ಚೆಕ್‌ಬೌನ್ಸ್ ಪ್ರಕರಣ: ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ರಿಲೀಫ್
x

ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ.

ಚೆಕ್‌ಬೌನ್ಸ್ ಪ್ರಕರಣ: ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ರಿಲೀಫ್

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ರಾಜ್‌ಪಾಲ್ ಯಾದವ್ ಹಾಗೂ ಅವರ ಪತ್ನಿ ರಾಧಾ ರಾಜ್‌ಪಾಲ್ ಯಾದವ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿತು.


Click the Play button to hear this message in audio format

ಚೆಕ್‌ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ. ಏಳು ಪ್ರಕರಣಗಳಲ್ಲಿ ಸದ್ಯಕ್ಕೆ ಶರಣಾಗುವುದರಿಂದ ಅವರಿಗೆ ವಿನಾಯಿತಿ ನೀಡಿರುವ ನ್ಯಾಯಾಲಯ, ಬುಧವಾರದೊಳಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ 5 ಕೋಟಿ ರೂ. ಠೇವಣಿ ಇಡುವಂತೆ ಸೂಚಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ರಾಜ್‌ಪಾಲ್ ಯಾದವ್ ಹಾಗೂ ಅವರ ಪತ್ನಿ ರಾಧಾ ರಾಜ್‌ಪಾಲ್ ಯಾದವ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿತು. ವಕೀಲ ಸೌರಭ್ ತ್ರಿವೇದಿ ಅವರು ಅರ್ಜಿಗಳನ್ನು ಮೌಖಿಕವಾಗಿ ಪ್ರಸ್ತಾಪಿಸಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ.

ಈ ಪ್ರಕರಣಗಳು ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗೆ ಸಂಬಂಧಿಸಿದ ಹಲವು ಚೆಕ್‌ಬೌನ್ಸ್ ಪ್ರಕರಣಗಳಾಗಿವೆ. ರಾಜ್‌ಪಾಲ್ ಯಾದವ್ ಅವರ ನಿರ್ಮಾಣ ಸಂಸ್ಥೆಗೆ ಸಂಬಂಧಿಸಿದ ಹಣ ಪಾವತಿಗಳ ಕುರಿತು ಈ ವಿವಾದ ಉಂಟಾಗಿದೆ.

ಪ್ರತಿ ಪ್ರಕರಣದಲ್ಲಿ 1.05 ಕೋಟಿ ರೂ. ಪಾವತಿಗೆ ಆದೇಶ

ಈ ಹಿಂದೆ ಹೈಕೋರ್ಟ್ ಏಳು ಪ್ರಕರಣಗಳಲ್ಲಿ ರಾಜ್‌ಪಾಲ್ ಯಾದವ್‌ಗೆ ವಿಧಿಸಲಾಗಿದ್ದ ಶಿಕ್ಷೆಗಳನ್ನು ಏಕಕಾಲದಲ್ಲಿ ಜಾರಿಗೊಳಿಸುವಂತೆ ಆದೇಶಿಸಿತ್ತು. ಅಲ್ಲದೆ, ಪ್ರತಿ ಪ್ರಕರಣದಲ್ಲಿ ದೂರುದಾರರಿಗೆ 1.05 ಕೋಟಿ ರೂ. ಪಾವತಿಸುವಂತೆ ಸೂಚಿಸಿತ್ತು. ಇದರಲ್ಲಿ 1.0475 ಕೋಟಿ ರೂ. ಪರಿಹಾರವಾಗಿ ದೂರುದಾರರಿಗೆ ಹಾಗೂ 25,000 ರೂ. ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಿತ್ತು. ರಾಧಾ ಯಾದವ್ ಅವರಿಗೆ ಪ್ರತಿ ಪ್ರಕರಣದಲ್ಲಿ ದೂರುದಾರರಿಗೆ 5.51 ಲಕ್ಷ ರೂ. ಪಾವತಿಸುವಂತೆ ಪ್ರತ್ಯೇಕವಾಗಿ ಆದೇಶಿಸಲಾಗಿತ್ತು.

ಈಗಾಗಲೇ 2.25 ಕೋಟಿ ರೂ. ಪಾವತಿ

ವಿಚಾರಣೆ ವೇಳೆ ದೂರುದಾರರಿಗೆ ಈಗಾಗಲೇ ಪಾವತಿಸಿ ಬಿಡುಗಡೆ ಮಾಡಲಾಗಿದ್ದ 2.25 ಕೋಟಿ ರೂ. ಮೊತ್ತವನ್ನೂ ಹೈಕೋರ್ಟ್ ಪರಿಗಣಿಸಿತ್ತು. ಉಳಿದ ದಂಡ ಮತ್ತು ಪರಿಹಾರದ ಮೊತ್ತವನ್ನು ನಿರ್ಧರಿಸುವಾಗ ಈ ಮೊತ್ತವನ್ನು ಹೊಂದಾಣಿಕೆ ಮಾಡುವಂತೆ ಸೂಚಿಸಿತ್ತು.

ಹೈಕೋರ್ಟ್ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್‌ಪಾಲ್ ಯಾದವ್ ಅವರಿಗೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಈ ಅವಧಿಯಲ್ಲಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ 5 ಕೋಟಿ ರೂ. ಠೇವಣಿ ಷರತ್ತಿನೊಂದಿಗೆ ಅವರಿಗೆ ಮಧ್ಯಂತರ ರಿಲೀಫ್ ನೀಡಿದೆ.

Read More
Next Story