
ಬಾಲಿವುಡ್‌ನ ಜನಪ್ರಿಯ ಜೋಡಿಯಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ತಮ್ಮ ರೊಮ್ಯಾಂಟಿಕ್ ಕ್ಷಣದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ.
ಮಳೆಯ ನಡುವೆ ವಿಕ್ಕಿ-ಕತ್ರಿನಾ ರೊಮ್ಯಾಂಟಿಕ್ ಫೋಟೋ ವೈರಲ್
ವಿಕ್ಕಿ ಕೌಶಲ್ ಹಂಚಿಕೊಂಡ 'Rains and You' ಪೋಸ್ಟ್‌ನಲ್ಲಿ ಕತ್ರಿನಾ ಕೈಫ್ ಜೊತೆಗಿನ ರೊಮ್ಯಾಂಟಿಕ್ ಕ್ಷಣ ವೈರಲ್ ಆಗಿದೆ. ಅಭಿಮಾನಿಗಳು ಜೋಡಿಯ ಆತ್ಮೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರೀತಿಯ ಜೋಡಿ ಎಂದೇ ಅಭಿಮಾನಿಗಳ ಮನ ಗೆದ್ದಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮತ್ತೊಮ್ಮೆ ತಮ್ಮ ರೊಮ್ಯಾಂಟಿಕ್ ಕ್ಷಣದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳುವ ಈ ಜೋಡಿ, ಮಳೆಗಾಲದ ಸುಂದರ ಕ್ಷಣವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ವಿಕ್ಕಿ ಕೌಶಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಪ್ಪು-ಬಿಳುಪು ಛಾಯಾಚಿತ್ರವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ "Rains and you" ಎಂಬ ಸರಳ ಶೀರ್ಷಿಕೆ ನೀಡಿದ್ದಾರೆ. ಫೋಟೋದಲ್ಲಿ ಕತ್ರಿನಾ ಕೈಫ್ ವಿಕ್ಕಿಯ ಭುಜದ ಮೇಲೆ ತಲೆ ನೆತ್ತಿಕೊಂಡು ಮಳೆಯ ಸೊಬಗನ್ನು ಆಸ್ವಾದಿಸುತ್ತಿರುವುದು ಕಾಣುತ್ತದೆ. ಇಬ್ಬರ ನಡುವಿನ ಆತ್ಮೀಯತೆ ಮತ್ತು ನಿಶ್ಶಬ್ದ ಪ್ರೀತಿಯನ್ನು ಈ ಚಿತ್ರ ಸುಂದರವಾಗಿ ಸೆರೆಹಿಡಿದಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹೃದಯದ ಇಮೋಜಿಗಳು, ಮೆಚ್ಚುಗೆಗಳ ಕಾಮೆಂಟ್‌ಗಳು ಹಾಗೂ "ಕ್ಯೂಟೆಸ್ಟ್ ಕಪಲ್", "ರಿಲೇಷನ್‌ಶಿಪ್ ಗೋಲ್ಸ್" ಎಂದು ಹೊಗಳಿದ್ದಾರೆ. ತಮ್ಮ ವೈಯಕ್ತಿಕ ಕ್ಷಣಗಳನ್ನು ಅಪರೂಪಕ್ಕೆ ಮಾತ್ರ ಹಂಚಿಕೊಳ್ಳುವ ಈ ಜೋಡಿಯಿಂದ ಬಂದಿರುವ ಈ ಚಿತ್ರ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
2021ರಲ್ಲಿ ವಿವಾಹವಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದ್ದು, ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಬಹಿರಂಗವಾಗಿ ಮಾತನಾಡದಿದ್ದರೂ, ಇಂತಹ ಅಪರೂಪದ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

