Mumtaz| ಸುಂದರವಾಗಿ ಕಾಣುತ್ತಿದ್ದಾರೆ; ಆಶಾ ಭೋಸ್ಲೆ ಅಂತ್ಯಕ್ರಿಯೆಯ ವಿಡಿಯೋ ಹಂಚಿಕೊಂಡ ಮುಮ್ತಾಜ್
x

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯ ಭಾವುಕ ವಿಡಿಯೋ ಹಂಚಿಕೊಂಡ ನಟಿ ಮುಮ್ತಾಜ್.

Mumtaz| ಸುಂದರವಾಗಿ ಕಾಣುತ್ತಿದ್ದಾರೆ; ಆಶಾ ಭೋಸ್ಲೆ ಅಂತ್ಯಕ್ರಿಯೆಯ ವಿಡಿಯೋ ಹಂಚಿಕೊಂಡ ಮುಮ್ತಾಜ್

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯ ಭಾವುಕ ವಿಡಿಯೋ ಹಂಚಿಕೊಂಡ ನಟಿ ಮುಮ್ತಾಜ್, ಗಾಯಕಿಯ ಅಂತಿಮ ದರ್ಶನ ಪಡೆದು ಅವರೊಂದಿಗಿನ ಒಡನಾಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.


Click the Play button to hear this message in audio format

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಅವರು ಏಪ್ರಿಲ್ 12 ರಂದು ತಮ್ಮ 92ನೇ ವಯಸ್ಸಿನಲ್ಲಿ ಅಂಗಾಂಗ ವೈಫಲ್ಯ ಕಾರಣದಿಂದ ನಿಧನ ಹೊಂದಿದ್ದಾರೆ. ಏಪ್ರಿಲ್ 13 ರಂದು ಅವರ ಅಂತ್ಯಕ್ರಿಯೆ ನೆರವೇರಿತ್ತು. ಇದೀಗ ನಟಿ ಮುಮ್ತಾಜ್ ಅವರು ಅಂತ್ಯಕ್ರಿಯೆಯ ಸಂದರ್ಭದ ಭಾವುಕ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ದಿವಂಗತ ಗಾಯಕಿಯೊಂದಿಗೆ ತಮಗಿದ್ದ ಆತ್ಮೀಯ ಸಂಬಂಧವನ್ನು ಸ್ಮರಿಸಿದ್ದಾರೆ.

ಮುಮ್ತಾಜ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ದೃಶ್ಯದಲ್ಲಿ ಅವರು ಗಾಯಕಿಯ ಪಾರ್ಥಿವ ಶರೀರವನ್ನು ನೋಡುತ್ತಾ, "ಕಿತ್ನಿ ಪ್ಯಾರಿ ಲಗ್ ರಹಿ ಹೈ" (ಅವರು ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ) ಎಂದು ಹೇಳುತ್ತಿರುವುದು ಕಂಡುಬಂದಿದೆ. ನಂತರ ಅವರು ವಿಡಿಯೋ ಚಿತ್ರೀಕರಿಸುವವರನ್ನು ಹತ್ತಿರಕ್ಕೆ ಬರುವಂತೆ ಕೇಳಿಕೊಂಡು, ಈ ಕ್ಷಣ "ಯಾದ್ಗಾರಿ" (ನೆನಪಿಡಬೇಕಾದದ್ದು) ಎಂದು ಹೇಳಿದ್ದಾರೆ.

ಈ ವಿಡಿಯೋಗೆ ಕ್ಯಾಪ್ಷನ್ ನೀಡಿರುವ ಮುಮ್ತಾಜ್, "ಎಲ್ಲಾ ಸಂಬಂಧಗಳು ಅಥವಾ ಎಲ್ಲಾ ಪ್ರೀತಿಯನ್ನು ಜಗತ್ತು ನೋಡಲಿ ಎಂದೇ ಇರುವುದಿಲ್ಲ. ಕೆಲವು ಬಂಧಗಳು ಹೃದಯದ ಒಳಗೇ ಮೌನವಾಗಿ ಜೀವಿಸುತ್ತವೆ. ನೀವು ಪ್ರೀತಿಸುವವರ ಬಗ್ಗೆ ಇರುವ ಅತೀವ ಹಂಬಲ ಮತ್ತು ಅವರ ಅಗಲಿಕೆಯ ನೋವಿನ ತೂಕವನ್ನು ನಿಮ್ಮ ಹೃದಯ ಮಾತ್ರ ಅರ್ಥಮಾಡಿಕೊಳ್ಳಬಲ್ಲದು. ಆಶಾ ಭೋಸ್ಲೆ ಅವರೇ, ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ," ಎಂದು ಬರೆದಿದ್ದಾರೆ.

ಇದಕ್ಕೂ ಮುನ್ನ ಮುಮ್ತಾಜ್ ಅವರು ಆಶಾ ಅವರೊಂದಿಗೆ ನೃತ್ಯ ಮಾಡುತ್ತಿದ್ದ ಹಳೆಯ ವಿಡಿಯೋವನ್ನು ಹಂಚಿಕೊಂಡು ಗೌರವ ಸಲ್ಲಿಸಿದ್ದರು. "ಇಂದು ನನಗೆ ವೈಯಕ್ತಿಕವಾಗಿ ದೊಡ್ಡ ನಷ್ಟವಾದಂತೆ ಅನಿಸುತ್ತಿದೆ. ಆಶಾ ಭೋಸ್ಲೆ ಕೇವಲ ಒಬ್ಬ ದಂತಕಥೆಯ ಧ್ವನಿಯಾಗಿರಲಿಲ್ಲ, ತೆರೆಯ ಮೇಲೆ ನಾನು ನಟಿಸಿದ ಅನೇಕ ಸ್ಮರಣೀಯ ಕ್ಷಣಗಳ ಹಿಂದಿನ ಆತ್ಮವಾಗಿದ್ದರು. ಅವರ ಹಾಡುಗಳು ನನ್ನ ಅಭಿನಯಕ್ಕೆ ಜೀವ, ಚೈತನ್ಯ ಮತ್ತು ಭಾವನೆಗಳನ್ನು ತುಂಬಿದ್ದವು. ಅವರ ಧ್ವನಿಗೆ ನಟಿಸುವುದು ನಿಜಕ್ಕೂ ಒಂದು ವರವೇ ಸರಿ. ಪ್ರತಿ ಹಾಡನ್ನು ಮರೆಯಲಾಗದಂತೆ ಮಾಡುವ ಮ್ಯಾಜಿಕ್ ಅವರ ಬಳಿ ಇತ್ತು. ಅವರು ನನಗೆ ಮತ್ತು ಚಿತ್ರರಂಗಕ್ಕೆ ನೀಡಿದ ಸುಮಧುರ ಹಾಡುಗಳಿಗಾಗಿ ನಾನು ಯಾವಾಗಲೂ ಕೃತಜ್ಞಳಾಗಿರುತ್ತೇನೆ. ಅವರ ಧ್ವನಿ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ," ಎಂದು ಅವರು ಭಾವುಕರಾಗಿ ಬರೆದಿದ್ದರು.

ಆಶಾ ಭೋಸ್ಲೆ ಅವರ ನಿಧನ

ಏಪ್ರಿಲ್ 11 ರಂದು ಅತಿಯಾದ ಸುಸ್ತು ಮತ್ತು ಎದೆ ನೋವಿನ ಕಾರಣದಿಂದಾಗಿ ಆಶಾ ಭೋಸ್ಲೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 12 ರಂದು ಅವರು ನಿಧನರಾಗಿದ್ದರು. ಅವರ ಪುತ್ರ ಆನಂದ್ ಭೋಸ್ಲೆ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಏಪ್ರಿಲ್ 13 ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆದಿತ್ತು. ವಿದ್ಯಾ ಬಾಲನ್, ಅಮೀರ್ ಖಾನ್, ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಬಾಲಿವುಡ್‌ನ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದಿದ್ದರು.

ಗಾಯಕರಾದ ಶ್ರೇಯಾ ಘೋಷಾಲ್ ಮತ್ತು ಕರಣ್ ಔಜ್ಲಾ ಇತ್ತೀಚಿನ ತಮ್ಮ ಸಂಗೀತ ಕಚೇರಿಗಳಲ್ಲಿ ಆಶಾ ಅವರಿಗೆ ನಮನ ಸಲ್ಲಿಸಿದ್ದಾರೆ. ಫರ್ಹಾನ್ ಅಖ್ತರ್ ಕೂಡ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ದಮ್ ಮಾರೋ ದಮ್' ಹಾಡನ್ನು ಹಾಡುವ ಮೂಲಕ ಅವರಿಗೆ ಗೌರವ ಅರ್ಪಿಸಿದ್ದರು.

Read More
Next Story