
ಗೆಳೆಯನ ಮದುವೆಯಲ್ಲಿ 'ಜೂತಾ ಚುರಾಯಿ' ಆಟವಾಡಿ ಗಮನ ಸೆಳೆದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್.
Aryan Khan| ಗೆಳೆಯನ ಮದುವೆಯಲ್ಲಿ ಆರ್ಯನ್ ಖಾನ್ ಮಸ್ತಿ: ಜೂತಾ ಚುರಾಯಿ ವಿಡಿಯೋ ವೈರಲ್
ಗೆಳೆಯನ ಮದುವೆಯಲ್ಲಿ 'ಜೂತಾ ಚುರಾಯಿ' ಆಟವಾಡಿ ಗಮನ ಸೆಳೆದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್. ವರನ ಶೂ ಉಳಿಸಲು ಆರ್ಯನ್ ನಡೆಸಿದ ತಮಾಷೆಯ ಹೋರಾಟದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಮಸ್ತಿ ಮತ್ತು ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ತನ್ನ ಆಪ್ತ ಸ್ನೇಹಿತನ ಮದುವೆಯಲ್ಲಿ ಭಾಗವಹಿಸಿದ್ದ ಆರ್ಯನ್, ಅಲ್ಲಿನ ಸಂಪ್ರದಾಯದಂತೆ ನಡೆಯುವ 'ಜೂತಾ ಚುರಾಯಿ' (ವರನ ಪಾದರಕ್ಷೆ ಕಳ್ಳತನ) ಆಟದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದಾರೆ.
ಮದುವೆಯ ಸಂಭ್ರಮದ ನಡುವೆ ವಧುವಿನ ಕಡೆಯವರು ವರನ ಶೂಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾಗ, ಆರ್ಯನ್ ಖಾನ್ ಅದನ್ನು ತಡೆಯಲು ಹರಸಾಹಸ ಪಟ್ಟಿದ್ದಾರೆ. ಕೈಯಲ್ಲಿ ಶೂಗಳನ್ನು ಹಿಡಿದುಕೊಂಡು ಯಾರಿಗೂ ಸಿಗದಂತೆ ಓಡಾಡಿರುವ ಅವರು, ಈ ಪ್ರಕ್ರಿಯೆಯಲ್ಲಿ ಬದಲಿ ತಂಡದವರೊಂದಿಗೆ ಸೆಣಸಾಡುತ್ತಾ ಕೆಳಗೆ ಬೀಳುವಷ್ಟು ವೇಗವಾಗಿ ಓಡಿದ್ದಾರೆ. ಆರ್ಯನ್ ಅವರ ಈ ತಮಾಷೆಯ ಕಾಳಗವನ್ನು ನೋಡಿ ಮದುವೆಗೆ ಬಂದಿದ್ದ ಅತಿಥಿಗಳೆಲ್ಲರೂ ನಗೆಗಡಲಲ್ಲಿ ತೇಲಿದ್ದಾರೆ.
ಯಾವಾಗಲೂ ಗಂಭೀರವಾಗಿ ಕಾಣಿಸಿಕೊಳ್ಳುವ ಆರ್ಯನ್ ಖಾನ್ ಅವರ ಈ ಕ್ರೀಡಾ ಮನೋಭಾವ ಮತ್ತು ಸ್ನೇಹಿತನ ಮೇಲಿರುವ ಪ್ರೀತಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೋದಲ್ಲಿ ಅವರು ಶೂ ಬಿಟ್ಟುಕೊಡಲು ನಿರಾಕರಿಸುವ ರೀತಿ ಮತ್ತು ಗುಂಪಿನಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಮದುವೆಯ ಈ ಸಂಭ್ರಮದ ವಿಡಿಯೋವನ್ನು ಇವೆಂಟ್ ಪ್ಲಾನರ್‌ಗಳು ಹಂಚಿಕೊಂಡಿದ್ದು, ಸದ್ಯ ಬಾಲಿವುಡ್ ಅಂಗಳದಲ್ಲಿ ಆರ್ಯನ್ ಖಾನ್ ಅವರ ಈ ಮಸ್ತಿಯೇ ಸದ್ದು ಮಾಡುತ್ತಿದೆ.
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಕ್ಯಾಮೆರಾ ಮುಂದೆ ನಟಿಸುವುದಕ್ಕಿಂತ ಹೆಚ್ಚಾಗಿ ಕ್ಯಾಮೆರಾ ಹಿಂದೆ ನಿರ್ದೇಶಕನಾಗಿ ಗುರುತಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಆರ್ಯನ್ ಖಾನ್ ಅವರು ತಮ್ಮ ಚೊಚ್ಚಲ ನಿರ್ದೇಶನದ ವೆಬ್ ಸರಣಿ 'ಸ್ಟಾರ್‌ಡಮ್' ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಈ ಸರಣಿಯು ಚಿತ್ರರಂಗದ ಒಳಗಿನ ಬದುಕು ಮತ್ತು ಬಾಲಿವುಡ್‌ನ ಏರಿಳಿತಗಳ ಕಥೆಯನ್ನು ಹೊಂದಿದ್ದು, ಆರು ಭಾಗಗಳನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ.
ಕೇವಲ ನಿರ್ದೇಶನ ಮಾತ್ರವಲ್ಲದೆ ಆರ್ಯನ್ ಅವರು ಈ ಸರಣಿಗೆ ಕಥೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಲಕ್ಷ್ಯ ಲಾಲ್ವಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶಾರುಖ್ ಖಾನ್, ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಅವರಂತಹ ದಿಗ್ಗಜ ನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

