Mother Promise movie produced by Natarakshasa Dolly Dhananjay. A lavish release at 10!
x

ನಟ ಡಾಲಿ ಧನಂಜಯ್‌

‘ನಟರಾಕ್ಷಸ’ ಡಾಲಿ ಧನಂಜಯ್ ನಿರ್ಮಾಣದ ‘ಮದರ್ ಪ್ರಾಮಿಸ್’ ಸಿನಿಮಾ ಜು. 10ಕ್ಕೆ ಅದ್ದೂರಿ ಬಿಡುಗಡೆ!

‘ಮದರ್ ಪ್ರಾಮಿಸ್’ ಒಂದು ಔಟ್ ಅಂಡ್ ಔಟ್ ಕಾಮಿಡಿ ಆಕ್ಷನ್ ಸಿನಿಮಾವಾಗಿದ್ದು, ಅಮ್ಮನ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. ಸೀಮಿತ ಅವಧಿಯಲ್ಲಿ ನಡೆಯುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಚಿತ್ರ ಹೆಸರಿನ ರೌಡಿಗಳ ದಂಡೇ ಇದೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ‘ನಟರಾಕ್ಷಸ’ ಡಾಲಿ ಧನಂಜಯ್ ಹಾಗೂ ಅವರ ಗೆಳೆಯರ ಬಳಗ ಒಟ್ಟಾಗಿ ನಟಿಸಿರುವ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಪೋಸ್ಟರ್, ಟೈಟಲ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಗಾಂಧಿನಗರದಲ್ಲಿ ಭಾರಿ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ಇದೇ ಜು. 10 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಸಿನಿಮಾದ ಹೊಸ ಪೋಸ್ಟರ್ ಹಂಚಿಕೊಂಡಿರುವ ನಟ ಧನಂಜಯ್, ತಮ್ಮದೇ ಸ್ಟೈಲ್‌ನಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. "ಡಿಸ್ಟ್ರಿಬ್ಯೂಟರ್ ಲಾಕ್ ಆಗಿದ್ದಾರೆ. ಡೇಟ್ ಫಿಕ್ಸ್ ಆಗಿದೆ. ಹತ್ತಿರದ ಥಿಯೇಟರ್​​ಗಳಲ್ಲಿ ಜು. 10 ರಿಂದ ಆಟ ಶುರು" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಡಾಲಿ ಪೋಸ್ಟ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಕಮೆಂಟ್ ಸೆಕ್ಷನ್‌ನಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದು ಸಂಭ್ರಮಿಸುತ್ತಿದ್ದಾರೆ.

ರಗಡ್ ಹುಡುಗರ ಕಾಮಿಡಿ ಕಿಕ್!

‘ಮದರ್ ಪ್ರಾಮಿಸ್’ ಒಂದು ಔಟ್ ಅಂಡ್ ಔಟ್ ಕಾಮಿಡಿ ಆಕ್ಷನ್ ಸಿನಿಮಾವಾಗಿದ್ದು, ಅಮ್ಮನ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. ಸೀಮಿತ ಅವಧಿಯಲ್ಲಿ ನಡೆಯುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಚಿತ್ರ ಹೆಸರಿನ ರೌಡಿಗಳ ದಂಡೇ ಇದೆ. ಸಿನಿಮಾದಲ್ಲಿ ‘ರೋಸಿ’, ‘ದೊನ್ನೆ ಬಿರಿಯಾನಿ’, ‘ರ್ಯಾಂಡಿ’, ‘ಕ್ಯಾಂಡಿ’, ‘ಮ್ಯಾಗಿ’, ‘7 ಅಪ್’, ‘ಜಿಲೇಬಿ’, ‘ಬ್ಯಾಂಡೆಡ್’ ನಂತಹ ವಿಭಿನ್ನ ಪಾತ್ರಗಳಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿವೆ.

ನಟ ಡಾಲಿ ಧನಂಜಯ ಅಭಿನಯದ ʼಮದರ್‌ ಪ್ರಾಮಿಸ್‌ʼ ಚಿತ್ರದ ಪೋಸ್ಟರ್‌

ಮೈಸೂರು ಪೂರ್ಣ ಚೊಚ್ಚಲ ನಿರ್ದೇಶನ

ಖ್ಯಾತ ನಟ ಮೈಸೂರು ಪೂರ್ಣ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಚಿತ್ರದಲ್ಲಿ ಧನಂಜಯ್ ಜೊತೆಗೆ ಮೈಸೂರು ಪೂರ್ಣ ಹಾಗೂ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಇನ್ನು ಹಿರಿಯ ನಟಿ ವಿನಯಾ ಪ್ರಸಾದ್ ಹಾಗೂ ಗೀತಾ ಅವರು ತಾಯಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ಮತ್ತೊಂದು ವಿಶೇಷ.

ಹಾಡುಗಳು ವೈರಲ್

ಚಿತ್ರದ ‘ವೇನಿ ವೀಡಿ ವೀಚಿ’, ‘ನೀನೇ ಬೇಕು ಅಮ್ಮ’ ಹಾಗೂ ಇತ್ತೀಚೆಗಷ್ಟೇ ರಿಲೀಸ್ ಆದ ‘ರಗಸದಅ’ ಹಾಡುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿವೆ. ಈ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ನೀಡಿದ್ದು, ಪ್ರದೀಪ್ ರಾವ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಧನಂಜಯ್ ಅವರ ‘ಡಾಲಿ ಪಿಕ್ಚರ್ಸ್’ ಜೊತೆ ಹರ್ಷ್ ಅವರು ಕೈಜೋಡಿಸಿ ಚಿತ್ರಕ್ಕೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

ಸದ್ಯ ‘ಹಲಗಲಿ’, ‘ಉತ್ತರಕಾಂಡ’, ‘ಅಣ್ಣಾ ಫ್ರಂ ಮೆಕ್ಸಿಕೊ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಿರುವ ಡಾಲಿ ಧನಂಜಯ್, ನಿರ್ಮಾಪಕರಾಗಿಯೂ ಮೂರು ಸಿನಿಮಾಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಸದ್ಯಕ್ಕಂತೂ ಜು. 10ಕ್ಕೆ ಥಿಯೇಟರ್‌ನಲ್ಲಿ ‘ಮದರ್ ಪ್ರಾಮಿಸ್’ ಗಿಮಿಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Read More
Next Story