ಮದುವೆ ಬಳಿಕ ರಶ್ಮಿಕಾ ಮೊದಲ ಹುಟ್ಟುಹಬ್ಬ: ಐ ಲವ್ ಯೂ ಜಯಮ್ಮ ಎಂದ ವಿಜಯ್ ದೇವರಕೊಂಡ!
x

ಮದುವೆ ಬಳಿಕ ರಶ್ಮಿಕಾ ಮೊದಲ ಹುಟ್ಟುಹಬ್ಬ: 'ಐ ಲವ್ ಯೂ ಜಯಮ್ಮ' ಎಂದ ವಿಜಯ್ ದೇವರಕೊಂಡ!

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ 58 ಸೆಕೆಂಡ್‌ಗಳ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿರುವ ವಿಜಯ್ , "ಐ ಲವ್ ಯೂ ಜಯಮ್ಮ :)" ಎಂದು ಪ್ರೀತಿಯಿಂದ ಕ್ಯಾಪ್ಷನ್ ನೀಡಿದ್ದಾರೆ.


Click the Play button to hear this message in audio format

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು (ಏಪ್ರಿಲ್ 5) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಫೆಬ್ರವರಿಯಲ್ಲಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ತಾರಾಜೋಡಿಗೆ, ಮದುವೆಯಾದ ನಂತರದ ಮೊದಲ ಹುಟ್ಟುಹಬ್ಬ ಇದಾಗಿದೆ. ಈ ವಿಶೇಷ ದಿನದಂದು ನಟ ವಿಜಯ್ ದೇವರಕೊಂಡ ಅವರು ತಮ್ಮ ಪ್ರೀತಿಯ ಪತ್ನಿಗೆ ಅತ್ಯಂತ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ 58 ಸೆಕೆಂಡ್‌ಗಳ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿರುವ ವಿಜಯ್ ದೇವರಕೊಂಡ, "ಐ ಲವ್ ಯೂ ಜಯಮ್ಮ :)" ಎಂದು ಪ್ರೀತಿಯಿಂದ ಕ್ಯಾಪ್ಷನ್ ನೀಡಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆಯುವ ಜೊತೆಗೆ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?:

ಈ ವಿಡಿಯೋದಲ್ಲಿ ಇವರಿಬ್ಬರೂ ಒಟ್ಟಾಗಿ ನಟಿಸುತ್ತಿರುವ ಮುಂಬರುವ 'ರಣಬಾಲಿ' (Ranabaali) ಚಿತ್ರದ ದೃಶ್ಯಗಳನ್ನು ಅದ್ಭುತವಾಗಿ ಸಂಯೋಜಿಸಲಾಗಿದೆ. ವಿಡಿಯೋದಲ್ಲಿ ಸಾಂಪ್ರದಾಯಿಕ ಆಭರಣಗಳ ಸೌಂದರ್ಯ, ರಶ್ಮಿಕಾ ಹಣೆಗೆ ವಿಜಯ್ ಬಿಂದಿ ಇಡುವ ದೃಶ್ಯ ಹಾಗೂ ಇಬ್ಬರ ನಡುವಿನ ಆತ್ಮೀಯ ಮತ್ತು ರೊಮ್ಯಾಂಟಿಕ್ ಕ್ಷಣಗಳು ಅಭಿಮಾನಿಗಳ ಮನಗೆದ್ದಿವೆ. ವಿಡಿಯೋದ ಕೊನೆಯಲ್ಲಿ "ಹ್ಯಾಪಿ ಬರ್ತ್‌ಡೇ ರಶ್ಮಿಕಾ ಮಂದಣ್ಣ" ಎಂಬ ಶುಭಾಶಯದ ಜೊತೆಗೆ 'ರಣಬಾಲಿ' ಚಿತ್ರದ ಟೈಟಲ್ ಕಾರ್ಡ್ ಕೂಡ ಮೂಡಿಬಂದಿದೆ.

ಸಿನಿಮಾ ಪ್ರಚಾರದ ಜೊತೆಗೆ ಪ್ರೀತಿ

ಈ ಮುಂಬರುವ ಸಿನಿಮಾದಲ್ಲಿ ವಿಜಯ್ ಅವರು 'ರಣಬಾಲಿ' ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ 'ಜಯಮ್ಮ' ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಹುಕಾಲದಿಂದ 'ವಿರೋಶ್' (Virosh) ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಈ ಜೋಡಿ, ಮದುವೆಯ ಬಳಿಕ ಅಭಿಮಾನಿಗಳಿಗೆ ನೀಡಿದ ಈ ಜಂಟಿ ಉಡುಗೊರೆ ಸಂಚಲನ ಸೃಷ್ಟಿಸಿದೆ. ಒಂದೆಡೆ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಲೇ, ಮತ್ತೊಂದೆಡೆ ಮುಂಬರುವ ತಮ್ಮ ಚಿತ್ರದ ಪ್ರಚಾರವನ್ನೂ ಅತ್ಯಂತ ನಾಜೂಕಾಗಿ ಮಾಡಿದ್ದಾರೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ 'ರಣಬಾಲಿ' ಚಿತ್ರ ಅದ್ದೂರಿಯಾಗಿ ತೆರೆಗಪ್ಪಳಿಸಲಿದ್ದು, ರಿಯಲ್ ಲೈಫ್ ಜೋಡಿಯ ರೀಲ್ ಲೈಫ್ ಕೆಮಿಸ್ಟ್ರಿ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Read More
Next Story