
ಆಲಿಯಾ ಭಟ್ ಸಹೋದರಿ ಶಹೀನ್ ಭಟ್ ಹಾಗೂ ಇಶಾನ್ ಮೆಹ್ರಾ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ
Alia Bhatt| ಆಲಿಯಾ ಭಟ್ ಅಕ್ಕ ಶಾಹೀನ್ ನಿಶ್ಚಿತಾರ್ಥ- ಫೋಟೋಗಳು ವೈರಲ್
ಆಲಿಯಾ ಭಟ್ ಸಹೋದರಿ ಶಹೀನ್ ಭಟ್ ಹಾಗೂ ಇಶಾನ್ ಮೆಹ್ರಾ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ಈ ಸುದ್ಧಿ ಕೇಳಿ ಆಲಿಯಾ ಭಟ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಫೋಟೋಗಳು ಈಗ ವೈರಲ್ ಆಗಿವೆ.
ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಅವರ ಸಹೋದರಿ ಹಾಗೂ ಲೇಖಕಿ ಶಹೀನ್ ಭಟ್ ಅವರು ತಮ್ಮ ಬಹುಕಾಲದ ಗೆಳೆಯ ಇಶಾನ್ ಮೆಹ್ರಾ ಅವರೊಂದಿಗೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆ ಶಹೀನ್ ಅವರು ಇನ್ಸ್ಟಾಗ್ರಾಮ್ ಮೂಲಕ ತಮ್ಮ ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಈ ಸಂತಸದ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಶಹೀನ್ ಭಟ್ ಅವರು ತಮ್ಮ ಭಾವಿ ಪತಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಫೋಟೋಗಳನ್ನು ಹಂಚಿಕೊಂಡು, "ನಾವು ಒಬ್ಬರನ್ನೊಬ್ಬರು ಇಷ್ಟಪಡುವ ವಿಷಯದಲ್ಲಿ ಸ್ವಲ್ಪ ಅತಿಯಾಗಿ ಹೋಗಿರಬಹುದು" ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಆಲಿಯಾ ಭಟ್ ಅತ್ಯಂತ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಶಹೀನ್ ಅವರ ಪೋಸ್ಟ್ ಅನ್ನು ರೀ-ಶೇರ್ ಮಾಡಿರುವ ಆಲಿಯಾ, "ನಾನು ಪ್ರಸ್ತುತ ಆನಂದಬಾಷ್ಪ ಸುರಿಸುತ್ತಿದ್ದೇನೆ" ಎಂದು ಬರೆಯುವ ಮೂಲಕ ತಮ್ಮ ಸಹೋದರಿಯ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಹೋದರಿಯ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಆಲಿಯಾ, ನಿಮ್ಮ ಮೇಲೆ ಪ್ರೀತಿಯ ಸುರಿಮಳೆಗರೆಯುತ್ತೇನೆ ಎಂದು ಹೇಳಿದ್ದಾರೆ.
ಯಾರು ಇಶಾನ್ ಮೆಹ್ರಾ?
ಶಹೀನ್ ಅವರ ಕೈ ಹಿಡಿಯಲಿರುವ ಇಶಾನ್ ಮೆಹ್ರಾ ಅವರು ಮಾಜಿ ಅಂತರಾಷ್ಟ್ರೀಯ ಈಜುಗಾರರಾಗಿದ್ದು, ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈಶಾನ್ ಮೆಹ್ರಾ ವೃತ್ತಿಪರ ಫಿಟ್‌ನೆಸ್ ತರಬೇತುದಾರ. ಅವರು ಮುಂಬೈನ ಪ್ರಖ್ಯಾತ ಫಿಟ್‌ನೆಸ್ ಸೆಂಟರ್ 'SOHFIT' ನಲ್ಲಿ ಕೆಲಸ ಮಾಡುತ್ತಿದ್ದಾರೆ. ಫಿಟ್‌ನೆಸ್ ಕ್ಷೇತ್ರಕ್ಕೆ ಬರುವ ಮೊದಲು ಅವರು ರಾಷ್ಟ್ರ ಮಟ್ಟದ ಈಜುಗಾರರಾಗಿದ್ದರು. ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಶಿಕ್ಷಣ
ಶಹೀನ್ ಅಥ್ಲೆಟಿಕ್ ಟ್ರೂತ್ ಗ್ರೂಪ್ ನಿಂದ ಪ್ರಮಾಣೀಕೃತ ಕೋಚ್ ಆಗಿದ್ದು, ಕ್ರೀಡಾಪಟುಗಳ ಸ್ಟ್ರೆಂತ್ ಟ್ರೈನಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ.
ಪ್ರೀತಿ ಚಿಗುರಿದ್ದು ಎಲ್ಲಿ?
ವರದಿಗಳ ಪ್ರಕಾರ, ಈ ಜೋಡಿಯ ಭೇಟಿಯಾಗಿದ್ದು ಜಿಮ್‌ನಲ್ಲಿ. ಆಲಿಯಾ ಭಟ್ ಅವರು ತರಬೇತಿ ಪಡೆಯುವ ಅದೇ ಜಿಮ್‌ನಲ್ಲಿ ಈಶಾನ್ ಕೋಚ್ ಆಗಿದ್ದರು. ಶಾಹೀನ್ ಕೂಡ ಅಲ್ಲಿಗೆ ಹೋಗುತ್ತಿದ್ದಾಗ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿದೆ. 2025ರಲ್ಲಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಬಂಧವನ್ನು ಈ ಜೋಡಿ ಅಧಿಕೃತಗೊಳಿಸಿತ್ತು.
ಆಸ್ತಿ ಮತ್ತು ಕುಟುಂಬ
ಈಶಾನ್ ಮೆಹ್ರಾ ಅವರು ತಮ್ಮ ವೈಯಕ್ತಿಕ ಜೀವನವನ್ನು ಗುಟ್ಟಾಗಿ ಇಟ್ಟಿದ್ದಾರೆ. ಅವರ ನಿವ್ವಳ ಆಸ್ತಿಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಮುಂಬೈನ ಗಣ್ಯರಿಗೆ ತರಬೇತಿ ನೀಡುವ ಮೂಲಕ ಅವರು ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದಾರೆ. ಸದ್ಯಕ್ಕೆ ಈ ಜೋಡಿಯ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.ಬಾಲಿವುಡ್‌ನ ಅತ್ಯಂತ ಸರಳ ಹಾಗೂ ಪ್ರೀತಿಪಾತ್ರ ಜೋಡಿಗಳಲ್ಲಿ ಒಂದಾಗಿರುವ ಶಾಹೀನ್ ಮತ್ತು ಈಶಾನ್ ಅವರ ಹೊಸ ಜೀವನಕ್ಕೆ ಅಭಿಮಾನಿಗಳು ಹರಸುತ್ತಿದ್ದಾರೆ.
ಭಟ್ ಕುಟುಂಬದ ಈ ಸಂತಸದ ಕ್ಷಣಕ್ಕೆ ಬಾಲಿವುಡ್ ಗಣ್ಯರು ಶುಭ ಹಾರೈಸಿದ್ದಾರೆ. ಅನನ್ಯಾ ಪಾಂಡೆ, ಪರಿಣಿತಿ ಚೋಪ್ರಾ, ಅರ್ಜುನ್ ಕಪೂರ್ ಮತ್ತು ನೀತು ಕಪೂರ್ ಸೇರಿದಂತೆ ಹಲವರು ಈ ಜೋಡಿಗೆ ಶುಭಕೋರಿದ್ದಾರೆ. ಶಹೀನ್ ಭಟ್ ಸದ್ಯ ತಮ್ಮ ತಂಗಿ ಆಲಿಯಾ ಭಟ್ ಅವರ 'ಎಟರ್ನಲ್ ಸನ್ ಶೈನ್' ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

