ಶ್ರೀಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್; ‘ದೇವರಾಯ’ ಫಸ್ಟ್ ಲುಕ್ ರಿಲೀಸ್
x

‘ದೇವರಾಯ’ ಚಿತ್ರದಲ್ಲಿ ಕಿಚ್ಚ ಸುದೀಪ್‌ ಅವರು ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀಕೃಷ್ಣದೇವರಾಯ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶ್ರೀಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್; ‘ದೇವರಾಯ’ ಫಸ್ಟ್ ಲುಕ್ ರಿಲೀಸ್

ಕಿಚ್ಚ ಸುದೀಪ್‌ 53ನೇ ಹುಟ್ಟುಹಬ್ಬದಂದು ‘ದೇವರಾಯ’ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ ಮಾಡಿದ್ದಾರೆ. ಶ್ರೀಕೃಷ್ಣದೇವರಾಯನಾಗಿ ನಟಿಸಲಿರುವ ಸುದೀಪ್‌ ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.


Click the Play button to hear this message in audio format

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ 53ನೇ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಸುದೀಪ್‌ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಚಿತ್ರಕ್ಕೆ ‘ದೇವರಾಯ’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫಸ್ಟ್ ಲುಕ್‌ ಕೂಡ ಬಿಡುಗಡೆಯಾಗಿದೆ.

‘ದೇವರಾಯ’ ಚಿತ್ರದಲ್ಲಿ ಕಿಚ್ಚ ಸುದೀಪ್‌ ಅವರು ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀಕೃಷ್ಣದೇವರಾಯ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಯಾಗಿರುವ ಫಸ್ಟ್ ಲುಕ್‌ನಲ್ಲಿ ಸುದೀಪ್‌ ಅವರು ರಾಜವೈಭವದ ಉಡುಗೆ ಹಾಗೂ ಸಾಂಪ್ರದಾಯಿಕ ಆಭರಣಗಳೊಂದಿಗೆ ಗಂಭೀರ ಮತ್ತು ಪ್ರಭಾವಶಾಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಫಸ್ಟ್ ಲುಕ್‌ ಐತಿಹಾಸಿಕ ಹಿನ್ನೆಲೆಯ ಜೊತೆಗೆ ಶಕ್ತಿ, ಸಾಮ್ರಾಜ್ಯ, ವೈಭವ ಮತ್ತು ರಾಜ ಪರಂಪರೆಯನ್ನು ಆಧರಿಸಿದ ಅದ್ಧೂರಿ ಪೀರಿಯಡ್‌ ಡ್ರಾಮಾದ ಸುಳಿವು ನೀಡಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ನಿರ್ಮಿಸಲು ಚಿತ್ರತಂಡ ಸಜ್ಜಾಗಿದೆ.

2027ರ ಡಿಸೆಂಬರ್‌ನಲ್ಲಿ ತೆರೆಗೆ

‘ದೇವರಾಯ’ ಚಿತ್ರವನ್ನು ಪೀಪಲ್‌ ಮೀಡಿಯಾ ಫಾಕ್ಟರಿ ಸಂಸ್ಥೆ ನಿರ್ಮಿಸುತ್ತಿದೆ. ಅದ್ಧೂರಿ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಿರುವ ಈ ಸಂಸ್ಥೆ, ಸುದೀಪ್‌ ಅವರ ಈ ಐತಿಹಾಸಿಕ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಮುಂದಾಗಿದೆ. ಚಿತ್ರವು 2027ರ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಸುದೀಪ್‌ ಅವರ ಮುಂಬರುವ ಸಿನಿಮಾಗಳ ಪಟ್ಟಿಗೆ ‘ದೇವರಾಯ’ ಮತ್ತೊಂದು ಮಹತ್ವದ ಚಿತ್ರವಾಗಿ ಸೇರ್ಪಡೆಯಾಗಿದೆ. ಈಗಾಗಲೇ ಘೋಷಣೆಯಾಗಿರುವ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಜೊತೆಗೆ ‘ದೇವರಾಯ’ ಕೂಡ ಸುದೀಪ್‌ ಅವರ ವಿಭಿನ್ನ ಹಾಗೂ ಅದ್ಧೂರಿ ಪಾತ್ರಗಳ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

Read More
Next Story