ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾದ ಈಥಾ ಚಿತ್ರದ ಟೀಸರ್
x

ಶ್ರದ್ಧಾ ಕಪೂರ್ ನಟನೆಯ 'ಈಥಾ' ಚಿತ್ರದ ಟೀಸರ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾದ 'ಈಥಾ' ಚಿತ್ರದ ಟೀಸರ್

'ಕಾಕ್‌ಟೇಲ್ 2' ಜೊತೆ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದ ಶ್ರದ್ಧಾ ಕಪೂರ್ ನಟನೆಯ 'ಈಥಾ' ಚಿತ್ರದ ಟೀಸರ್ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಆಗಸ್ಟ್‌ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ನಟಿ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ 'ಈಥಾ' ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗಿದೆ. ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ತೆರೆಕಂಡ 'ಕಾಕ್‌ಟೇಲ್ 2' ಚಿತ್ರದ ಪ್ರದರ್ಶನದ ವೇಳೆ ಈ ಟೀಸರ್ ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು. ಆದರೆ ಚಿತ್ರಮಂದಿರದಿಂದಲೇ ಯಾರೋ ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.

ಟೀಸರ್ ಸೋರಿಕೆಯಾಗಿದ್ದರೂ ಸಹ ಶ್ರದ್ಧಾ ಕಪೂರ್ ಅವರ ಹೊಸ ಅವತಾರ ಮತ್ತು ಚಿತ್ರದ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕ್ಲಿಪ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಶ್ರದ್ಧಾ ಕಪೂರ್ ಅವರ ವಿಭಿನ್ನ ಪಾತ್ರದ ಇಂಟ್ರೊಡಕ್ಷನ್ ಮತ್ತು ಮೇಕಿಂಗ್ ಶೈಲಿಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಚಿತ್ರವು ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಅಧಿಕೃತ ಟೀಸರ್ ಶೀಘ್ರದಲ್ಲೇ ಚಿತ್ರತಂಡದಿಂದ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಸದ್ಯಕ್ಕಂತೂ ಸೋರಿಕೆಯಾದ ದೃಶ್ಯಗಳೇ ಇಡೀ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿವೆ.

Read More
Next Story