
ಸೂರ್ಯ-ತ್ರಿಶಾ ನಟನೆಯ 'ಕರುಪ್ಪು' ಚಿತ್ರದ ಟಿಕೆಟ್ ಬುಕ್ಕಿಂಗ್ ತಮಿಳುನಾಡಿನಲ್ಲಿ ಭರ್ಜರಿ ಆರಂಭ ಕಂಡಿದೆ.
Karuppu Movie| ಬಿಡುಗಡೆಗೂ ಮುನ್ನವೇ ಸೂರ್ಯ ನಟನೆಯ 'ಕರುಪ್ಪು' ಭರ್ಜರಿ ಕಲೆಕ್ಷನ್
ಸೂರ್ಯ-ತ್ರಿಶಾ ನಟನೆಯ 'ಕರುಪ್ಪು' ಚಿತ್ರದ ಟಿಕೆಟ್ ಬುಕ್ಕಿಂಗ್ ತಮಿಳುನಾಡಿನಲ್ಲಿ ಭರ್ಜರಿ ಆರಂಭ ಕಂಡಿದೆ. ಕೇವಲ 21 ಗಂಟೆಗಳಲ್ಲಿ 1 ಕೋಟಿ ರೂ. ಗಳಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ.
ನಟ ಸೂರ್ಯ ಮತ್ತು ತ್ರಿಶಾ ಅಭಿನಯದ 'ಕರುಪ್ಪು' ಸಿನಿಮಾ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದಿದೆ. ಮೇ 10 ರಂದು ಸಂಜೆ 7 ಗಂಟೆಗೆ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೇವಲ 20 ಗಂಟೆ 28 ನಿಮಿಷಗಳಲ್ಲಿ ಚಿತ್ರವು 1 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಮುನ್ಸೂಚನೆ ನೀಡಿದೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ ಜೆರಿನ್ ಜಾರ್ಜ್‌ಕುಟ್ಟಿ ಅವರ ಮಾಹಿತಿಯ ಪ್ರಕಾರ, ಚಿತ್ರದ ಮೊದಲ ದಿನದ ಅಖಿಲ ಭಾರತ ಮುಂಗಡ ವ್ಯವಹಾರವು ಈಗಾಗಲೇ 1.30 ಕೋಟಿ ರೂಪಾಯಿಗಳನ್ನು ತಲುಪಿದ್ದು, ಬಿಡುಗಡೆಗೆ ಇನ್ನೂ ಮೂರು ದಿನಗಳು ಬಾಕಿ ಈ ದಾಖಲೆ ಬರೆದಿದೆ.
ಕೇವಲ ತಮಿಳುನಾಡು ಮಾತ್ರವಲ್ಲದೆ ಕೇರಳದ ಪ್ರೇಕ್ಷಕರಲ್ಲೂ ಈ ಸಿನಿಮಾ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಇಂದ್ರನ್ಸ್, ಸ್ವಾಸಿಕಾ, ಶಿವದ ಸೇರಿದಂತೆ ಮಲಯಾಳಂ ಚಿತ್ರರಂಗದ ಹಲವು ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ ಸೂರ್ಯ ಅವರು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಇಂದ್ರನ್ಸ್ ಅವರ ಕಠಿಣ ಪರಿಶ್ರಮ ಮತ್ತು ಸಿನಿಮಾ ಪ್ರಯಾಣದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಚಿತ್ರಕ್ಕೆ ಆರ್.ಜೆ. ಬಾಲಾಜಿ ಅವರೊಂದಿಗೆ ಅಶ್ವಿನ್ ರವಿಚಂದ್ರನ್ ಮತ್ತು ತಂಡದವರು ಚಿತ್ರಕಥೆ ಬರೆದಿದ್ದಾರೆ.
ಖ್ಯಾತ ನಟ ಸೂರ್ಯ ಅಭಿನಯದ 'ಕರುಪ್ಪು' ಸಿನಿಮಾವನ್ನು ಆರ್.ಜೆ. ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಮೇ 14ರಂದು ವಿಶ್ವದಾದ್ಯಂತ ತಮಿಳು ಮತ್ತು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರದ ಟೀಸರ್ ಮತ್ತು ಪೋಸ್ಟರ್‌ಗಳು ಈಗಾಗಲೇ ಇದೊಂದು ಕೋರ್ಟ್ ರೂಮ್ ಡ್ರಾಮಾ ಮತ್ತು ಗ್ರಾಮೀಣ ಸೊಗಡಿನ ಕಥೆ ಎಂಬ ಸುಳಿವು ನೀಡಿವೆ. ವಿಶೇಷವಾಗಿ ಹಳ್ಳಿಯ ದೈವ ಮತ್ತು ಕಪ್ಪು ಕೋಟು ಧರಿಸಿ ನ್ಯಾಯಕ್ಕಾಗಿ ಹೋರಾಡುವ ವಕೀಲನ ಪಾತ್ರಕ್ಕೆ ಈ 'ಕರುಪ್ಪು' ಎಂಬ ಶೀರ್ಷಿಕೆ ಎಂದು ಹೆಸರಿಡಲಾಗಿದೆ.

