ಮಕ್ಕಳ ತಪ್ಪಿಗೆ ಹೆತ್ತವರನ್ನು ದೂಷಿಸಬೇಡಿ: ಪುಣೆ ಪ್ರಕರಣಕ್ಕೆ ಕಂಗನಾ ರಿಯಾಕ್ಷನ್
x

ವೀರ್ ದಾಸ್ ಅವರೇ ಸ್ವತಃ ಸ್ಪಷ್ಟನೆ ನೀಡಿ ತೆರೆ ಎಳೆದಿದ್ದು, ಇದಕ್ಕೆ ನಟಿ ಮತ್ತು ಸಂಸದೆ ಕಂಗನಾ ರಣಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮಕ್ಕಳ ತಪ್ಪಿಗೆ ಹೆತ್ತವರನ್ನು ದೂಷಿಸಬೇಡಿ: ಪುಣೆ ಪ್ರಕರಣಕ್ಕೆ ಕಂಗನಾ ರಿಯಾಕ್ಷನ್

ಪುಣೆ ಕೇತನ್ ಅಗರ್ವಾಲ್ ಸಾವು ಪ್ರಕರಣದ ಆರೋಪಿ ಸಿಯಾ ತಂದೆಯ ವಿಡಿಯೋ ಹಂಚಿಕೊಂಡ ಕಂಗನಾ ರಣಾವತ್, ಮಕ್ಕಳ ಕ್ರಿಮಿನಲ್ ಕೃತ್ಯಕ್ಕೆ ಪೋಷಕರನ್ನು ದೂಷಿಸಬೇಡಿ ಎಂದಿದ್ದಾರೆ.


Click the Play button to hear this message in audio format

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 26 ವರ್ಷದ ಯುವಕ ಕೇತನ್ ಅಗರ್ವಾಲ್ ನಿಗೂಢ ಸಾವು ಪ್ರಕರಣ ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಈ ಆಘಾತಕಾರಿ ಘಟನೆಯ ಕುರಿತು ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, "ಮಕ್ಕಳ ತಪ್ಪು ನಡತೆಗೆ ಪೋಷಕರನ್ನು ಹೊಣೆ ಮಾಡುವುದು ಸರಿಯಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಟನೆಯ ಹಿನ್ನೆಲೆ

ಜೂನ್ 18 ರಂದು ಲೋಹಗಢ ಕೋಟೆಯಲ್ಲಿ ಚಾರಣ ಮಾಡುವಾಗ ಕೆಳಗೆ ಬಿದ್ದು ಕೇತನ್ ಅಗರ್ವಾಲ್ ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯ ಬಳಿಕ ಇದು ಅಪಘಾತವಲ್ಲ, ಬದಲಿಗೆ ವ್ಯವಸ್ಥಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ಇಬ್ಬರನ್ನೂ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಕಂಗನಾ ರಣಾವತ್ ಹೇಳಿದ್ದೇನು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿಯಾ ಗೋಯಲ್ ತಂದೆಯ ವಿಡಿಯೋವೊಂದನ್ನು ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಸುದೀರ್ಘ ಸಂದೇಶ ಬರೆದಿರುವ ಅವರು, ಇಂದಿನ ಕಾಲದಲ್ಲಿ ಮಕ್ಕಳ ನಡವಳಿಕೆಗೆ ಪೋಷಕರನ್ನು ದೂಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ಕುಟುಂಬ, ಮನೆ ಅಥವಾ ಪೋಷಕರನ್ನು ನೋಡಿ ಮಕ್ಕಳ ಸಂಸ್ಕಾರವನ್ನು ಅಳೆಯಲು ಸಾಧ್ಯವಿಲ್ಲ. ಮಕ್ಕಳನ್ನು ಯಾರು ಪ್ರಭಾವಿಸುತ್ತಿದ್ದಾರೆ ಮತ್ತು ಅವರ ಮೈಂಡ್‌ಸೆಟ್ ಅನ್ನು ಯಾರು ಪ್ರೋಗ್ರಾಮ್ ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಅವರು ಯಾರೊಂದಿಗೆ ಸಮಯ ಕಳೆಯುತ್ತಿದ್ದಾರೆ? ಸಾಮಾಜಿಕ ಜಾಲತಾಣಗಳು (Social Media), ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅಥವಾ ಅವರ ನಿಜ ಜೀವನದ ಸ್ನೇಹಿತರ ಪ್ರಭಾವ ಏನಿದೆ ಎಂಬುದು ಮುಖ್ಯ," ಎಂದು ಕಂಗನಾ ಬರೆದುಕೊಂಡಿದ್ದಾರೆ.

"ಇಂದಿನ ಯುವ ಪೀಳಿಗೆ ಹಲವು ರೀತಿಯ ಸಮಾಂತರ ಜೀವನವನ್ನು ಜೀವಿಸುತ್ತಿದೆ. ತಾವು ನಿಜವಾಗಿ ಹೇಗಿದ್ದೇವೆ ಎನ್ನುವುದಕ್ಕಿಂತ, ಸಮಾಜಕ್ಕೆ ಹೇಗೆ ಕಾಣಿಸಿಕೊಳ್ಳಬೇಕು ಎಂಬ ಸುಳ್ಳು ಬಿಂಬವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳ ತಪ್ಪು ನಿರ್ಧಾರಗಳು ಮತ್ತು ಕ್ರಿಮಿನಲ್ ಕೃತ್ಯಗಳಿಗೆ ಅವರ ಕುಟುಂಬ ಅಥವಾ ಪೋಷಕರನ್ನು ಎಂದಿಗೂ ಜವಾಬ್ದಾರರನ್ನಾಗಿ ಮಾಡಬಾರದು," ಎಂದು ಕಂಗನಾ ರಣಾವತ್ ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಈ ಕೊಲೆ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರು ತೀವ್ರಗೊಳಿಸಿದ್ದು, ಕಂಗನಾ ಅವರ ಈ ಹೇಳಿಕೆ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read More
Next Story