ಜೆನ್ ಜಿ ಪ್ರೇಕ್ಷಕರಿಗಾಗಿ ಹೊಂಬಾಳೆಯಿಂದ  ಹೊಸ ಚಿತ್ರ ಘೋಷಣೆ
x

ಹೊಂಬಾಳೆ ಫಿಲ್ಮ್ಸ್‌ನಿಂದ ಜೆನ್ ಜಿ ಪ್ರೇಕ್ಷಕರಿಗಾಗಿ 'ಎತೊ ಕ ನಾಯ್' ಹಿಪ್-ಹಾಪ್ ಮ್ಯೂಸಿಕಲ್ ಚಿತ್ರ ಪ್ರಕಟ.

ಜೆನ್ ಜಿ ಪ್ರೇಕ್ಷಕರಿಗಾಗಿ ಹೊಂಬಾಳೆಯಿಂದ ಹೊಸ ಚಿತ್ರ ಘೋಷಣೆ

ಹೊಂಬಾಳೆ ಫಿಲ್ಮ್ಸ್‌ನಿಂದ ಜೆನ್ ಜಿ ಪ್ರೇಕ್ಷಕರಿಗಾಗಿ 'ಎತೊ ಕ ನಾಯ್' ಹಿಪ್-ಹಾಪ್ ಮ್ಯೂಸಿಕಲ್ ಚಿತ್ರ ಪ್ರಕಟ. ಮುಂಬೈನಲ್ಲಿ ಶೂಟಿಂಗ್ ಆರಂಭ.


Click the Play button to hear this message in audio format

'ಕೆಜಿಎಫ್', 'ಸಲಾರ್' ಮತ್ತು 'ಕಾಂತಾರ'ದಂತಹ ಜಾಗತಿಕ ಮಟ್ಟದ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್', ಇದೀಗ ಇಂದಿನ ಯುವ ಪೀಳಿಗೆ ಹಾಗೂ 'ಜೆನ್ ಜಿ' ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಸಂಪೂರ್ಣ ವಿಭಿನ್ನ ಶೈಲಿಯ ಹಿಪ್-ಹಾಪ್ ಮ್ಯೂಸಿಕಲ್ ಕಥಾಹಂದರ ಹೊಂದಿರುವ 'ಎತೊ ಕ ನಾಯ್' (Yeto Ka Naay) ಎಂಬ ಹೊಸ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಸದಾ ಹೊಸತನ ಹಾಗೂ ವಿಭಿನ್ನ ಪ್ರಯೋಗಗಳಿಗೆ ಒತ್ತು ನೀಡುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಈ ಚಿತ್ರಕ್ಕೆ ಭಾರಿ ಬಂಡವಾಳ ಹೂಡುತ್ತಿದ್ದಾರೆ. ಸಂಪೂರ್ಣವಾಗಿ ಮುಂಬೈ ನಗರದ ಹಿನ್ನೆಲೆಯಲ್ಲಿ ಈ ಕಥೆ ಮೂಡಿಬರಲಿದ್ದು, ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಸಂಗೀತದ ಜರ್ನಿಗೆ ಮುನ್ನುಡಿ ಬರೆಯಲಿದೆ ಎಂಬ ಭಾರಿ ನಿರೀಕ್ಷೆ ಮೂಡಿಸಿದೆ. ಯುವ ಸಮೂಹವನ್ನು ಸೆಳೆಯುವ ಉದ್ದೇಶದಿಂದ ಚಿತ್ರದ ಹಿಂದಿ ಅವತರಣಿಕೆಯನ್ನು 'ವೈಕೆಎನ್ ಪೆಹಲಾ ವಾರ್' ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈ ಮಹತ್ವಾಕಾಂಕ್ಷಿ ಚಿತ್ರಕ್ಕೆ ಸಾರಂಗ್ ಸಂಜೀವ್ ಸಾಠಾಯೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಸಾರಂಗ್ ಸಾಠಾಯೆ, ಸುಜಯ್ ಜಾಧವ್, ಸೃಷ್ಟಿ ತಾವಡೆ ಮತ್ತು ಶ್ರೇಯಸ್ ಸಾಗ್ವೇಕರ್ ಅವರು ಒಟ್ಟಾಗಿ ಸಿದ್ಧಪಡಿಸಿದ್ದಾರೆ. ಚಿತ್ರಕ್ಕೆ ಎ.ವಿ. ಪ್ರಫುಲ್ಲಚಂದ್ರ ಅವರ ತಾಂತ್ರಿಕ ಹಾಗೂ ಸಂಗೀತ ನಿರ್ದೇಶನವಿದ್ದು, ಹರ್ಷವೀರ್ ಒಬೆರಾಯ್ ಅವರ ಛಾಯಾಗ್ರಹಣ ಇರಲಿದೆ.

ಸದ್ಯಕ್ಕೆ ಮುಂಬೈನಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇದೇ ವರ್ಷದ ಅಂತ್ಯದೊಳಗೆ ಸಿನಿಮಾವನ್ನು ಬೆಳ್ಳಿತೆರೆಗೆ ತರಲು ಚಿತ್ರತಂಡ ಯೋಜಿಸಿದೆ. ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದೆ. ಈ ಹೊಸ ಸಿನಿಮಾದ ಘೋಷಣೆಯ ಬೆನ್ನಲ್ಲೇ ಹೊಂಬಾಳೆ ಸಂಸ್ಥೆಯು ಸ್ಯಾಂಡಲ್‌ವುಡ್‌ನಲ್ಲಿಯೂ ಶೀಘ್ರದಲ್ಲೇ ಮತ್ತಷ್ಟು ಕಂಟೆಂಟ್ ಆಧಾರಿತ ವಿಶಿಷ್ಟ ಕನ್ನಡ ಚಿತ್ರಗಳನ್ನು ಪ್ರಕಟಿಸಲು ಯೋಜಿಸುತ್ತಿದ್ದು, ಕಥೆಗಳ ಆಯ್ಕೆಯಲ್ಲಿ ನಿರತವಾಗಿದೆ.

Read More
Next Story