Rishab Shetty | ಯೂತ್ ಸಿನಿಮಾಗೆ ರಿಷಬ್ ಶೆಟ್ಟಿ ಮೆಚ್ಚುಗೆ
x

'ಯೂತ್' ಚಿತ್ರಕ್ಕೆ ಮನಸಾರೆ ಸೋತ ರಿಷಬ್ ಶೆಟ್ಟಿ

Rishab Shetty | 'ಯೂತ್' ಸಿನಿಮಾಗೆ ರಿಷಬ್ ಶೆಟ್ಟಿ ಮೆಚ್ಚುಗೆ

ಖ್ಯಾತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೆನ್ ಕರುಣಾಸ್ ನಿರ್ದೇಶಿಸಿ, ನಟಿಸಿರುವ 'ಯೂತ್' ಸಿನಿಮಾವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


Click the Play button to hear this message in audio format

ಖ್ಯಾತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೆನ್ ಕರುಣಾಸ್ ಅಭಿನಯದ ‘ಯೂತ್’ ಚಿತ್ರಕ್ಕೆ ಮನಸಾರೆ ಮೆಚ್ಚುಗೆ ಸೂಚಿಸಿದ್ದಾರೆ. ಒಟಿಟಿಯಲ್ಲಿ ಭಾರೀ ಯಶಸ್ಸು ಕಂಡಿರುವ ಈ ಚಿತ್ರದ ಕುರಿತು ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಿಷಬ್ ಶೆಟ್ಟಿ ಅವರು, ಬಹಳ ದಿನಗಳ ನಂತರ ಇಡೀ ಸಿನಿಮಾವನ್ನು ನಗುಮುಖದಿಂದಲೇ ವೀಕ್ಷಿಸಿದೆ. ‘ಯೂತ್’ ಸಿನಿಮಾ ಪ್ರೀತಿ, ಸ್ನೇಹ ಮತ್ತು ಭಾವನೆಗಳ ಸಮ್ಮಿಲನವಾಗಿದ್ದು, ಇದು ಪ್ರತಿಯೊಬ್ಬ ಪೋಷಕರಿಗೆ ಅರ್ಪಿಸುವ ಹೃದಯಸ್ಪರ್ಶಿ ಕಥೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಕೆನ್ ಕರುಣಾಸ್ ಅವರು ಸ್ವತಃ ಕಥೆ ಬರೆದು, ನಿರ್ದೇಶಿಸಿ ಮತ್ತು ನಟಿಸಿರುವ ಶೈಲಿಯನ್ನು ಶ್ಲಾಘಿಸಿರುವ ರಿಷಬ್, ಚಿತ್ರದಲ್ಲಿನ ಪ್ರತಿಯೊಬ್ಬ ಕಲಾವಿದರೂ ಅತ್ಯಂತ ಸಹಜವಾಗಿ ನಟಿಸಿದ್ದಾರೆ ಎಂದು ಹೊಗಳಿದ್ದಾರೆ. ಸೂರಜ್ ವೆಂಜರಮೂಡು, ದೇವದರ್ಶಿನಿ ಸೇರಿದಂತೆ ಇಡೀ ತಂಡದ ನಟನೆ ಅದ್ಭುತವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

‘ಯೂತ್’ ಸಿನಿಮಾದ ಟ್ರೇಲರ್‌ ಇಲ್ಲಿದೆ

ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 80 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿರುವ ಈ ಸಿನಿಮಾ, ಈಗ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಶಾಲಾ ಜೀವನದ ನೆನಪುಗಳು, ಪ್ರೇಮ ಕಥೆ ಮತ್ತು ವೈಯಕ್ತಿಕ ಹೋರಾಟಗಳನ್ನು ಅತ್ಯಂತ ಸರಳವಾಗಿ ತೋರಿಸಿರುವುದು ಪ್ರೇಕ್ಷಕರಿಗೆ ಹತ್ತಿರವಾಗಿದೆ.

ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಅವರ ಸಂಗೀತ ಮತ್ತು ತಾಂತ್ರಿಕ ತಂಡದ ಶ್ರಮವನ್ನು ರಿಷಬ್ ಶೆಟ್ಟಿ ಕೊಂಡಾಡಿದ್ದು, ಕೆನ್ ಕರುಣಾಸ್ ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಆಸ್ತಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

Read More
Next Story