
ಬಾಬಿ ಡಿಯೋಲ್ ನಟನೆಯ ಮುಂಬರುವ ಚಿತ್ರ 'ಬಂದರ್' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್'ನಲ್ಲಿ ಬಾಬಿ ಡಿಯೋಲ್ ವಿಭಿನ್ನ ಲುಕ್
ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ನಟ ಬಾಬಿ ಡಿಯೋಲ್ ಸಂಕಷ್ಟಕ್ಕೆ ಸಿಲುಕಿದ ರಾಕ್‌ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಜೂನ್ 5ಕ್ಕೆ ತೆರೆಕಾಣಲಿದೆ.
ಬಾಬಿ ಡಿಯೋಲ್ ನಟನೆಯ 'ಬಂದರ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಅವರು ಸಂಕಷ್ಟಕ್ಕೆ ಸಿಲುಕಿದ ರಾಕ್‌ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರದ ಒಂದುೂವರೆ ನಿಮಿಷದ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್ ಸಮೀರ್ ಮೆಹ್ರಾ ಎಂಬ ಮಾಜಿ ರಾಕ್‌ಸ್ಟಾರ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಐಷಾರಾಮಿ ಜೀವನ ಮತ್ತು ಮೋಜಿನ ನಡುವೆ ಇದ್ದಕ್ಕಿದ್ದಂತೆ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಗುರಿಯಾಗಿ ಕಾನೂನು ಸಂಕಷ್ಟಕ್ಕೆ ಸಿಲುಕುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.
ಚಿತ್ರದಲ್ಲಿ ಬಾಬಿ ಡಿಯೋಲ್ ಅವರ ಡಿಸ್ಕೋ ಯುಗದ ಲುಕ್ ಮತ್ತು 'ಕಮ್ ಆನ್ ಬೇಬಿ ದಿಲ್ ಕಿಸ್ಕೋ ದೇಗಿ' ಹಾಡಿನ ಮರುಸೃಷ್ಟಿ ಗಮನ ಸೆಳೆಯುತ್ತಿದೆ. ಆರಂಭದಲ್ಲಿ ಡೇಟಿಂಗ್ ಆಪ್‌ಗಳ ಮೂಲಕ ಮಹಿಳೆಯರನ್ನು ಭೇಟಿಯಾಗುವ ಸಾಮಾನ್ಯ ಜೀವನ ನಡೆಸುವ ಸಮೀರ್, ನಂತರ ಗಂಭೀರ ಆರೋಪವೊಂದನ್ನು ಎದುರಿಸಬೇಕಾಗುತ್ತದೆ.
ಈ ವೇಳೆ ತನ್ನ ಮೇಲೆ ಬಂದಿರುವ ಆರೋಪ ಸುಳ್ಳು ಮತ್ತು ಇದೊಂದು ಪಿತೂರಿ ಎಂದು ಆತ ವಾದಿಸುತ್ತಾನೆ. ಇದೇ ವೇಳೆ ಸನ್ಯಾ ಮಲ್ಹೋತ್ರಾ ಅವರು ಸಮೀರ್‌ನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತನ್ನ ಅಣ್ಣನನ್ನು ಸಂಕಷ್ಟದಿಂದ ಪಾರು ಮಾಡಲು ವಕೀಲರ ಸಹಾಯದೊಂದಿಗೆ ಹೋರಾಟ ನಡೆಸುವ ದೃಶ್ಯಗಳು ಟೀಸರ್‌ನಲ್ಲಿವೆ.
'ಪಾತಾಳ್ ಲೋಕ್' ಮತ್ತು 'ಕೊಹ್ರಾ' ಖ್ಯಾತಿಯ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸ್ಯಾಫ್ರನ್ ಮ್ಯಾಜಿಕ್‌ವರ್ಕ್ಸ್ ನಿರ್ಮಾಣದ ಈ ಚಿತ್ರವನ್ನು ಜೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದೆ. ಕಳೆದ ವರ್ಷ ಟೊರೊಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಸಿನಿಮಾ ಇದೀಗ ಜೂನ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಸನ್ಯಾ ಮಲ್ಹೋತ್ರಾ ಜೊತೆಗೆ ಸಪ್ನಾ ಪಬ್ಬಿ, ಸಬಾ ಆಜಾದ್ ಮತ್ತು ಜಿತೇಂದ್ರ ಜೋಶಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

