Shamita Shetty| ವಯಸ್ಸು, ಒಂಟಿ ಜೀವನದ ಬಗ್ಗೆ ಆಡಿಕೊಂಡವನಿಗೆ ಶಮಿತಾ ಖಡಕ್ ಕ್ಲಾಸ್
x

ತನ್ನ ಒಂಟಿ ಜೀವನ ಹಾಗೂ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ ಟ್ರೋಲರ್‌ಗೆ ನಟಿ ಶಮಿತಾ ಶೆಟ್ಟಿ

Shamita Shetty| ವಯಸ್ಸು, ಒಂಟಿ ಜೀವನದ ಬಗ್ಗೆ ಆಡಿಕೊಂಡವನಿಗೆ ಶಮಿತಾ ಖಡಕ್ ಕ್ಲಾಸ್

ತನ್ನ ಒಂಟಿ ಜೀವನ ಹಾಗೂ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ ಟ್ರೋಲರ್‌ಗೆ ನಟಿ ಶಮಿತಾ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಅನ್‌ಫಾಲೋ ಮಾಡುವಂತೆ ತಿಳಿಸಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಖ್ಯಾತ ನಟಿ ಶಮಿತಾ ಶೆಟ್ಟಿ ಅವರು ತಮ್ಮ ಒಂಟಿ ಜೀವನ ಮತ್ತು ವಯಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕವಾಗಿ ಕಾಮೆಂಟ್ ಮಾಡಿದ ಟ್ರೋಲರ್ ಒಬ್ಬನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಪ್ರಸ್ತುತ 47 ವರ್ಷ ವಯಸ್ಸಿನ ಶಮಿತಾ ಶೆಟ್ಟಿ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗನೊಬ್ಬ "ನಿಮಗೆ ವಯಸ್ಸಾಗಿದೆ, ಹಳೆಯ ಕಳೆ ಈಗ ಉಳಿದಿಲ್ಲ" ಎಂದು ಕೀಳಾಗಿ ಕಾಮೆಂಟ್ ಮಾಡಿದ್ದನು. ಇದಕ್ಕೆ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿದ ನಟಿ, ಕಾಲಕ್ಕೆ ತಕ್ಕಂತೆ ಮುಖದ ಲಕ್ಷಣಗಳು ಮತ್ತು ದೈಹಿಕ ನೋಟ ಬದಲಾಗುವುದು ನಿಸರ್ಗದ ನಿಯಮ. ಆದರೂ ಈ ವಯಸ್ಸಿನಲ್ಲಿ ತಾನು ಆರೋಗ್ಯವಾಗಿ, ಸದೃಢವಾಗಿ ಮತ್ತು ಸಂತೋಷವಾಗಿದ್ದೇನೆ, ಭಗವಂತ ಕೊಟ್ಟಿರುವ ಜೀವನಕ್ಕೆ ಕೃತಜ್ಞಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಆದರೆ ಆ ಟ್ರೋಲರ್ ಅಷ್ಟಕ್ಕೇ ನಿಲ್ಲಿಸದೆ, "ನೀವು ಸರಿಯಾದ ಸಮಯಕ್ಕೆ ಮದುವೆಯಾಗಿದ್ದರೆ ಇಂದು ನಿಮ್ಮ ಮಕ್ಕಳು ದೊಡ್ಡವರಾಗುತ್ತಿದ್ದರು" ಎಂದು ಮತ್ತೊಂದು ಕಾಮೆಂಟ್ ಮಾಡಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಶಮಿತಾ ಶೆಟ್ಟಿ, ಆ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಆತನಿಗೆ ತಪರಾಕಿ ನೀಡಿದ್ದಾರೆ.

"ಮದುವೆಯಾಗಿ ನೀವೇನು ಮಹತ್ಸಾಧನೆ ಮಾಡಿದ್ದೀರಿ? ಒಂಟಿಯಾಗಿರುವ ಮಹಿಳೆಯರನ್ನು ವಯಸ್ಸಿನ ಹೆಸರಿನಲ್ಲಿ ಮೂದಲಿಸಲು ಮತ್ತು ನಿಮ್ಮ ಪುರುಷ ಪ್ರಧಾನ ಹಾಗೂ ಆದಿಮಾನವನಂತಹ ಪಿತೃಪ್ರಧಾನ ಆಲೋಚನೆಗಳನ್ನು ನಮ್ಮ ಮೇಲೆ ಹೇರಲು ನೀವೇಕೆ ನಮ್ಮನ್ನು ಫಾಲೋ ಮಾಡುತ್ತೀರಿ? ದಯವಿಟ್ಟು ಈಗಲೇ ನನ್ನನ್ನು ಅನ್‌ಫಾಲೋ ಮಾಡಿ" ಎಂದು ಶಮಿತಾ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಮೊಹಬ್ಬತೇನ್, ಜೆಹರ್, ಮತ್ತು ವೆಬ್ ಸರಣಿ 'ದಿ ಟೆನೆಂಟ್' ಮೂಲಕ ಜನಪ್ರಿಯರಾಗಿರುವ ಶಮಿತಾ ಅವರ ಈ ದಿಟ್ಟ ನಿಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

Read More
Next Story