ಆಮಿರ್ ಖಾನ್ ಹೊಸ ಸಿನಿಮಾ 'ಸಿಲ್ಕ್ಯಾರಾ 41' - 17 ದಿನಗಳ ಸಾವು-ಬದುಕಿನ ರಿಯಲ್ ಹೋರಾಟ ಈಗ ಬೆಳ್ಳಿಪರದೆಗೆ
2023 ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ದುರಂತ ಮತ್ತು ಅದರಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದ ರೋಮಾಂಚಕ ರಕ್ಷಣಾ ಕಾರ್ಯಾಚರಣೆ ಈಗ ಬೆಳ್ಳಿಪರದೆಗೆ ಬರಲು ಸಿದ್ಧವಾಗಿದೆ.
2023 ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ದುರಂತ ಮತ್ತು ಅದರಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದ ರೋಮಾಂಚಕ ರಕ್ಷಣಾ ಕಾರ್ಯಾಚರಣೆ ಈಗ ಬೆಳ್ಳಿಪರದೆಗೆ ಬರಲು ಸಿದ್ಧವಾಗಿದೆ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಷನಿಸ್ಟ್ ಆಮಿರ್ ಖಾನ್ ಮತ್ತು ಖ್ಯಾತ ನಿರ್ದೇಶಕ ಕಬೀರ್ ಖಾನ್ ಈ ಐತಿಹಾಸಿಕ ರಕ್ಷಣಾ ಕಾರ್ಯಾಚರಣೆಯನ್ನು ಆಧರಿಸಿ 'ಸಿಲ್ಕ್ಯಾರಾ 41' ಎಂಬ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಆಮಿರ್ ಖಾನ್ ಪ್ರೊಡಕ್ಷನ್ಸ್, ಕಬೀರ್ ಖಾನ್ ಫಿಲ್ಮ್ಸ್ ಹಾಗೂ ಆಸ್ಟ್ರೇಲಿಯಾದ ಮೈಂಡ್ ಬ್ಲೋಯಿಂಗ್ ಫಿಲ್ಮ್ಸ್ ಸಂಸ್ಥೆಗಳು ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆಡಿಯೋ-ವಿಶುವಲ್ ಸಹ-ನಿರ್ಮಾಣ ಒಪ್ಪಂದದಡಿ ತಯಾರಾಗುತ್ತಿರುವ ಮೊದಲ ಪ್ರಮುಖ ಚಿತ್ರ ಇದಾಗಿದೆ.
Next Story

