
ದುನಿಯಾ ವಿಜಯ್ ಅವರು 2018ರಲ್ಲಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ದುನಿಯಾ ವಿಜಯ್–ನಾಗರತ್ನ ದಾಂಪತ್ಯ ಅಂತ್ಯ: ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು
ನಾಗರತ್ನ ಅವರ ಜೀವನ ನಿರ್ವಹಣೆ ಹಾಗೂ ಕುಟುಂಬದ ಹಿತದೃಷ್ಟಿಯಿಂದ ದುನಿಯಾ ವಿಜಯ್ ಅವರು 2 ಕೋಟಿ ರೂ. ಮೊತ್ತವನ್ನು ಜೀವನಾಂಶವಾಗಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ದುನಿಯಾ ವಿಜಯ್–ನಾಗರತ್ನ ವಿಚ್ಛೇದನಕ್ಕೆ ಹೈಕೋರ್ಟ್ ಆದೇಶ ವರದಿ ಪ್ರಕಾರ, ನಟ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕಾನೂನುಬದ್ಧ ಅಂತ್ಯ ಸಿಕ್ಕಿದೆ. ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದ್ದು, ನಾಗರತ್ನ ಅವರಿಗೆ 2 ಕೋಟಿ ರೂ. ಜೀವನಾಂಶ ನೀಡುವಂತೆ ವಿಜಯ್‌ಗೆ ಆದೇಶಿಸಿದೆ.
ದುನಿಯಾ ವಿಜಯ್–ನಾಗರತ್ನ ದಾಂಪತ್ಯಕ್ಕೆ ತೆರೆ
ನಟ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ಅವರ ವಿಚ್ಛೇದನ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿರುವ ನ್ಯಾಯಾಲಯ, ನಾಗರತ್ನ ಅವರ ಜೀವನ ನಿರ್ವಹಣೆ ಹಾಗೂ ಮೂವರು ಮಕ್ಕಳ ಹಿತದೃಷ್ಟಿಯಿಂದ 2 ಕೋಟಿ ರೂ. ಪರಿಹಾರ ನೀಡುವಂತೆ ವಿಜಯ್‌ಗೆ ಸೂಚಿಸಿದೆ.
ಎರಡು ತಿಂಗಳಲ್ಲಿ 2 ಕೋಟಿ ರೂ. ಪಾವತಿಗೆ ಸೂಚನೆ
ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿಭೂಷಣ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ. ದುನಿಯಾ ವಿಜಯ್ ಅವರ ಸ್ಥಾನಮಾನ ಹಾಗೂ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ 2 ಕೋಟಿ ರೂ. ಮೊತ್ತವನ್ನು ಒನ್‌ಟೈಮ್ ಸೆಟ್ಲ್‌ಮೆಂಟ್ ರೂಪದಲ್ಲಿ ಎರಡು ತಿಂಗಳೊಳಗೆ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ.
ಈ ಹಿಂದೆ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯ
ದುನಿಯಾ ವಿಜಯ್ ಅವರು ನಾಗರತ್ನ ಅವರಿಂದ ವಿಚ್ಛೇದನ ಕೋರಿ 2018ರಲ್ಲಿ ಅರ್ಜಿ ಸಲ್ಲಿಸಿದ್ದರು. ಕ್ರೌರ್ಯದ ಆರೋಪಗಳನ್ನು ಮಾಡಿದ್ದರಾದರೂ, ಅವುಗಳನ್ನು ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ 2024ರಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

