ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ: ಪತ್ನಿ, ಮಕ್ಕಳು ಗೈರಾಗಿದ್ದೇಕೆ?
x

ವಿಜಯ್ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಹಾಗೂ ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ.

ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ: ಪತ್ನಿ, ಮಕ್ಕಳು ಗೈರಾಗಿದ್ದೇಕೆ?

ದಳಪತಿ ವಿಜಯ್ ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರೂ, ಪತ್ನಿ ಸಂಗೀತ ಮತ್ತು ಮಕ್ಕಳು ಗೈರಾಗಿದ್ದರು. ಕೌಟುಂಬಿಕ ಕಲಹ ಮತ್ತು ವಿಚ್ಛೇದನ ಅರ್ಜಿ ಇದಕ್ಕೆ ಕಾರಣ ಎನ್ನಲಾಗಿದೆ.


Click the Play button to hear this message in audio format

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ಅವರು ಭಾನುವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರ ಪೋಷಕರಾದ ಶೋಭಾ ಚಂದ್ರಶೇಖರ್ ಮತ್ತು ಎಸ್.ಎ. ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆದರೆ ವಿಜಯ್ ಅವರ ವೈಯಕ್ತಿಕ ಜೀವನದ ಬಿಕ್ಕಟ್ಟು ಈ ಸಮಾರಂಭದಲ್ಲಿಯೂ ಎದ್ದು ಕಾಣುತ್ತಿತ್ತು.

ವಿಜಯ್ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಈ ಐತಿಹಾಸಿಕ ಕ್ಷಣದಿಂದ ದೂರ ಉಳಿದಿರುವುದು ಅಭಿಮಾನಿಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ಸಮಯದಿಂದ ವಿಜಯ್ ಮತ್ತು ಸಂಗೀತ ನಡುವಿನ ಸಂಬಂಧ ಹಳಸಿದ್ದು, ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. 2026ರ ಫೆಬ್ರವರಿಯಲ್ಲಿ ಸಂಗೀತ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.

ತಂದೆಯ ಮೇಲಿನ ಅಸಮಾಧಾನವನ್ನು ಮಗ ಜೇಸನ್ ಸಂಜಯ್ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದರು. ಇತ್ತೀಚೆಗೆ ಅವರು ತಮ್ಮ ತಂದೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್-ಫಾಲೋ ಮಾಡಿದ್ದಲ್ಲದೆ, ತಮ್ಮ ಹೆಸರಿನಲ್ಲಿದ್ದ ವಿಜಯ್ ಅವರ ಗುರುತನ್ನು (V) ತೆಗೆದುಹಾಕಿ 'ಜೇಸನ್ ಸಂಜಯ್ ಎಸ್' ಎಂದು ಬದಲಾಯಿಸಿಕೊಂಡಿದ್ದರು. ಚುನಾವಣಾ ಅಫಿಡವಿಟ್‌ನಲ್ಲಿ ವಿಜಯ್ ಅವರು ಸಂಗೀತ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಠೇವಣಿ ಮತ್ತು ಚಿನ್ನಾಭರಣಗಳನ್ನು ಮೀಸಲಿಟ್ಟಿರುವುದು ಕಂಡುಬಂದಿದ್ದರೂ, ಕುಟುಂಬದ ನಡುವಿನ ಬಿರುಕು ಮಾತ್ರ ನಿರಂತರವಾಗಿದೆ. ಸದ್ಯ ನ್ಯಾಯಾಲಯವು ವಿಚ್ಛೇದನದ ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಿದೆ.

Read More
Next Story