ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್!
x
ನಟ ಮೋಹನ್‌ ಲಾಲ್‌

ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್!

ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಹಾಗೂ ಸ್ಟಾರ್ ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಈ ಬಹುನಿರೀಕ್ಷಿತ ಚಿತ್ರವು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿದೆ.


Click the Play button to hear this message in audio format

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾದ ‘ದೃಶ್ಯಂ’ ಫ್ರಾಂಚೈಸಿಯ ಇತ್ತೀಚಿನ ಬಿಡುಗಡೆ ‘ದೃಶ್ಯಂ 3’ ಈಗ ಒಟಿಟಿ ಪ್ರಿಯರ ನಿದ್ದೆಗೆಡಿಸಿದೆ. ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಹಾಗೂ ಸ್ಟಾರ್ ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಈ ಬಹುನಿರೀಕ್ಷಿತ ಚಿತ್ರವು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿದೆ.

230 ಕೋಟಿ ರೂ. ದಾಟಿದ ಜಾರ್ಜ್‌ಕುಟ್ಟಿ ಸಾಮ್ರಾಜ್ಯ!

ಮೇ 21 ರಂದು ನಟ ಮೋಹನ್ ಲಾಲ್ ಅವರ 66ನೇ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ವಿಶ್ವದಾದ್ಯಂತ ತೆರೆಕಂಡ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸುರಿಮಳೆಗೈದಿದೆ. ವ್ಯಾಪಾರ ಮೂಲಗಳ ಪ್ರಕಾರ, ಚಿತ್ರವು ಇದುವರೆಗೆ ವಿಶ್ವಾದ್ಯಂತ ಬರೋಬ್ಬರಿ 230.23 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಬರೆದಿದೆ. ಮೊದಲ ಎರಡು ಭಾಗಗಳಿಗೆ ಹೋಲಿಸಿದರೆ ಪ್ರೇಕ್ಷಕರಿಂದ ಈ ಬಾರಿ ಕೊಂಚ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸಸ್ಪೆನ್ಸ್ ಮತ್ತು ರೋಮಾಂಚನ ಕೊಂಚ ಕಮ್ಮಿ ಎನ್ನುವ ವಿಮರ್ಶೆಗಳ ನಡುವೆಯೂ ಮಲಯಾಳಂ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಅಬ್ಬರ ಕಮ್ಮಿಯಾಗಿಲ್ಲ. ಕರ್ನಾಟಕದಲ್ಲಿ ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದ್ದರೂ, ಕೇರಳ ಹಾಗೂ ವಿದೇಶಗಳಲ್ಲಿ ಚಿತ್ರ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್: ಯಾವಾಗ ರಿಲೀಸ್?

ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಜಾರ್ಜ್‌ಕುಟ್ಟಿಯ ರಹಸ್ಯವನ್ನು ಮನೆಯಲ್ಲೇ ಕುಳಿತು ನೋಡಲು ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಗಾಂಧಿನಗರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ, ‘ದೃಶ್ಯಂ 3’ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ದೈತ್ಯ ಒಟಿಟಿ ಸಂಸ್ಥೆಯಾದ ಅಮೆಜಾನ್ ಪ್ರೈಮ್ ವಿಡಿಯೋ ಭಾರಿ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ.

ದೃಶ್ಯಂ 3 ಸಿನಿಮಾದಲ್ಲಿ ನಟ ಮೋಹನ್‌ ಲಾಲ್‌

ಚಿತ್ರರಂಗದ ನಿಯಮದ ಪ್ರಕಾರ ಥಿಯೇಟರ್ ರಿಲೀಸ್ ಆದ 6 ರಿಂದ 8 ವಾರಗಳ ಬಳಿಕ ಒಟಿಟಿಯಲ್ಲಿ ಸಿನಿಮಾ ಪ್ರಸಾರವಾಗಬೇಕಿರುವುದರಿಂದ, ಜೂನ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲಿದೆ. ಸದ್ಯದ ಮಾಹಿತಿ ಪ್ರಕಾರ ಜೂನ್ 18 ಅಥವಾ ಜೂನ್ 25 ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದ್ದು, ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.

ದೊಡ್ಡ ತಾರಾಗಣದ ಸಿನಿಮಾ

ಆಶೀರ್ವಾದ್ ಸಿನಿಮಾಸ್, ಪನೋರಮಾ ಸ್ಟುಡಿಯೋಸ್ ಮತ್ತು ಪೆನ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಮೋಹನ್ ಲಾಲ್ ಅವರಿಗೆ ಜೋಡಿಯಾಗಿ ನಟಿ ಮೀನಾ ನಟಿಸಿದ್ದಾರೆ. ಉಳಿದಂತೆ ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಕಲಾಭವನ್ ಶಾಜನ್, ಸಿದ್ದಿಕ್, ಮುರಳಿ ಗೋಪಿ, ಆಶಾ ಶರತ್ ಹಾಗೂ ಬಿಜು ಮೆನನ್ ಒಳಗೊಂಡ ದೊಡ್ಡ ತಾರಾಗಣವೇ ಚಿತ್ರದಲ್ಲಿದ್ದು, ಅನಿಲ್ ಜಾನ್ಸನ್ ಅವರ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದೆ.

Read More
Next Story