
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕಾತರಕ್ಕೆ ತೆರೆ ಬೀಳುವ ಸಮಯ ಹತ್ತಿರವಾಗಿದೆ.
'ತಬಾಹಿ' ವಿವಾದ: ಕಿಯಾರಾ ಪರ ನಿಂತ 'ಟಾಕ್ಸಿಕ್' ನಟ ಬೆನೆಡಿಕ್ಟ್
ಯಶ್ ಕೂಡ ಮದುವೆಯಾದವರು, ಟೀಕೆ ಮಾತ್ರ ಕಿಯಾರಾಗೆ ಯಾಕೆ? ಎಂದು ಪ್ರಶ್ನಿಸಿದ ಬೆನೆಡಿಕ್ಟ್ ಗ್ಯಾರೆಟ್
'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ರೊಮ್ಯಾಂಟಿಕ್ ದೃಶ್ಯಗಳು ವೈರಲ್ ಆದ ಬಳಿಕ, ಕಿಯಾರಾ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದರು. ಮದುವೆಯಾದ ಬಳಿಕ ಹಾಗೂ ತಾಯಿಯಾದ ನಂತರ ಇಂತಹ ದೃಶ್ಯಗಳಲ್ಲಿ ನಟಿಸಿದ್ದಕ್ಕಾಗಿ ಕೆಲವರು ಕಿಯಾರಾರನ್ನು ಟೀಕಿಸಿದ್ದರು. ಆದರೆ ಇದೇ ವಿಚಾರದಲ್ಲಿ 'ಟಾಕ್ಸಿಕ್' ಚಿತ್ರದ ನಟ ಬೆನೆಡಿಕ್ಟ್ ಗ್ಯಾರೆಟ್ ಕಿಯಾರಾ ಪರವಾಗಿ ಧ್ವನಿ ಎತ್ತಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ಮಾತನಾಡಿರುವ ಬೆನೆಡಿಕ್ಟ್, "ಯಶ್ ಕೂಡ ಮದುವೆಯಾದವರು, ಅವರಿಗೆ ಮಕ್ಕಳಿದ್ದಾರೆ. ಹಾಗಿದ್ದರೂ ಪ್ರಶಂಸೆ ಅವರಿಗೆ, ಟೀಕೆ ಮಾತ್ರ ಕಿಯಾರಾಗೆ ಯಾಕೆ? ಇಬ್ಬರೂ ನಟರು. ಕಥೆಯ ಅವಶ್ಯಕತೆಗೆ ತಕ್ಕಂತೆ ಪಾತ್ರಗಳನ್ನು ಜೀವಂತಗೊಳಿಸುವುದೇ ಅವರ ಕೆಲಸ. ವೈಯಕ್ತಿಕ ಜೀವನ ಮತ್ತು ವೃತ್ತಿಪರ ಅಭಿನಯವನ್ನು ಜನರು ಬೇರ್ಪಡಿಸಿ ನೋಡಬೇಕು" ಎಂದು ಹೇಳಿದ್ದಾರೆ.
ಇದರ ಜೊತೆಗೆ, "ಈ ವಿವಾದವು ನಟ-ನಟಿಯರ ಬಗ್ಗೆ ಅಲ್ಲ, ಸಮಾಜದಲ್ಲಿರುವ ದ್ವಂದ್ವ ಮನೋಭಾವವನ್ನು ತೋರಿಸುತ್ತದೆ. ಮಹಿಳಾ ಕಲಾವಿದರನ್ನೇ ಹೆಚ್ಚು ಟೀಕಿಸುವ ಪ್ರವೃತ್ತಿ ಬದಲಾಗಬೇಕು" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
'ತಬಾಹಿ' ಹಾಡು ಬಿಡುಗಡೆಯಾದ ಬಳಿಕ ಯಶ್ ಮತ್ತು ಕಿಯಾರಾ ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದರೂ, ಕಿಯಾರಾ ವಿರುದ್ಧ ನಡೆದ ಟ್ರೋಲಿಂಗ್ ಮತ್ತೆ ಸಿನಿರಂಗದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆಯುವ ದ್ವಂದ್ವ ಮಾನದಂಡಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

