ಮಹಾನ್ನಲ್ಲಿ ಗ್ರಾಮೀಣ ನರ್ಸ್ ಆಗಿ ರಾಧಿಕಾ; ವಿಜಯ್ ರಾಘವೇಂದ್ರನ ಆಪ್ತನಾಗಿ ಮಿತ್ರ
x

ಪಿ.ಸಿ. ಶೇಖರ್ ನಿರ್ದೇಶನದ 'ಮಹಾನ್' ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ಮಿತ್ರ ಪಾತ್ರಗಳ ಫಸ್ಟ್ ಲುಕ್ ಬಿಡುಗಡೆ;

'ಮಹಾನ್'ನಲ್ಲಿ ಗ್ರಾಮೀಣ ನರ್ಸ್ ಆಗಿ ರಾಧಿಕಾ; ವಿಜಯ್ ರಾಘವೇಂದ್ರನ ಆಪ್ತನಾಗಿ ಮಿತ್ರ

ಪಿ.ಸಿ. ಶೇಖರ್ ನಿರ್ದೇಶನದ 'ಮಹಾನ್' ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ಮಿತ್ರ ಪಾತ್ರಗಳ ಫಸ್ಟ್ ಲುಕ್ ಬಿಡುಗಡೆ; ವಿಜಯ್ ರಾಘವೇಂದ್ರ ರೈತನಾಗಿ, ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click the Play button to hear this message in audio format

ನಿರ್ದೇಶಕ ಪಿ.ಸಿ. ಶೇಖರ್ ಅವರ ಬಹುನಿರೀಕ್ಷಿತ ಗ್ರಾಮೀಣ ಕಥಾಹಂದರದ 'ಮಹಾನ್' ಚಿತ್ರದ ರಾಧಿಕಾ ನಾರಾಯಣ್ ಮತ್ತು ಮಿತ್ರ ಅವರ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಪ್ರಕಾಶ್ ಬುದುರು ನಿರ್ಮಾಣದ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಸಮಾಜಮುಖಿ ರೈತನಾಗಿ ನಟಿಸಿದ್ದು, ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ರಂಗಿತರಂಗ' ಖ್ಯಾತಿಯ ರಾಧಿಕಾ ನಾರಾಯಣ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಗ್ರಾಮೀಣ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನ ಕಠಿಣ ಸಂದರ್ಭಗಳಲ್ಲಿ ಅವನಿಗೆ ಬೆಂಬಲವಾಗಿ ನಿಲ್ಲುವ ಭಾವನಾತ್ಮಕ ಪಾತ್ರ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

"ಪಿ.ಸಿ. ಶೇಖರ್ ಅವರೊಂದಿಗೆ ಕೆಲಸ ಮಾಡುವ ಆಸೆ ಬಹಳ ದಿನಗಳದ್ದಾಗಿತ್ತು. 'ಮಹಾನ್' ಮೂಲಕ ಅದು ನನಸಾಯಿತು. ಗ್ರಾಮೀಣ ನರ್ಸ್ ಪಾತ್ರದಲ್ಲಿ ನಟಿಸಿರುವುದು ನನಗೆ ಹೊಸ ಅನುಭವ. ವಿಜಯ್ ರಾಘವೇಂದ್ರ, ವರ್ಷಾ ಬೊಳ್ಳಮ್ಮ ಮತ್ತು ಮಿತ್ರ ಅವರೊಂದಿಗೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ಶಿವರಾಜ್‌ಕುಮಾರ್ ಅವರ ವಿಶೇಷ ಪಾತ್ರ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ," ಎಂದು ರಾಧಿಕಾ ಹೇಳಿದ್ದಾರೆ.

ವಿಜಯ್ ರಾಘವೇಂದ್ರನ ಬಾವನಾಗಿ ಮಿತ್ರ

'ಕರಾವಳಿ' ಚಿತ್ರದ ಬಳಿಕ ಮಿತ್ರ ಮತ್ತೊಮ್ಮೆ ಪಿ.ಸಿ. ಶೇಖರ್ ಅವರೊಂದಿಗೆ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಅವರು ವಿಜಯ್ ರಾಘವೇಂದ್ರ ಅವರ ಬಾವನ ಪಾತ್ರದಲ್ಲಿ ನಟಿಸಿದ್ದು, ಸಿಡುಕಿನ ಸ್ವಭಾವ ಹೊಂದಿದ್ದರೂ ನಾಯಕನಿಗೆ ಸದಾ ಬೆಂಬಲವಾಗಿ ನಿಲ್ಲುವ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

"ನನ್ನ ಪಾತ್ರಕ್ಕೆ ಬೇಗ ಕೋಪ ಬರುತ್ತದೆ. ಆದರೆ ವಿಜಯ್ ರಾಘವೇಂದ್ರ ಅವರ ಪಾತ್ರದೊಂದಿಗೆ ಗಟ್ಟಿಯಾದ ಬಾಂಧವ್ಯವಿದೆ. ರೈತರ ಬದುಕು ಮತ್ತು ಅವರ ಸಂಕಷ್ಟಗಳನ್ನು ಹೇಳುವ ಈ ಕಥೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ," ಎಂದು ಮಿತ್ರ ಹೇಳಿದ್ದಾರೆ.

ಸಮಾಜಮುಖಿ ರೈತನಾಗಿ ವಿಜಯ್ ರಾಘವೇಂದ್ರ

'ಮಹಾನ್' ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರನ್ನು ಇದುವರೆಗೆ ಕಾಣದ ಪಾತ್ರದಲ್ಲಿ ಪ್ರೇಕ್ಷಕರು ನೋಡಲಿದ್ದಾರೆ ಎಂದು ನಿರ್ದೇಶಕ ಪಿ.ಸಿ. ಶೇಖರ್ ತಿಳಿಸಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಹೊಂದಿರುವ ರೈತನಾಗಿ ಅವರು ಅಭಿನಯಿಸಿದ್ದು, ರಾಧಿಕಾ ಅವರ ಪಾತ್ರ ನಾಯಕನಿಗೆ ಭಾವನಾತ್ಮಕ ಶಕ್ತಿಯಾಗಿದ್ದರೆ, ಮಿತ್ರ ಅವರ ಪಾತ್ರ ಸದಾ ಜೊತೆಯಾಗಿ ನಿಲ್ಲುವ ಆಪ್ತನಂತಿರಲಿದೆ ಎಂದು ಹೇಳಿದ್ದಾರೆ.

ಶಿವರಾಜ್‌ಕುಮಾರ್ ವಿಶೇಷ ಪಾತ್ರದ ಮೇಲೆ ನಿರೀಕ್ಷೆ

ಆಕಾಶ್ ಪಿಕ್ಚರ್ಸ್‌ನ ಚೊಚ್ಚಲ ನಿರ್ಮಾಣವಾದ 'ಮಹಾನ್' ಚಿತ್ರವನ್ನು ಯಾವುದೇ ರಾಜಿಯಿಲ್ಲದೆ ನಿರ್ಮಿಸಲಾಗಿದೆ ಎಂದು ನಿರ್ಮಾಪಕ ಪ್ರಕಾಶ್ ಬುದುರು ತಿಳಿಸಿದ್ದಾರೆ. ರೈತರ ಬದುಕು ಮತ್ತು ಸಾಮಾಜಿಕ ಕಾಳಜಿಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ರಾಧಿಕಾ ನಾರಾಯಣ್, ವರ್ಷಾ ಬೊಳ್ಳಮ್ಮ ಹಾಗೂ ಮಿತ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶಿವರಾಜ್‌ಕುಮಾರ್ ಅವರ ವಿಶೇಷ ಪಾತ್ರ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Read More
Next Story