3ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅಮೀರ್ ಖಾನ್
x

ನಟ ಅಮೀರ್ ಖಾನ್ (61) ಜುಲೈ 5 ರಂದು ಗೌರಿ ಸ್ಪ್ರ್ಯಾಟ್ (47) ಅವರೊಂದಿಗೆ ಸರಳವಾಗಿ ರಿಜಿಸ್ಟರ್‌ ವಿವಾಹವಾಗಲಿದ್ದಾರೆ.

3ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅಮೀರ್ ಖಾನ್

ನಟ ಅಮೀರ್ ಖಾನ್ (61) ಜುಲೈ 5 ರಂದು ಗೌರಿ ಸ್ಪ್ರ್ಯಾಟ್ (47) ಅವರೊಂದಿಗೆ ಸರಳವಾಗಿ ನೋಂದಣಿ ವಿವಾಹವಾಗಲಿದ್ದಾರೆ. ಈ ಮದುವೆಗೆ ಶಾರುಖ್ ಹಾಗೂ ಸಲ್ಮಾನ್ ಖಾನ್ ಬರುವ ಸಾಧ್ಯತೆಯಿದೆ.


Click the Play button to hear this message in audio format

ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಅವರು ತಮ್ಮ 61ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕಳೆದ ಒಂದು ವರ್ಷದಿಂದ ಜೊತೆಯಾಗಿರುವ 47 ವರ್ಷದ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಅಮೀರ್ ಖಾನ್ ಜು.5 ರಂದು ಮುಂಬೈನ ತಮ್ಮ ನಿವಾಸದಲ್ಲಿ ಸರಳವಾಗಿ ನೋಂದಣಿ ವಿವಾಹ (ರಿಜಿಸ್ಟರ್ ಮ್ಯಾರೇಜ್) ಆಗಲಿದ್ದಾರೆ ಎಂದು ವರದಿಯಾಗಿದೆ. ಈ ಆಪ್ತ ಸಮಾರಂಭದಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ.

ಇನ್ನು ಅತ್ಯಂತ ಸರಳವಾಗಿ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಬಾಲಿವುಡ್‌ನ ಇತರ ಇಬ್ಬರು ಸ್ಟಾರ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಭಾಗವಹಿಸುವ ಸಾಧ್ಯತೆ ಇದೆ ಎಂದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಮೀರ್ ಖಾನ್ ಅವರ ಭಾವಿ ಪತ್ನಿ ಗೌರಿ ಸ್ಪ್ರ್ಯಾಟ್ ಅವರು ಈ ಹಿಂದೆ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಮೊದಲ ಮದುವೆಯಿಂದ ಕ್ವಿನ್ ಎಂಬ ಏಳು ವರ್ಷದ ಮಗನಿದ್ದಾನೆ.

ವಿಶೇಷವೆಂದರೆ ಗೌರಿ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಬ್ರಿಟಿಷ್ ಮೂಲದ ಕಮ್ಯುನಿಸ್ಟ್ ನಾಯಕ ಫಿಲಿಪ್ ಸ್ಪ್ರ್ಯಾಟ್ ಅವರ ಮೊಮ್ಮಗಳಾಗಿದ್ದಾರೆ. ಅಮೀರ್ ಖಾನ್ ಮತ್ತು ಗೌರಿ ಅವರು 2025ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು.

ಅಮೀರ್ ಖಾನ್ ಅವರಿಗೆ ಇದು 3ನೇ ಮದುವೆಯಾಗಿದ್ದು, ಅವರ ಮೊದಲ ಪತ್ನಿ ರೀನಾ ದತ್ತಾ ಅವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆ ಬಳಿಕ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದ ಅಮೀರ್, ಆಜಾದ್ ಎಂಬ ಮಗನನ್ನು ಹೊಂದಿದ್ದಾರೆ. ಆದರೆ, 2021 ರಲ್ಲಿ ಕಿರಣ್ ರಾವ್ ಮತ್ತು ಅಮೀರ್ ಖಾನ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಅಮೀರ್ ಖಾನ್ ಅವರು ಇತ್ತೀಚೆಗೆ 'ಸಿತಾರೆ ಜಮೀನ್ ಪರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕ್ರಿಕೆಟಿಗ ಲಾಲಾ ಅಮರನಾಥ್ ಅವರ ಬಯೋಪಿಕ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

Read More
Next Story