ಕಿಚ್ಚ ಸುದೀಪ್ ಸೋದರಳಿಯನ ಮ್ಯಾಂಗೋ ಪಚ್ಚ ಟ್ರೈಲರ್‌ ಔಟ್‌!
x

ಸ್ಯಾಂಡಲ್‌ವುಡ್ ಅಖಾಡಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಡಲು ಸಜ್ಜಾಗಿರುವ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ.

ಕಿಚ್ಚ ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ಟ್ರೈಲರ್‌ ಔಟ್‌!

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಚಿತ್ರದ ಆಫೀಷಿಯಲ್ ಟ್ರೈಲರ್ ಬಿಡುಗಡೆಯಾಗಿದೆ. ರೆಟ್ರೋ ಶೈಲಿಯ ಈ ಆಕ್ಷನ್ ಡ್ರಾಮಾ ಜೂನ್ 5 ರಂದು ಬಿಡುಗಡೆಯಾಗಲಿದೆ.


Click the Play button to hear this message in audio format

ಸ್ಯಾಂಡಲ್‌ವುಡ್ ಅಖಾಡಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಡಲು ಸಜ್ಜಾಗಿರುವ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ ಈ ಆಕ್ಷನ್ ಡ್ರಾಮಾ ಸಿನಿಮಾವನ್ನು ಯುವ ನಿರ್ದೇಶಕ ವಿವೇಕ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಕಿಚ್ಚ ಸುದೀಪ್ ಅವರ ಖಡಕ್ ಹಿನ್ನೆಲೆ ಧ್ವನಿಯೊಂದಿಗೆ ಮೂಡಿಬಂದಿರುವ ಈ ಟ್ರೈಲರ್ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

'ಮ್ಯಾಂಗೋ ಪಚ್ಚ' ಚಿತ್ರವು 2001-02ರ ಕಾಲಘಟ್ಟದ ಮೈಸೂರಿನ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಸುಮಾರು ಒಂದು ದಶಕದ ಕಾಲದ ಸ್ಥಳೀಯ ಸಾಮ್ರಾಜ್ಯದ ನಿಷ್ಠೆ, ದ್ರೋಹ ಮತ್ತು ರಾಜಕೀಯ ಅಧಿಕಾರದ ಸಂಘರ್ಷವನ್ನು ರೋಮಾಂಚನಕಾರಿಯಾಗಿ ತೆರೆಮೇಲೆ ತರಲಿದೆ. ಚಿತ್ರದಲ್ಲಿ ಸಂಚಿತ್ ಸಂಜೀವ್ ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಭಾವನ, ಮಯೂರ್ ಪಟೇಲ್, ಉಗ್ರಂ ಮಂಜು, ಪ್ರಶಾಂತ್ ಹಿರೇಮಠ್ ಹಾಗೂ ಹಂಸ ನಾರಾಯಣಸ್ವಾಮಿ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಸದ್ಯ ಚಿತ್ರದ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಟ ಸಂಚಿತ್, ಇತ್ತೀಚೆಗೆ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ಮಾಧ್ಯಮಗಳ ಮೂಲಕ ಪ್ರೇಕ್ಷಕರಲ್ಲಿ ತನ್ನ ಮೊದಲ ಸಿನಿಮಾಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಚಿತ್ರಕ್ಕೆ ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ರಶ್ಮಿತ್ ಅವರ ಸಂಗೀತವಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿರಸಿಕರ ಗಮನ ಸೆಳೆದಿದೆ. ಶೇಖರ್ ಚಂದ್ರ ಮತ್ತು ಸ್ವಾಮಿ ಅವರ ಛಾಯಾಗ್ರಹಣ ಈ ರೆಟ್ರೋ ಶೈಲಿಯ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ. ಪ್ರಿಯಾ ಸುದೀಪ್, ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸಿರುವ ಈ ಬಹುನಿರೀಕ್ಷಿತ 'ಮ್ಯಾಂಗೋ ಪಚ್ಚ' ಚಿತ್ರವು ಇದೇ ಜೂನ್ 5 ರಂದು ರಾಜ್ಯಾದ್ಯಂತ ಅತ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ.

Read More
Next Story