x

ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ ಗೋವಿಂದ ಪತ್ನಿ ಹೀಗಂದಿದ್ದೇಕೆ?

ಗೋವಿಂದ ಹಾಗೂ ಸುನೀತಾ ಅಹುಜಾ ದಾಂಪತ್ಯದ ಬಗ್ಗೆ ಮತ್ತೆ ವದಂತಿಗಳು ಹರಡಿವೆ. ಸುನೀತಾ ಹೇಳಿಕೆ ವೈರಲ್ ಆಗಿದ್ದು, ನಟಿಯೊಂದಿಗೆ ಗೋವಿಂದ ಕಾಣಿಸಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ.


Click the Play button to hear this message in audio format

ಬಾಲಿವುಡ್‌ನ ಖ್ಯಾತ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ಅವರ ದಾಂಪತ್ಯ ಜೀವನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆಗಳು ಶುರುವಾಗಿವೆ. ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿಯ ದರ್ಶನಕ್ಕೆ ಸುನೀತಾ ಅಹುಜಾ ಅವರು ಏಕಾಂಗಿಯಾಗಿ ಆಗಮಿಸಿದ್ದರೆ, ಗೋವಿಂದ ಅವರು ನಟಿ ಕೋಮಲ್ ರಾಣಿ ಅವರ ಜೊತೆ ಕಾಣಿಸಿಕೊಂಡಿರುವುದು ಹಲವು ವದಂತಿಗಳಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ "ಮನುಷ್ಯರಿಗಿಂತ ಪ್ರಾಣಿಗಳನ್ನೇ ಹೆಚ್ಚು ನಂಬಬಹುದು" ಎಂಬರ್ಥದಲ್ಲಿ ಸುನೀತಾ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Read More
Next Story