Cocktail 2| ಕಾಕ್‌ಟೇಲ್ 2 ಸೆಟ್‌ನಲ್ಲಿ ರಶ್ಮಿಕಾ-ಕೃತಿ ನಡುವೆ ಕೋಲ್ಡ್ ವಾರ್?
x

ರಶ್ಮಿಕಾ ಮಂದಣ್ಣ ಜೊತೆಗಿನ ಕೋಲ್ಡ್ ವಾರ್ ವದಂತಿಗೆ ಕೃತಿ ಸ್ಪಷ್ಟನೆ

Cocktail 2| ಕಾಕ್‌ಟೇಲ್ 2 ಸೆಟ್‌ನಲ್ಲಿ ರಶ್ಮಿಕಾ-ಕೃತಿ ನಡುವೆ ಕೋಲ್ಡ್ ವಾರ್?

ಶಾಹಿದ್ ಕಪೂರ್ ನಟನೆಯ 'ಕಾಕ್‌ಟೇಲ್ 2' ಚಿತ್ರದ ಶೂಟಿಂಗ್ ಅನುಭವ ಹಂಚಿಕೊಂಡ ಕೃತಿ ಸನೋನ್, ಸಹನಟಿ ರಶ್ಮಿಕಾ ಮಂದಣ್ಣ ಜೊತೆಗಿನ ಪೈಪೋಟಿ ವದಂತಿಗಳ ನಿಜ ಬಣ್ಣ ಬಯಲು ಮಾಡಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿರುವ ನಟಿಯರಾದ ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಡುವೆ ನಿರ್ಮಾಪಕರ ನೆಚ್ಚಿನ ನಟಿಯಾಗಲು ಪೈಪೋಟಿ ನಡೆಯುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ.

ಹೋಮಿ ಅದಾಜಾನಿಯಾ ನಿರ್ದೇಶನದ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದು, ಇಬ್ಬರು ಮುಂಚೂಣಿ ನಟಿಯರ ಉಪಸ್ಥಿತಿಯು ಸಹಜವಾಗಿಯೇ ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಸೆಟ್‌ಗಳಲ್ಲಿ ನಿರ್ಮಾಪಕರ ಗಮನ ಸೆಳೆಯಲು ಮತ್ತು ಚಿತ್ರದ ಪ್ರಚಾರದಲ್ಲಿ ಮುಂಚೂಣಿಯಲ್ಲಿರಲು ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿಮಾ ವಲಯದಲ್ಲಿ ಸದ್ದು ಮಾಡುತ್ತಿವೆ.

ಆದರೆ ಈ ಎಲ್ಲ ವರದಿಗಳಿಗೆ ಹಾಗೂ ಹೋಲಿಕೆಗಳಿಗೆ ಕೃತಿ ಸನೋನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿರುವ ಅವರು, ರಶ್ಮಿಕಾ ಅತ್ಯಂತ ಪ್ರಾಮಾಣಿಕ, ದಯಾಮಯಿ ಮತ್ತು ಸಕಾರಾತ್ಮಕ ವ್ಯಕ್ತಿಯಾಗಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಅವರಲ್ಲಿ ಯಾವುದೇ ರೀತಿಯ ಅಸುರಕ್ಷಿತ ಭಾವನೆಗಳಿಲ್ಲ ಮತ್ತು ಅವರ ಸಕಾರಾತ್ಮಕ ಶಕ್ತಿಯು ಇತರರನ್ನು ಆಕರ್ಷಿಸುತ್ತದೆ ಎಂದು ಹೇಳುವ ಮೂಲಕ ಕೃತಿ ಅವರು ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಚಿತ್ರೀಕರಣದ ಸೆಟ್‌ಗಳಲ್ಲಿ ಇಬ್ಬರೂ ಸಾಕಷ್ಟು ಮೋಜು ಮಸ್ತಿ ಮಾಡಿದ್ದಾಗಿ ತಿಳಿಸಿರುವ ಅವರು, ಸಹನಟಿಯೊಂದಿಗೆ ಯಾವುದೇ ತರಹದ ಪೈಪೋಟಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ 'ಕಾಕ್‌ಟೇಲ್ 2' ಚಿತ್ರವು 2012ರ ಸೂಪರ್ ಹಿಟ್ 'ಕಾಕ್‌ಟೇಲ್' ಚಿತ್ರದ ಮುಂದುವರಿದ ಭಾಗವೇ ಎಂಬ ಹೋಲಿಕೆಗಳಿಗೂ ಕೃತಿ ಸನೋನ್ ಉತ್ತರಿಸಿದ್ದಾರೆ. ಇದು ನೇರ ಸೀಕ್ವೆಲ್ ಅಲ್ಲ, ಬದಲಿಗೆ ಇದೊಂದು ಫ್ರಾಂಚೈಸಿ ಚಿತ್ರವಾಗಿದ್ದು ಸಂಪೂರ್ಣ ವಿಭಿನ್ನ ಕಥೆ ಮತ್ತು ಪಾತ್ರಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಆಧುನಿಕ ಸಂಬಂಧಗಳು ಮತ್ತು ಸ್ನೇಹದ ಸುತ್ತ ಸಾಗುವ ಈ ಪ್ರೇಮ ಕಥೆಯು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದ್ದು, ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

Read More
Next Story