Toxic| ಸಿನೆಮಾಕಾನ್‌ನಲ್ಲಿ ಯಶ್ ಟಾಕ್ಸಿಕ್ ಹವಾ: ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ
x

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕ ಜೂನ್ 4ಕ್ಕೆ ಮುಂದೂಡಿಕೆ

Toxic| ಸಿನೆಮಾಕಾನ್‌ನಲ್ಲಿ ಯಶ್ 'ಟಾಕ್ಸಿಕ್' ಹವಾ: ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ 2026ರ ಜೂನ್ 4 ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಸಿನೆಮಾಕಾನ್‌ನಲ್ಲಿ ಇದರ 9 ನಿಮಿಷಗಳ ಎಕ್ಸ್‌ಕ್ಲೂಸಿವ್ ಪ್ರಿವ್ಯೂ ಪ್ರದರ್ಶಿಸಲಾಗಿದೆ.


Click the Play button to hear this message in audio format

ಅಮೇರಿಕಾದ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಸಿನೆಮಾಕಾನ್ ಕಾರ್ಯಕ್ರಮದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಸಿನಿಮಾದ ವಿಶೇಷ ತುಣುಕುಗಳನ್ನು ಪ್ರದರ್ಶಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು 1947ರ ನಂತರದ ಕಾಲ್ಪನಿಕ ಹಿನ್ನೆಲೆಯಲ್ಲಿ ನಡೆಯುವ ತಂದೆ-ಮಗನ ಸೇಡಿನ ಕಥೆಯಾಗಿದ್ದು, ವಿಶೇಷವಾಗಿ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದ ಗೋವಾದ ಪರಿಸರವನ್ನು ಇಲ್ಲಿ ಬಿಂಬಿಸಲಾಗಿದೆ.

1940 ರಿಂದ 1970ರ ದಶಕದವರೆಗಿನ ಕಾಲಘಟ್ಟವನ್ನು ಈ ಸಿನಿಮಾ ಒಳಗೊಂಡಿದ್ದು, ಇದರಲ್ಲಿ ಹೈ-ವೋಲ್ಟೇಜ್ ಆಕ್ಷನ್ ಸನ್ನಿವೇಶಗಳ ಜೊತೆಗೆ ಅಡಗಿದ ಪ್ರೇಮಕಥೆ ಹಾಗೂ ಭಾವನಾತ್ಮಕ ಸವಾಲುಗಳೂ ಇರಲಿವೆ. ಸಿನೆಮಾಕಾನ್ ಪ್ರದರ್ಶನದಲ್ಲಿ ಸುಮಾರು ಒಂಬತ್ತು ನಿಮಿಷಗಳ ಸುದೀರ್ಘ ಪ್ರಿವ್ಯೂ ನೋಡಿದ ವಿದೇಶಿ ಪ್ರದರ್ಶಕರು ಯಶ್ ಅವರ ಗ್ಯಾಂಗ್‌ಸ್ಟರ್ ಲುಕ್ ಮತ್ತು ಹಿಂದೆಂದೂ ಕಾಣದ ಆಕ್ಷನ್ ದೃಶ್ಯಗಳಿಗೆ ಮಾರುಹೋಗಿದ್ದಾರೆ.

ಜೂನ್ 4 ರಂದು ಈ ಚಿತ್ರವು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಇಂಗ್ಲಿಷ್ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಮತ್ತಷ್ಟು ರೋಚಕ ಅಪ್‌ಡೇಟ್‌ಗಳನ್ನು ನೀಡುವುದಾಗಿ ಯಶ್ ಭರವಸೆ ನೀಡಿದ್ದು, ಪ್ರಸ್ತುತ ಈ ಸುದ್ದಿ ಗಾಂಧಿನಗರದಿಂದ ಹಾಲಿವುಡ್‌ವರೆಗೂ ಭಾರಿ ಸದ್ದು ಮಾಡುತ್ತಿದೆ.

'ಟಾಕ್ಸಿಕ್' ಚಿತ್ರವು 1940 ರಿಂದ 1970 ರ ಕಾಲಘಟ್ಟದ ನಡುವೆ ನಡೆಯುವ ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ವಿಶೇಷವೆಂದರೆ ಈ ಚಿತ್ರಕ್ಕೆ ಸ್ವತಃ ಯಶ್ ಅವರೇ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ದಕ್ಷಿಣದ ಸ್ಟಾರ್ ನಟಿ ನಯನತಾರಾ, ಹುಮಾ ಖುರೇಶಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಸಂದರ್ಶನದಲ್ಲಿ ಭಾಗವಹಿಸಿದ್ದ ಯಶ್‌ ಈ ಚಿತ್ರವು ಕೇವಲ ಸಾಮಾನ್ಯ ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಾಗಿ ಮಾನವ ಮನೋವಿಜ್ಞಾನದ ಆಳವಾದ ಪದರಗಳನ್ನು ಕೆದಕುವ ವಿಭಿನ್ನ ಪ್ರಯತ್ನ ಎಂದು ಅವರು ಹಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

Read More
Next Story