Toxic Movie Controversy| ನಿರ್ದೇಶಕಿ ಗೀತು ಮೋಹನ್ ದಾಸ್ ಬೆಂಬಲಕ್ಕೆ ನಿಂತ ಯಶ್
x

ನಿರ್ದೇಶಕಿ ಗೀತು ಮೋಹನ್ ದಾಸ್ ಬೆಂಬಲಕ್ಕೆ ನಿಂತ ನಟ ಯಶ್

Toxic Movie Controversy| ನಿರ್ದೇಶಕಿ ಗೀತು ಮೋಹನ್ ದಾಸ್ ಬೆಂಬಲಕ್ಕೆ ನಿಂತ ಯಶ್

ಚಿತ್ರತಂಡವು ಆರಂಭದಲ್ಲಿ ಏಪ್ರಿಲ್ 10ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಮಧ್ಯ ಪ್ರಾಚ್ಯ ಯುದ್ಧದ ಪರಿಣಾಮ ಸಿನಿಮಾ ಜೂನ್‌.5 ಕ್ಕೆ ಸಿನಿಮಾ ಮುಂದೂಡಲ್ಪಟ್ಟಿದೆ.


Click the Play button to hear this message in audio format

ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲಿನ ಅತಿರೇಕದ ದೃಶ್ಯಗಳ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ನಟ ಯಶ್ ಈಗ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಸೃಜನಾತ್ಮಕ ನಿರ್ಧಾರ ಬೆಂಬಲಿಸಿರುವ ಅವರು, ಈ ಟೀಕೆಗಳನ್ನು 'ರಿಫ್ರೆಶಿಂಗ್' ಎಂದು ಕರೆದಿದ್ದಾರೆ.

ಸಾಮಾನ್ಯವಾಗಿ ಆಕ್ಷನ್ ಸಿನಿಮಾಗಳೆಂದರೆ ಕೇವಲ ಪುರುಷ ನಿರ್ದೇಶಕರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಆದರೆ ಒಬ್ಬ ಮಹಿಳಾ ನಿರ್ದೇಶಕಿಯ ದೃಷ್ಟಿಕೋನದಲ್ಲಿ ಗ್ಯಾಂಗ್‌ಸ್ಟರ್ ಕಥೆ ನೋಡುವುದೇ ಒಂದು ಹೊಸ ಅನುಭವ ಎಂದು ಯಶ್ ಅಭಿಪ್ರಾಯಪಟ್ಟಿದ್ದಾರೆ.

ಗೀತು ಮೋಹನ್ ದಾಸ್ ಅವರು ಅತ್ಯುತ್ತಮ ಲೇಖಕಿ. ತಮ್ಮ ಕೆಲಸದ ಮೇಲೆ ಅವರಿಗೆ ಸ್ಪಷ್ಟವಾದ ವಿಶ್ವಾಸವಿದೆ. ಈ ಸಿನಿಮಾ ಪ್ರಯಾಣದಲ್ಲಿ ಮಹಿಳಾ ದೃಷ್ಟಿಕೋನದಿಂದ ಭಾವನೆಗಳು, ಪ್ರೇಮ ಮತ್ತು ಕಾಮವನ್ನು ಹೇಗೆ ಭಿನ್ನವಾಗಿ ತೋರಿಸಬಹುದು ಎಂಬ ಹೊಸ ವಿಷಯವನ್ನು ತಾವು ಕಲಿಯುತ್ತಿರುವುದಾಗಿ ಯಶ್ ಹೇಳಿದ್ದಾರೆ.

ಈ ನಡುವೆ ಟ್ರೈಲರ್‌ನಲ್ಲಿನ ಅತಿರೇಕದ ದೃಶ್ಯಗಳ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಶನ್ ಈಗಾಗಲೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ದೂರು ದಾಖಲಿಸಿದೆ. ಆದರೂ ಯಶ್ ಅವರು ತಮ್ಮ ನಿರ್ದೇಶಕಿಯ ಪರ ಗಟ್ಟಿಯಾಗಿ ನಿಂತಿದ್ದಾರೆ.

ವಿವಾದದ ಹಿನ್ನೆಲೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾದ ಬೆನ್ನಲ್ಲೇ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಟ್ರೈಲರ್‌ನಲ್ಲಿರುವ ಕೆಲವು ಅತಿರೇಕದ ದೃಶ್ಯಗಳು ಮತ್ತು ಪ್ರದರ್ಶಿಸಲಾದ ಸೃಜನಾತ್ಮಕ ಆಯ್ಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಚಿತ್ರತಂಡವು ಆರಂಭದಲ್ಲಿ ಏಪ್ರಿಲ್ 10ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಮಧ್ಯ ಪ್ರಾಚ್ಯ ಯುದ್ಧದ ಪರಿಣಾಮ ಸಿನಿಮಾ ಜೂನ್‌.5 ಕ್ಕೆ ಸಿನಿಮಾ ಮುಂದೂಡಲ್ಪಟ್ಟಿದೆ.

Read More
Next Story