Brahmastra Part 2| ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಭಾಗ-2 ಚಿತ್ರ ಶೀಘ್ರದಲ್ಲೇ ಘೋಷಣೆ
x

ರಾಮಾಯಣದ ನಂತರ ಬ್ರಹ್ಮಾಸ್ತ್ರ 2 ಆರಂಭವಾಗಲಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಘೋಷಿಸಿದ್ದಾರೆ.

Brahmastra Part 2| ರಣಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ-2' ಚಿತ್ರ ಶೀಘ್ರದಲ್ಲೇ ಘೋಷಣೆ

ರಾಮಾಯಣದ ನಂತರ ಬ್ರಹ್ಮಾಸ್ತ್ರ 2 ಆರಂಭವಾಗಲಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಘೋಷಿಸಿದ್ದಾರೆ. ರಣಬೀರ್-ದೀಪಿಕಾ ಕಾಂಬಿನೇಷನ್ ಹಾಗೂ ದೇವ್-ಅಮೃತಾ ಕಥೆ ಈ ಭಾಗದ ಹೈಲೈಟ್ ಆಗಿರಲಿದೆ.


Click the Play button to hear this message in audio format

ಸಿನಿಮಾ ಜಗತ್ತಿನ ಪ್ರತಿಷ್ಠಿತ 'ಸಿನಿಮಾ ಕಾನ್ 2026' ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಅಪ್‌ಡೇಟ್ ಒಂದು ಹೊರಬಿದ್ದಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ರಣಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ-2' ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಪ್ರಸ್ತುತ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಮಿತ್, ರಾಮಾಯಣದ ಎರಡು ಭಾಗಗಳ ಬಿಡುಗಡೆಯ ನಂತರ 'ಬ್ರಹ್ಮಾಸ್ತ್ರ ಭಾಗ-2' ಮುಂದುವರಿಸುವುದಾಗಿ ತಿಳಿಸಿದ್ದಾರೆ. ಈ ಘೋಷಣೆಯ ವೇಳೆ ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಯಶ್ ಕೂಡ ಉಪಸ್ಥಿತರಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತೀಯ ಪುರಾಣಗಳ ಆಧಾರಿತ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ದೇವ್ ಮತ್ತು ಅಮೃತಾ ಪ್ರೇಮಕಥೆ

ಮೊದಲ ಭಾಗದಲ್ಲಿ ಕೇವಲ ಸುಳಿವು ನೀಡಲಾಗಿದ್ದ 'ದೇವ್' ಪಾತ್ರದ ಹಿನ್ನೆಲೆಯೇ ಎರಡನೇ ಭಾಗದ ಕಥಾಹಂದರವಾಗಲಿದೆ. ರಣಬೀರ್ ಕಪೂರ್ ಫ್ಲ್ಯಾಶ್‌ಬ್ಯಾಕ್ ಸನ್ನಿವೇಶಗಳಲ್ಲಿ ದೇವ್ ಆಗಿ ಕಾಣಿಸಿಕೊಳ್ಳಲಿದ್ದು, ಅವರ ಮತ್ತು ಅಮೃತಾ ಪಾತ್ರದ ನಡುವಿನ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ವಿವರಿಸಲಾಗುವುದು. ನಟಿ ದೀಪಿಕಾ ಪಡುಕೋಣೆ ಅಮೃತಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಸುದೀರ್ಘ ಕಾಲದ ನಂತರ ರಣಬೀರ್-ದೀಪಿಕಾ ಜೋಡಿ ತೆರೆಯ ಮೇಲೆ ಒಂದಾಗುವ ನಿರೀಕ್ಷೆಯಿದೆ.

ಸುಮಾರು 500 ರಿಂದ 600 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, 2026ರ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಭಾರತೀಯ ಪುರಾಣ ಮತ್ತು ಆಧುನಿಕ ಜಗತ್ತನ್ನು ಬೆಸೆಯುವ ಈ ಸಿನಿಮಾ ವಿಶ್ವದರ್ಜೆಯ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಹೊಂದಿರಲಿದೆ ಎಂದು ತಂಡ ತಿಳಿಸಿದೆ.

ಇದಕ್ಕೂ ಮುನ್ನ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳಲಿರುವ 'ರಾಮಾಯಣ' ಚಿತ್ರದ ಮೊದಲ ಭಾಗ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಅಮೆರಿಕದ ಲಾಸ್ ವೇಗಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಸಿನಿಮಾಕಾನ್ 2026ರ ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಖ್ಯಾತ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಸ್ಯಾಂಡಲ್‌ವುಡ್‌ನ 'ರಾಕಿಂಗ್ ಸ್ಟಾರ್' ಯಶ್ ಈ ಜಾಗತಿಕ ವೇದಿಕೆಯಲ್ಲಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಈ ಚಿತ್ರದ ದೃಶ್ಯ ವೈಭವವನ್ನು ವಿವರಿಸಿದ ನಮಿತ್ ಮಲ್ಹೋತ್ರಾ, ಇದು "ಅವತಾರ್ ಮತ್ತು ಗ್ಲಾಡಿಯೇಟರ್ ಸಿನಿಮಾ ನೋಡಿದ ಅನುಭವ ನೀಡುವ ಒಂದು ಮಹಾನ್ ಕ್ಷಣ" ಎಂದು ಬಣ್ಣಿಸಿದ್ದಾರೆ. ವಿಶೇಷವೆಂದರೆ, ರಾಮಾಯಣ ಚಿತ್ರದ ಪೋಸ್ಟರ್‌ಗಳು ಹಾಲಿವುಡ್‌ನ 'ಡ್ಯೂನ್ 3' ಮತ್ತು 'ಅವೆಂಜರ್ಸ್: ಡೂಮ್ಸ್‌ಡೇ' ನಂತಹ ಬೃಹತ್ ಚಿತ್ರಗಳ ಪೋಸ್ಟರ್‌ಗಳ ಪಕ್ಕದಲ್ಲೇ ರಾರಾಜಿಸುತ್ತಿದೆ.

Read More
Next Story