ಮಗನಿಗೆ ‘ಎರೆಯ’ ಎಂದು ಹೆಸರಿಟ್ಟ ಡಾಲಿ ಧನಂಜಯ; ಹೆಸರಿನ ಅರ್ಥವೇನು?
x

ನಟ ಡಾಲಿ ಧನಂಜಯ ಹಾಗೂ ಧನ್ಯತಾ ದಂಪತಿ ತಮ್ಮ ಮಗನಿಗೆ ‘ಎರೆಯ’ ಎಂದು ಹೆಸರಿಟ್ಟಿದ್ದಾರೆ.

ಮಗನಿಗೆ ‘ಎರೆಯ’ ಎಂದು ಹೆಸರಿಟ್ಟ ಡಾಲಿ ಧನಂಜಯ; ಹೆಸರಿನ ಅರ್ಥವೇನು?

ಡಾಲಿ ಧನಂಜಯ ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಹಲವು ಸಂದರ್ಭಗಳಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಮಗನಿಗೆ ‘ಎರೆಯ’ ಎಂಬ ಅಪರೂಪದ ಕನ್ನಡ ಹೆಸರನ್ನು ಇಡುವ ಮೂಲಕವೂ ಕನ್ನಡದ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.


Click the Play button to hear this message in audio format

ಕನ್ನಡದ ಜನಪ್ರಿಯ ನಟ ಡಾಲಿ ಧನಂಜಯ ಹಾಗೂ ಅವರ ಪತ್ನಿ ಧನ್ಯತಾ ದಂಪತಿ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿದ್ದಾರೆ. ಈ ವಿಶೇಷ ಹೆಸರಿನ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ‘ಎರೆಯ’ ಎಂಬುದು ಕನ್ನಡದ ಪಾರಂಪರಿಕ ಪದವಾಗಿದ್ದು, ರಾಜ, ಒಡೆಯ ಅಥವಾ ಅಧಿಪತಿ ಎಂಬ ಅರ್ಥವನ್ನು ಹೊಂದಿದೆ. ಹೀಗಾಗಿ ಮಗನಿಗೆ ವಿಶಿಷ್ಟ ಹಾಗೂ ಅರ್ಥಪೂರ್ಣವಾದ ಕನ್ನಡ ಹೆಸರನ್ನೇ ಇಡಲು ಧನಂಜಯ ದಂಪತಿ ಮುಂದಾಗಿದ್ದಾರೆ.

ಕನ್ನಡದ ಮೇಲಿನ ಅಭಿಮಾನ

ಡಾಲಿ ಧನಂಜಯ ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಹಲವು ಸಂದರ್ಭಗಳಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಮಗನಿಗೆ ‘ಎರೆಯ’ ಎಂಬ ಅಪರೂಪದ ಕನ್ನಡ ಹೆಸರನ್ನು ಇಡುವ ಮೂಲಕವೂ ಕನ್ನಡದ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

ಧನಂಜಯ ಹಾಗೂ ಧನ್ಯತಾ ದಂಪತಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ‘ಎರೆಯ’ ಎಂಬ ವಿಶಿಷ್ಟ ಹೆಸರಿಗೆ ಅಭಿಮಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟ ಡಾಲಿ ಧನಂಜಯ ಅವರು ವೈದ್ಯೆ ಧನ್ಯತಾ ಅವರನ್ನು 2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನ ಇಬ್ಬರೂ ಸುಮಾರು ಒಂದು ವರ್ಷದಿಂದ ಪ್ರೀತಿಯಲ್ಲಿದ್ದರು ಎನ್ನಲಾಗಿತ್ತು. ಇಬ್ಬರ ಕುಟುಂಬದ ಒಪ್ಪಿಗೆಯೊಂದಿಗೆ ವಿವಾಹ ನೆರವೇರಿತ್ತು.

ಧನಂಜಯ ಅವರಿಗೆ 2026 ಅತ್ಯಂತ ಬ್ಯುಸಿ ಹಾಗೂ ವೃತ್ತಿಜೀವನದಲ್ಲಿ ಮಹತ್ವದ ವರ್ಷವಾಗಲಿದೆ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು. ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪ್ರಮುಖ ನಿರೀಕ್ಷಿತ ಸಿನಿಮಾಗಳಲ್ಲಿ ‘ಹಲಗಲಿ’ ಕೂಡ ಒಂದು. ಸುಕೇಶ್ ಡಿಕೆ ನಿರ್ದೇಶನದ ಈ ಐತಿಹಾಸಿಕ ಕಥಾನಕದ ಚಿತ್ರದಲ್ಲಿ ಧನಂಜಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಎರಡು ಭಾಗಗಳಲ್ಲಿ ರೂಪಿಸಲಾಗುತ್ತಿದೆ. ಇದರ ಜೊತೆಗೆ ‘ಜಿಂಗೋ’ ಸಿನಿಮಾದಲ್ಲೂ ಧನಂಜಯ ನಾಯಕನಾಗಿ ನಟಿಸುತ್ತಿದ್ದಾರೆ. ‘ಡೇರ್‌ಡೆವಿಲ್ ಮುಸ್ತಫಾ’ ಖ್ಯಾತಿಯ ಶಶಾಂಕ್ ಸೊಗಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರರಂಗದ ಜೊತೆಗೆ ಧನಂಜಯ ಅವರು ಒಟಿಟಿ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ‘ಜೆರಾಕ್ಸ್’ ಎಂಬ ಫ್ಯಾಂಟಸಿ-ಕಾಮಿಡಿ ಥ್ರಿಲ್ಲರ್ ವೆಬ್ ಸರಣಿಯ ಮೂಲಕ ಅವರು ಒಟಿಟಿ ನಿರ್ಮಾಣ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಈ ಸರಣಿಯನ್ನು ಝೀ5ನಲ್ಲಿ ಬಿಡುಗಡೆ ಮಾಡಲು ಘೋಷಿಸಲಾಗಿದೆ.

Read More
Next Story