
ನಟ ಧನುಷ್ ಹಾಗೂ ಮೃಣಾಲ್ ಗುಟ್ಟಾಗಿ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಧನುಷ್ - ಮೃಣಾಲ್ ಮದುವೆ ವದಂತಿ; ಚೆನ್ನೈ ಕನೆಕ್ಷನ್ ಪ್ರಶ್ನೆಗೆ ನಾಚಿ ನೀರಾದ ನಟಿ
ಚೆನ್ನೈ ಕನೆಕ್ಷನ್ ಪ್ರಶ್ನೆಗೆ ನಾಚಿಕೊಂಡ ಮೃಣಾಲ್ ಅವರ ವೈರಲ್ ವಿಡಿಯೋ. ಧನುಷ್ ಜೊತೆ ಪ್ರೀತಿ ಮತ್ತು ಪ್ರೇಮಿಗಳ ದಿನದಂದು ಮದುವೆ ವದಂತಿ ವೈರಲ್ ಆಗಿವೆ.
ಖ್ಯಾತ ನಟಿ ಮೃಣಾಲ್ ಠಾಕೂರ್ ಈಗ ಅವರ ಸಿನಿಮಾ ಸುದ್ದಿಗಳಿಗಿಂತ ಹೆಚ್ಚಾಗಿ ಅವರ ವೈಯಕ್ತಿಕ ಬದುಕಿನ ಬಗ್ಗೆಯೇ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಸದ್ಯ 'ಡಕಾಯ್ತ್' ಮತ್ತು 'ದೋ ದೀವಾನೆ ಶೆಹರ್ ಮೇ' ಚಿತ್ರಗಳಲ್ಲಿ ಬ್ಯುಸಿಯಾಗಿರುವ ಮೃಣಾಲ್, ಕಾಲಿವುಡ್ ಸ್ಟಾರ್ ನಟ ಧನುಷ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಹರಡಿದೆ.
ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ಸಂವಾದವೊಂದರಲ್ಲಿ ಮೃಣಾಲ್ ಅವರಿಗೆ ಅವರ ಚೆನ್ನೈ ಕನೆಕ್ಷನ್ ಬಗ್ಗೆ ನೇರ ಪ್ರಶ್ನೆ ಎದುರಾಯಿತು. ಇದಕ್ಕೆ ಸ್ಪಷ್ಟ ಉತ್ತರ ನೀಡುವ ಬದಲು ಮೃಣಾಲ್ ಮುಗುಳ್ನಗುತ್ತಾ ನಾಚಿಕೊಂಡರು. ಅಷ್ಟೇ ಅಲ್ಲದೆ, ಆ ಪ್ರಶ್ನೆಯನ್ನು ತಕ್ಷಣವೇ ತಮ್ಮ ಸಹನಟ ಸಿದ್ಧಾಂತ್ ಚತುರ್ವೇದಿ ಅವರತ್ತ ತಿರುಗಿಸಿದರು. ಮೃಣಾಲ್ ಅವರ ಈ ನಾಚಿಕೆ ಮತ್ತು ಮೌನವು ಅಭಿಮಾನಿಗಳಲ್ಲಿ ಅನುಮಾನವನ್ನು ಮತ್ತಷ್ಟು ದೃಢಪಡಿಸಿದೆ. ಧನುಷ್ ಚೆನ್ನೈ ಮೂಲದವರಾಗಿರುವುದರಿಂದ, ಆ ಪ್ರಶ್ನೆ ಅವರನ್ನೇ ಉದ್ದೇಶಿಸಿತ್ತು ಎಂಬುದು ಎಲ್ಲರಿಗೂ ಅರ್ಥವಾದ ವಿಷಯವಾಗಿತ್ತು.
ಧನುಷ್ ಮತ್ತು ಮೃಣಾಲ್ ಈ ವರ್ಷದ ಆರಂಭದಲ್ಲೇ ಗುಟ್ಟಾಗಿ ಮದುವೆಯಾಗಲಿದ್ದಾರೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗಂತೂ ಅವರಿಬ್ಬರು ಹಸೆಮಣೆ ಏರಿರುವಂತಹ ಎಐ ವಿಡಿಯೋಗಳು ವೈರಲ್ ಆಗಿವೆ. ಧನುಷ್ ಅವರ ವಿಚ್ಛೇದನವಾಗಿ ಕೆಲವೇ ವರ್ಷಗಳಾಗಿರುವುದರಿಂದ, ಈ ಹೊಸ ಸಂಬಂಧದ ಸುದ್ದಿ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆದರೆ, ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಧನುಷ್ ಪ್ರಸ್ತುತ ವಿಘ್ನೇಶ್ ರಾಜ ನಿರ್ದೇಶನದ 'ಕಾರ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಮೃಣಾಲ್ ಮತ್ತು ಅಡಿವಿ ಶೇಷ್ ನಟನೆಯ ಬಹುನಿರೀಕ್ಷಿತ 'ಡಕಾಯ್ತ್' ಚಿತ್ರದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಾಗಿದೆ. ಮೊದಲು ಮಾರ್ಚ್ 19 ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಈಗ ಏಪ್ರಿಲ್ 10, 2026 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಕಾಲಿವುಡ್ ಸ್ಟಾರ್ ಧನುಷ್ ಮತ್ತು ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಕಳೆದ ಕೆಲವು ಸಮಯದಿಂದ ಆಪ್ತವಾಗಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿದ್ದವು. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ.
ಪ್ರೇಮಿಗಳ ದಿನದಂದೇ ವಿವಾಹ?
ಸಿನಿಮಾ ವಲಯದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನದಂದು ಧನುಷ್ ಮತ್ತು ಮೃಣಾಲ್ ಠಾಕೂರ್ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಮದುವೆ ಸಮಾರಂಭವು ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಮಂತ್ರಣ ನೀಡಲಾಗುವುದು ಎಂದು ಹೇಳಲಾಗುತ್ತಿದೆ.

