x

ಒಟಿಟಿ ಒಪ್ಪಂದದ ಕಿರಿಕ್: ಉತ್ತರ ಭಾರತೀಯರಿಗಿಲ್ಲ ರಜನಿಕಾಂತ್ ನಟನೆಯ 'ಜೈಲರ್ 2' ನೋಡುವ ಭಾಗ್ಯ

ರಜನಿಕಾಂತ್ ನಟನೆಯ ಜೈಲರ್ 2 ಬಿಡುಗಡೆಗೆ ಸಂಕಷ್ಟ ಎದುರಾಗಿದೆ. 4 ವಾರಗಳ ಒಟಿಟಿ ಒಪ್ಪಂದಕ್ಕೆ ನಿರ್ಮಾಪಕರ ಪಟ್ಟು, 8 ವಾರಗಳ ಷರತ್ತಿಗೆ ಮಲ್ಟಿಪ್ಲೆಕ್ಸ್‌ಗಳ ಒತ್ತಾಯದಿಂದ ಉತ್ತರ ಭಾರತದಲ್ಲಿ ಬಿಡುಗಡೆ ಅನುಮಾನ.


Click the Play button to hear this message in audio format

ತಲೈವಾ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ಕಣ್ತುಂಬಿಕೊಳ್ಳುವ ಭಾಗ್ಯ ಉತ್ತರ ಭಾರತದ ಸಿನಿಪ್ರಿಯರಿಗೆ ಇಲ್ಲ ಎನ್ನಲಾಗುತ್ತಿದೆ. ಒಟಿಟಿ ಬಿಡುಗಡೆಯ ಒಪ್ಪಂದದ ವಿಚಾರದಲ್ಲಿ ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರ ನಡುವೆ ಸಂಘರ್ಷ ಏರ್ಪಟ್ಟಿದೆ. ಪಿವಿಆರ್ ಐನಾಕ್ಸ್ (PVR INOX) ಹಾಗೂ ಸಿನಿಪೊಲಿಸ್ (Cinepolis) ಮಲ್ಟಿಪ್ಲೆಕ್ಸ್‌ಗಳು 8 ವಾರಗಳ ಷರತ್ತು ವಿಧಿಸಿದ್ದರೆ, ಇತ್ತ ನಿರ್ಮಾಪಕರು 4 ವಾರಗಳ ಒಟಿಟಿ ಒಪ್ಪಂದಕ್ಕೆ ಪಟ್ಟು ಹಿಡಿದಿದ್ದಾರೆ. ಈ ಭಿನ್ನಾಭಿಪ್ರಾಯದಿಂದಾಗಿ ಉತ್ತರ ಭಾರತದ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುವುದು ಬಹುತೇಕ ಅನುಮಾನವಾಗಿದೆ.

Read More
Next Story