–78ರ ಮದ್ರಾಸ್ ಬರಗಾಲದ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡಿದೆ. ಬರಗಾಲದಿಂದ ಜನರು ಎದುರಿಸಿದ ಸಂಕಷ್ಟ, ಬ್ರಿಟಿಷರ ಆಡಳಿತದ ದಬ್ಬಾಳಿಕೆ ಮತ್ತು ಜನರ ಬದುಕಿನ ಮೇಲೆ ಅದರ ಪರಿಣಾಮಗಳನ್ನು ಚಿತ್ರವು ಕಟ್ಟಿಕೊಡುತ್ತದೆ. ಈ ಸಂಕಷ್ಟದ ವಿರುದ್ಧ ಧ್ವನಿ ಎತ್ತುವ ಯೋಧನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣಗೆ ಜಯಮ್ಮ ಪಾತ್ರ

ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಿಂಗನಮಲ ಬೊಬ್ಬಿಲಿ ರಣಬಾಲಿ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಅವರು ಜಯಮ್ಮನ ಪಾತ್ರ ನಿರ್ವಹಿಸಿದ್ದಾರೆ. ರಣಬಾಲಿಯ ವೈಯಕ್ತಿಕ ಬದುಕು, ಕುಟುಂಬದ ಬಾಂಧವ್ಯ ಮತ್ತು ಬ್ರಿಟಿಷರ ವಿರುದ್ಧದ ಹೋರಾಟ ಕಥೆಯ ಪ್ರಮುಖ ಭಾಗಗಳಾಗಿವೆ.

ದಕ್ಷಿಣ ಆಫ್ರಿಕಾದ ನಟ ಅರ್ನಾಲ್ಡ್ ವೋಸ್ಲೂ ಅವರು ಸರ್ ಥಿಯೋಡರ್ ಹೆಕ್ಟರ್ ಎಂಬ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಸಂಘರ್ಷ, ಭಾವನಾತ್ಮಕ ಸನ್ನಿವೇಶಗಳು ಮತ್ತು ಸಾಹಸ ದೃಶ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಅಕ್ಟೋಬರ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ

‘ಟ್ಯಾಕ್ಸಿವಾಲಾ’ ಮತ್ತು ‘ಶ್ಯಾಮ್ ಸಿಂಘಾ ರಾಯ್’ ಚಿತ್ರಗಳನ್ನು ನಿರ್ದೇಶಿಸಿದ್ದ ರಾಹುಲ್ ಸಂಕೃತ್ಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಜಯ್–ಅತುಲ್ ಸಂಗೀತ ಸಂಯೋಜನೆ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಚಿತ್ರವನ್ನು ನಿರ್ಮಿಸಿದೆ. ಅಕ್ಟೋಬರ್ 16ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Read More
Next Story