ಶಾರುಖ್ ಖಾನ್‌ ಹೆಸರಲ್ಲಿ ಆರ್ಡರ್: ಮನ್ನತ್ ಬಾಗಿಲಲ್ಲಿ ಡೆಲಿವರಿ ಬಾಯ್‌ಗೆ ಬಿಗ್ ಟ್ವಿಸ್ಟ್
x

ಶಾರುಖ್ ಖಾನ್ ಹೆಸರಿನ ಆರ್ಡರ್ ಹಿಡಿದು ಮನ್ನತ್ ತಲುಪಿದ ಡೆಲಿವರಿ ಬಾಯ್‌ಗೆ ಕಾದಿತ್ತು ಬಿಗ್ ಟ್ವಿಸ್ಟ್

ಶಾರುಖ್ ಖಾನ್‌ ಹೆಸರಲ್ಲಿ ಆರ್ಡರ್: ಮನ್ನತ್ ಬಾಗಿಲಲ್ಲಿ ಡೆಲಿವರಿ ಬಾಯ್‌ಗೆ ಬಿಗ್ ಟ್ವಿಸ್ಟ್

ಶಾರುಖ್ ಖಾನ್ ಹೆಸರಿನ ಆರ್ಡರ್ ಹಿಡಿದು ಮನ್ನತ್ ತಲುಪಿದ ಡೆಲಿವರಿ ಬಾಯ್‌ಗೆ ಕಾದಿತ್ತು ಬಿಗ್ ಟ್ವಿಸ್ಟ್! ಕಿಂಗ್ ಖಾನ್ ಭೇಟಿಯಾಗುವ ಆಸೆಯಲ್ಲಿದ್ದವನಿಗೆ ಕೊನೆಗೆ ಸಿಕ್ಕಿದ್ದು ಯಾರು? ಈ ವೈರಲ್ ಸುದ್ದಿ ಓದಿ.


Click the Play button to hear this message in audio format

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?, ಮುಂಬೈನ ಅವರ ನಿವಾಸ 'ಮನ್ನತ್' ಎದುರು ಪ್ರತಿದಿನ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಣ್ಣ ನೋಟಕ್ಕಾಗಿ ಗಂಟೆಗಟ್ಟಲೆ ಕಾದು ಕುಳಿತಿರುತ್ತಾರೆ. ಇತ್ತೀಚೆಗೆ ಮುಂಬೈನ ಡೆಲಿವರಿ ಬಾಯ್‌ಗೆ ಇಂತಹದ್ದೇ ಒಂದು ಸುವರ್ಣ ಅವಕಾಶ ಒದಗಿ ಬಂದಿತ್ತು. ಆತನಿಗೆ ಬಂದ ಒಂದು ಆರ್ಡರ್‌ನಲ್ಲಿ ಗ್ರಾಹಕರ ಹೆಸರು 'ಶಾರುಖ್ ಖಾನ್' ಎಂದು ನಮೂದಿಸಲಾಗಿತ್ತು ಮತ್ತು ವಿಳಾಸ ಕೂಡ 'ಮನ್ನತ್' ಎಂದೇ ಇತ್ತು. ಇದನ್ನು ನೋಡಿ ಫುಲ್ ಖುಷಿಯಾದ ಡೆಲಿವರಿ ಬಾಯ್, ಇಂದು ಹೇಗಾದರೂ ಮಾಡಿ ಕಿಂಗ್ ಖಾನ್‌ರನ್ನು ನೇರವಾಗಿ ಭೇಟಿಯಾಗಬಹುದು ಎಂದು ಸಂಭ್ರಮಿಸಿದ್ದ.

"ಶಾರುಖ್ ಖಾನ್ ಹೆಸರಿನಲ್ಲಿ ಆರ್ಡರ್ ಬಂದಿದೆ, ಮನ್ನತ್‌ಗೆ ಹೋಗಬೇಕೆಂಬ ನನ್ನ ಮನ್ನತ್ (ಬಯಕೆ) ಇಂದು ಈಡೇರುತ್ತಿದೆ" ಎಂದು ಆತ ವಿಡಿಯೋ ಮಾಡುತ್ತಾ ಅತ್ಯಂತ ಉತ್ಸಾಹದಿಂದ ಮನ್ನತ್ ಕಡೆಗೆ ಧಾವಿಸಿದ್ದಾನೆ. ಶಾರುಖ್ ಖಾನ್ ಕೂಡ ಆನ್‌ಲೈನ್‌ನಲ್ಲಿ ಬಟ್ಟೆಗಳನ್ನು ಆರ್ಡರ್ ಮಾಡುತ್ತಾರಾ ಎಂದು ಆಶ್ಚರ್ಯಪಡುತ್ತಲೇ ಆತ ವಿಳಾಸವನ್ನು ತಲುಪಿದ್ದಾನೆ. ಆದರೆ ಮನ್ನತ್ ಬಾಗಿಲ ಬಳಿ ಹೋದಾಗ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಕಾದಿತ್ತು. ಡೆಲಿವರಿ ಬಾಯ್ ಅಲ್ಲಿಗೆ ತಲುಪುತ್ತಿದ್ದಂತೆ ವ್ಯಕ್ತಿಯೊಬ್ಬರು ಬಂದು ಆ ಪಾರ್ಸೆಲ್ ನನ್ನದು ಎಂದು ಹೇಳಿದ್ದಾರೆ. ಗೊಂದಲಕ್ಕೊಳಗಾದ ಡೆಲಿವರಿ ಬಾಯ್ ಇದು ಶಾರುಖ್ ಖಾನ್ ಅವರಿಗೆ ಸೇರಿದ್ದು ಎಂದಾಗ, ಆ ವ್ಯಕ್ತಿ ನಗುತ್ತಾ "ನನ್ನ ಹೆಸರು ಕೂಡ ಶಾರುಖ್ ಖಾನ್" ಎಂದು ಹೇಳಿ ಆತನಿಗೆ ಶಾಕ್ ನೀಡಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಎಂದು ಭಾವಿಸಿ ಬಂದಿದ್ದ ಡೆಲಿವರಿ ಬಾಯ್‌ಗೆ ಕೊನೆಗೆ ಪಾರ್ಸೆಲ್ ಬುಕ್ ಮಾಡಿದ್ದು ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿ ಎಂದು ತಿಳಿದು ನಿರಾಸೆಯಾಗಿದೆ. ತಾನು ಸುಮ್ಮನೆ ಅತಿಯಾಗಿ ಆಸೆಪಟ್ಟೆ ಎಂದು ಹೇಳುತ್ತಾ ಆತ ಅಲ್ಲಿಂದ ಮರಳಿದ್ದಾನೆ. ಈ ಮುಗ್ಧ ಮತ್ತು ತಮಾಷೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಪ್ರಸಂಗವನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಶಾರುಖ್ ಖಾನ್ ಅವರು ತಮ್ಮ ಮುಂದಿನ ಚಿತ್ರ 'ಕಿಂಗ್' ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇದರಲ್ಲಿ ಅವರ ಮಗಳು ಸುಹಾನಾ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

Read More
Next Story