
'ಮೈಸಾ' ಚಿತ್ರಕ್ಕಾಗಿ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಮಂದಣ್ಣ ದಿನಕ್ಕೆ 8 ಗಂಟೆ ಕಠಿಣ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ.
Mysaa| ಕಾಲುಂಗುರ ತೊಟ್ಟು ಸಮರ ಕಲೆ ಅಭ್ಯಾಸ ಮಾಡುತ್ತಿರುವ ರಶ್ಮಿಕಾ; ವಿಜಯ್ ಪತ್ನಿ ಈಗ ಆಕ್ಷನ್ ಕ್ವೀನ್...
'ಮೈಸಾ' ಚಿತ್ರಕ್ಕಾಗಿ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಮಂದಣ್ಣ ದಿನಕ್ಕೆ 8 ಗಂಟೆ ಕಠಿಣ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ. ಮದುವೆ ನಂತರ ರಶ್ಮಿಕಾ ಅವರ ಲುಕ್ ಫೋಟೋಗಳು ಈಗ ವೈರಲ್ ಆಗಿವೆ.
ನಟಿ ರಶ್ಮಿಕಾ ಮಂದಣ್ಣ ಈಗ ಅಧಿಕೃತವಾಗಿ ಚಿತ್ರೀಕರಣಕ್ಕೆ ಮರಳಿದ್ದಾರೆ. ನಟ ವಿಜಯ್ ದೇವರಕೊಂಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಕಿರು ವಿರಾಮ ಪಡೆದಿದ್ದ ರಶ್ಮಿಕಾ, ಇದೀಗ ತಮ್ಮ ಬಹುನಿರೀಕ್ಷಿತ 'ಮೈಸಾ' ಚಿತ್ರದ ಯಶಸ್ಸಿಗಾಗಿ ಜಿದ್ದಿಗೆ ಬಿದ್ದಂತೆ ತಯಾರಿ ನಡೆಸುತ್ತಿದ್ದಾರೆ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುತ್ತಾ ಬಂದಿರುವ ರಶ್ಮಿಕಾ, ಈ ಬಾರಿ ಬೆಳ್ಳಿತೆರೆಯ ಮೇಲೆ ಹಿಂದೆಂದೂ ಕಾಣದ ಆಕ್ಷನ್ ಅವತಾರದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.
ಗೌಂಡ್ ಬುಡಕಟ್ಟು ಜನಾಂಗದ ಹಿನ್ನೆಲೆಯಲ್ಲಿ ಹೈ-ವೋಲ್ಟೇಜ್ ಎಮೋಷನಲ್ ಆಕ್ಷನ್ ಥ್ರಿಲ್ಲರ್ ಆಗಿ 'ಮೈಸಾ' ತಯಾರಾಗುತ್ತಿದೆ. ಚಿತ್ರದಲ್ಲಿ ರಶ್ಮಿಕಾ ಅತ್ಯಂತ ಬೋಲ್ಡ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರತಿದಿನ ಎಂಟು ಗಂಟೆಗಳ ಕಾಲ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಈ ಚಿತ್ರದ ಸಾಹಸ ದೃಶ್ಯಗಳಿಗಾಗಿಯೇ ಅವರು ವಿಶೇಷವಾಗಿ ಬ್ಯಾಂಕಾಕ್‌ಗೆ ಪ್ರಯಾಣಿಸಿದ್ದು, ಅಲ್ಲಿನ ಸಾಹಸ ಮತ್ತು ಯುದ್ಧ ತರಬೇತಿ ಬೂಟ್ ಕ್ಯಾಂಪ್‌ನಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವದರ್ಜೆಯ ಆಕ್ಷನ್ ತಜ್ಞರ ಮಾರ್ಗದರ್ಶನದಲ್ಲಿ ತಮ್ಮ ದೈಹಿಕ ಮಿತಿಗಳನ್ನು ಮೀರಿ ರಶ್ಮಿಕಾ ಶ್ರಮಿಸುತ್ತಿದ್ದಾರೆ. ಬ್ಯಾಂಕಾಕ್‌ನಲ್ಲಿ ರಶ್ಮಿಕಾ ತರಬೇತಿ ಪಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಅವರು ಕಾಲುಂಗುರ ಧರಿಸಿರುವುದು ನೆಟಿಜನ್‌ಗಳ ಗಮನ ಸೆಳೆಯುತ್ತಿದೆ.
ಚಿತ್ರದಲ್ಲಿ ರಶ್ಮಿಕಾ 'ಗೊಂಡ್' ಬುಡಕಟ್ಟು ಜನಾಂಗದ ಯೋಧೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಹ್ಯಾಂಡ್-ಟು-ಹ್ಯಾಂಡ್ ಕಾಂಬ್ಯಾಟ್ ಹಾಗೂ ಹೈ-ಸ್ಪೀಡ್ ಸ್ಟಂಟ್ ಶೈಲಿಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಅವರ ಈ ಶ್ರಮ ಚಿತ್ರದ ಆಕ್ಷನ್ ದೃಶ್ಯಗಳಿಗೆ ಒಂದು ನೈಜ ಸ್ಪರ್ಶ ನೀಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶೀಘ್ರದಲ್ಲೇ ಕೇರಳದಲ್ಲಿ 16 ದಿನಗಳ ಚಿತ್ರೀಕರಣ ನಡೆಯಲಿದ್ದು, ಪ್ರಮುಖ ಸಾಹಸ ದೃಶ್ಯಗಳನ್ನು ಅಲ್ಲಿ ಸೆರೆಹಿಡಿಯಲಾಗುವುದು. ಅಂತರಾಷ್ಟ್ರೀಯ ಖ್ಯಾತಿಯ ಸಾಹಸ ಸಂಯೋಜಕ ಆಂಡಿ ಲಾಂಗ್ ಅವರು ಈ ಚಿತ್ರದ ಸಾಹಸ ದೃಶ್ಯಗಳಿಗೆ ನಿರ್ದೇಶನ ನೀಡುತ್ತಿದ್ದಾರೆ.
ನಿರ್ದೇಶಕ ರವೀಂದ್ರ ಪುಲ್ಲೆ ಅವರು ಈಗಾಗಲೇ ಥೈಲ್ಯಾಂಡ್‌ನಲ್ಲಿ ರಶ್ಮಿಕಾ ಪಡೆಯುತ್ತಿರುವ ತರಬೇತಿಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಗಾಯಗಳಿಂದ ಬರೆಯಲ್ಪಟ್ಟ ಯುದ್ಧವಿದು... ಅವಳೇ ದೊಡ್ಡ ಆಯುಧ" ಎಂದು ರಶ್ಮಿಕಾ ಅವರ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
ಅನ್ ಫಾರ್ಮುಲಾ ಫಿಲ್ಮ್ಸ್ ನಿರ್ಮಾಣದ 'ಮೈಸಾ' ಚಿತ್ರವು ಬುಡಕಟ್ಟು ಜನರ ಹಿನ್ನೆಲೆಯಲ್ಲಿ ಸಾಗುವ ಎಮೋಷನಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.
ಪ್ರಸ್ತುತ ಬ್ಯಾಂಕಾಕ್‌ನಲ್ಲಿರುವ ಕಾರಣ ಮುಂಬೈನಲ್ಲಿ ನಡೆದ INCA ಅವಾರ್ಡ್ ಫಂಕ್ಷನ್‌ನಲ್ಲಿ ಅವರಿಗೆ ಭಾಗವಹಿಸಲು ಸಾಧ್ಯವಾಗಲಿಲ್ಲ. 'ದಿ ಗರ್ಲ್‌ಫ್ರೆಂಡ್' ಸಿನಿಮಾದ ನಟನೆಗಾಗಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಶೀಘ್ರದಲ್ಲೇ ಕೇರಳದಲ್ಲಿ 'ಮೈಸಾ' ಚಿತ್ರದ 16 ದಿನಗಳ ಆಕ್ಷನ್ ಶೆಡ್ಯೂಲ್ ನಡೆಯಲಿದ್ದು, 'ಕಲ್ಕಿ 2898 AD' ಖ್ಯಾತಿಯ ಆಂಡಿ ಲಾಂಗ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ರಶ್ಮಿಕಾ ಕೈಯಲ್ಲಿ ಸದ್ಯಕ್ಕೆ 'ಮೈಸಾ' ಜೊತೆಗೆ 'ರಣಬಾಲಿ' ಮತ್ತು 'ಕಾಕ್‌ಟೇಲ್ 2' ಸಿನಿಮಾಗಳಿವೆ. ವಿಜಯ ದೇವರಕೊಂಡ ಜೊತೆ ನಟಿಸುತ್ತಿರುವ 'ರಣಬಾಲಿ' ಶೂಟಿಂಗ್ ಕೂಡ ವೇಗವಾಗಿ ನಡೆಯುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

