ಪತಿ ವಿಜಯ್ ಜೊತೆಗಿನ ಜಪಾನ್ ಪ್ರವಾಸದ ಫೋಟೋ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ
x

ನಟಿ ರಶ್ಮಿಕಾ ಮಂದಣ್ಣ ತಮ್ಮ ಪತಿ ವಿಜಯ್ ದೇವರಕೊಂಡ ಜೊತೆಗಿನ ಜಪಾನ್ ಪ್ರವಾಸದ ರೋಮ್ಯಾಂಟಿಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

ಪತಿ ವಿಜಯ್ ಜೊತೆಗಿನ ಜಪಾನ್ ಪ್ರವಾಸದ ಫೋಟೋ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ತಮ್ಮ ಪತಿ ವಿಜಯ್ ದೇವರಕೊಂಡ ಜೊತೆಗಿನ ಜಪಾನ್ ಪ್ರವಾಸದ ರೋಮ್ಯಾಂಟಿಕ್ ಚಿತ್ರಗಳನ್ನು ಹಂಚಿಕೊಂಡಿದ್ದು, ಸಾಂಪ್ರದಾಯಿಕ ಯುಕಾಟಾ ಉಡುಪಿನಲ್ಲಿ ಮಿಂಚಿದ್ದಾರೆ.


Click the Play button to hear this message in audio format

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮ್ಮ ಪತಿ, ನಟ ವಿಜಯ್ ದೇವರಕೊಂಡ ಅವರೊಂದಿಗೆ ಜಪಾನ್ ದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸುಂದರ ಮತ್ತು ರೋಮ್ಯಾಂಟಿಕ್ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಟೋಕಿಯೋದಲ್ಲಿ ನಡೆದ ಅನಿಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಈ ಜೋಡಿ ಜಪಾನ್ ಪ್ರವಾಸವನ್ನು ಕೈಗೊಂಡಿದ್ದು, ರಶ್ಮಿಕಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. "ಈ ವರ್ಷ ಜಪಾನ್ ಪ್ರವಾಸ ನಮಗೆ ಇನ್ನಷ್ಟು ಮಜಾ ನೀಡಿತು" ಎಂಬ ಶೀರ್ಷಿಕೆಯೊಂದಿಗೆ ರಶ್ಮಿಕಾ ಅವರು ಈ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ತಾವು ಹಂಚಿಕೊಂಡಿರುವ ಫೋಟೋ ಸರಣಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಜಪಾನ್ ದೇಶದ ಸಾಂಪ್ರದಾಯಿಕ ಉಡುಪಾದ 'ಯುಕಾಟಾ' (ಲಘು ತೂಕದ ಕಿಮೋನೋ) ಧರಿಸಿ ಕಂಗೊಳಿಸುತ್ತಿದ್ದಾರೆ. ಸೂರ್ಯಕಾಂತಿ ಹೂವುಗಳ ವಿನ್ಯಾಸವಿರುವ ಈ ಸಾಂಪ್ರದಾಯಿಕ ಉಡುಪಿನಲ್ಲಿ ರಶ್ಮಿಕಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದು, ಜಪಾನ್‌ನ ರಸ್ತೆಗಳಲ್ಲಿ ಸುತ್ತಾಡುತ್ತಾ ಅಲ್ಲಿನ ಸ್ಥಳೀಯ ವೈವಿಧ್ಯಮಯ ಸ್ಟ್ರೀಟ್ ಫುಡ್‌ ಸವಿಯುತ್ತಿರುವ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದಿವೆ. ಅಲ್ಲದೆ ಅಲ್ಲಿನ ಕಲಾ ಪ್ರದರ್ಶನವೊಂದರಲ್ಲಿ ರಶ್ಮಿಕಾ ಅವರು ಸಣ್ಣ ಮಕ್ಕಳಂತೆ ನೆಗೆದಾಡುತ್ತಾ ಸಂತೋಷಪಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಈ ಪ್ರವಾಸದ ಮತ್ತೊಂದು ವಿಶೇಷವೆಂದರೆ, ರಶ್ಮಿಕಾ ಹಂಚಿಕೊಂಡಿರುವ ಫೋಟೋಗಳಲ್ಲಿ ಅವರ ಪತಿ ವಿಜಯ್ ದೇವರಕೊಂಡ ಅವರ ಝಲಕ್ ಕೂಡ ಅಡಗಿದೆ. ಕೆಲವು ಫೋಟೋಗಳು ಅಸ್ಪಷ್ಟವಾಗಿದ್ದರೂ (ಬ್ಲರಿ ಪಿಕ್ಸ್), ಈ ಜೋಡಿ ಒಟ್ಟಿಗೆ ಸುಂದರ ಸಮಯ ಕಳೆಯುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ಇತ್ತೀಚೆಗಷ್ಟೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ದೇವರಕೊಂಡ ಅವರು ತಮ್ಮ ಕುತ್ತಿಗೆಯ ಚೈನ್‌ನಲ್ಲಿ ರಶ್ಮಿಕಾ ಅವರ ಹೆಸರಿನ ಮೊದಲ ಅಕ್ಷರವಾದ 'R' ಇರುವ ಪೆಂಡೆಂಟ್ ಧರಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಉದಯಪುರದಲ್ಲಿ ಭವ್ಯವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಮದುವೆಯ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿದ್ದು, ಅಭಿಮಾನಿಗಳಿಗೆ ಸಪ್ತಸಾಗರದಾಚೆಯ ತಮ್ಮ ಪ್ರೇಮ ಪಯಣದ ದರ್ಶನ ಮಾಡಿಸುತ್ತಿದ್ದಾರೆ.

ಇನ್ನು ಚಿತ್ರರಂಗದ ವಿಚಾರಕ್ಕೆ ಬಂದರೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ ಮದುವೆಯ ನಂತರ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ 'ರಣಬಾಲಿ' ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರವು ಸೆಪ್ಟೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಜೊತೆಗೆ ವಿಜಯ್ ದೇವರಕೊಂಡ ತಮ್ಮ ಹೊಸ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದರೆ, ರಶ್ಮಿಕಾ ಮಂದಣ್ಣ ಅವರು 'ಕಾಕ್‌ಟೈಲ್ 2' ಮತ್ತು 'ಮೈಸಾ' ಚಿತ್ರಗಳ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

Read More
Next Story