
ಸ್ಯಾಂಡಲ್‌ವುಡ್ ಸ್ಟಾರ್‌ಗಳಿಗೆ ರಶ್ಮಿಕಾ ಆಮಂತ್ರಣ ನೀಡಿದ್ದಾರೆ.
Cocktail 2| ಶೂಟಿಂಗ್ ಸೆಟ್‌ನಲ್ಲಿ ರಶ್ಮಿಕಾ ಮಂದಣ್ಣ ಮಸ್ತಿ: ಇಟಲಿ ಡೈರಿಯಿಂದ ವಿಡಿಯೋ ಹಂಚಿಕೊಂಡ ನಟಿ
ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್ಟೇಲ್ 2' ಚಿತ್ರದ 'ಜಬ್ ತಲಕ್' ಹಾಡಿನ ಚಿತ್ರೀಕರಣ ಇಟಲಿಯ ಸಿಸಿಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ.
ನಟಿ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಹಿಂದಿ ಸಿನಿಮಾ 'ಕಾಕ್ಟೇಲ್ 2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ 'ಜಬ್ ತಲಕ್' ಎಂಬ ಹಾಡಿನ ಚಿತ್ರೀಕರಣ ಇಟಲಿಯ ಸಿಸಿಲಿಯಲ್ಲಿ ನಡೆದಿದ್ದು, ಇದರ ತೆರೆಮರೆಯ ಸುಂದರ ಕ್ಷಣಗಳನ್ನು ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸಹನಟರಾದ ಶಾಹಿದ್ ಕಪೂರ್ ಮತ್ತು ಕೃತಿ ಸನನ್ ಅವರೊಂದಿಗೆ ರಶ್ಮಿಕಾ ಭರ್ಜರಿ ಮಸ್ತಿ ಮಾಡುತ್ತಿರುವುದು ಕಂಡುಬಂದಿದೆ. "ಇದು ದಿಯಾಳ ಡೈರಿಯ ಒಂದು ಪುಟ" ಎಂದು ಶೀರ್ಷಿಕೆ ನೀಡಿರುವ ರಶ್ಮಿಕಾ, ಚಿತ್ರೀಕರಣದ ನಡುವೆ ಸಿಗುತ್ತಿದ್ದ ಸಮಯದಲ್ಲಿ ನೃತ್ಯ ಮಾಡುವುದು, ನಗುವುದು ಮತ್ತು ಮೋಜು ಮಾಡುವುದರಲ್ಲೇ ಕಾಲ ಕಳೆದಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಶಾಹಿದ್ ಮತ್ತು ಕೃತಿ ಅವರನ್ನು "ನೃತ್ಯ ಮತ್ತು ಕ್ರೈಂ ಪಾರ್ಟ್‌ನರ್ಸ್" ಎಂದು ತಮಾಷೆಯಾಗಿ ಕರೆದಿರುವ ಅವರು, ಗಂಭೀರ ದೃಶ್ಯಗಳ ಚಿತ್ರೀಕರಣದ ವೇಳೆಯೂ ತಮಗೆ ನಗು ತಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.
ಹೋಮಿ ಅದಾಜಾನಿಯಾ ನಿರ್ದೇಶನದ ಈ ಚಿತ್ರವು 2012ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ 'ಕಾಕ್ಟೇಲ್' ಚಿತ್ರದ ಸೀಕ್ವೆಲ್ ಆಗಿದ್ದು, ಜೂನ್ 19ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಅವರ ಮದುವೆಯ ನಂತರ ಬಿಡುಗಡೆಯಾಗಲಿರುವ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.
ಪ್ರೀತಂ ಸಂಗೀತ ನೀಡಿರುವ ಈ ಹಾಡಿಗೆ ಅರಿಜಿತ್ ಸಿಂಗ್ ಮತ್ತು ಅಕಾಸಾ ಸಿಂಗ್ ಧ್ವನಿಯಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಬಿಟಿಎಸ್ ವಿಡಿಯೋ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ರಶ್ಮಿಕಾ ಕೈಯಲ್ಲಿ ಸದ್ಯಕ್ಕೆ 'ಮೈಸಾ' ಜೊತೆಗೆ 'ರಣಬಾಲಿ' ಮತ್ತು 'ಕಾಕ್‌ಟೇಲ್ 2' ಸಿನಿಮಾಗಳಿವೆ. ವಿಜಯ ದೇವರಕೊಂಡ ಜೊತೆ ನಟಿಸುತ್ತಿರುವ 'ರಣಬಾಲಿ' ಶೂಟಿಂಗ್ ಕೂಡ ವೇಗವಾಗಿ ನಡೆಯುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

